* ವೈದ್ಯಕೀಯ ವಿದ್ಯಾರ್ಥಿಗಳ ಮೊದಲ ವರ್ಷದ ಪಠ್ಯದ ಭಾಗವಾಗಿ ಹಿಂದುತ್ವದ ಪ್ರತಿಪಾದಕರ ಪಾಠ* ವೈದ್ಯ ವಿದ್ಯಾರ್ಥಿಗಳಿಗೆ ಹಿಂದುತ್ವ ಪ್ರತಿಪಾದಕರು, ಅಂಬೇಡ್ಕರ್‌ ಚಿಂತನೆ ಬೋಧ​ನೆ* ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ವೈದ್ಯಕೀಯ ನೈತಿಕತೆಯನ್ನು ಬಿತ್ತಲು ಈ ನಿರ್ಧಾರ 

ಭೋಪಾಲ್‌(ಸೆ.06): ವೈದ್ಯಕೀಯ ವಿದ್ಯಾರ್ಥಿಗಳ ಮೊದಲ ವರ್ಷದ ಪಠ್ಯದ ಭಾಗವಾಗಿ ಹಿಂದುತ್ವದ ಪ್ರತಿಪಾದಕರಾದ ಆರ್‌ಎಸ್‌ಎಸ್‌ ಸಂಸ್ಥಾಪಕ ಕೆ.ಬಿ.ಹೆಡಗೇವಾರ್‌, ಜನಸಂಘದ ನಾಯಕ ದೀನ್‌ ದಯಾಳ್‌ ಉಪಾಧ್ಯಾಯ, ಸ್ವಾಮಿ ವಿವೇಕಾನಂದ ಮತ್ತು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಚಿಂತನೆ, ಮೌಲ್ಯ, ತತ್ವಗಳನ್ನು ಅಳವಡಿಸಲು ಮಧ್ಯಪ್ರದೇಶ ಸರ್ಕಾರ ನಿರ್ಧರಿಸಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ವೈದ್ಯಕೀಯ ನೈತಿಕತೆಯನ್ನು ಬಿತ್ತಲು ಈ ನಿರ್ಧಾರ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಉನ್ನತ ಶಿಕ್ಷಣ ಸಚಿವ ವಿಶ್ವಾಸ್‌ ಸಾರಂಗ್‌, ‘ನೈತಿಕ ಶಿಕ್ಷಣ ವಿದ್ಯಾರ್ಥಿಗಳ ಮೊದಲ ವರ್ಷದ ಶಿಕ್ಷಣದ ಭಾಗವಾಗಬೇಕೆಂದು ಭಾರತೀಯ ವೈದ್ಯಕೀಯ ಮಂಡಳಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೆ.ಬಿ. ಹೆಡ​ಗೇವಾರ್‌, ದೀನ್‌ ದಯಾಳ್‌ ಉಪಾಧ್ಯಾಯ, ಸ್ವಾಮಿ ವಿವೇಕಾನಂದ ಮತ್ತು ಅಂಬೇಡ್ಕರ್‌ ಅವರ ತತ್ವ, ನೈತಿಕತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುವುದು.

ಇದರ ಜೊತೆಗೆ ಮಹರ್ಷಿ ಚಕ್ರ ಮತ್ತು ಶಸ್ತ್ರಚಿಕಿತ್ಸೆಯ ಪಿತಾಮಹ ಎಂದೇ ಬಣ್ಣಿತ ಸುಶ್ರುತನ ಕುರಿತ ಅಂಶಗಳನ್ನೂ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು ಎಂದು ತಿಳಿಸಿದ್ದಾರೆ.