ಮುಂಬೈ(ಮೇ.11): ಮಟ್ಕಾ ದಂಧೆ ಮೂಲಕ ಮುಂಬೈ ಬೆಟ್ಟಿಂಗ್‌ ಲೋಕದಲ್ಲಿ ‘ಮಟ್ಕಾ ಕಿಂಗ್‌’ ಎಂದೇ ಕರೆಸಿಕೊಂಡಿದ್ದ ರತನ್‌ ಖತ್ರಿ ಅಲಿಯಾಸ್‌ ರತನ್‌ ಮಟ್ಕಾ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬ ಮೂಲಗಳು ಭಾನುವಾರ ತಿಳಿಸಿದೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಭಾರತದಲ್ಲಿ ಮಟ್ಕಾ ದಂಧೆಯನ್ನು ಕಟ್ಟಿಬೆಳೆಸಿದ್ದ ಈತ 1960ರ ದಶಕದಲ್ಲಿ ಮುಂಬೈ ಬೆಟ್ಟಿಂಗ್‌ ಸಾಮ್ರಾಜ್ಯದ ಕಿಂಗ್‌ ಪಿನ್‌ ಆಗಿದ್ದ. 1947ರ ವಿಭಜನೆ ವೇಳೆ ಪಾಕಿಸ್ತಾನದ ಕರಾಚಿಯಿಂದ ಮುಂಬೈಗೆ ಬಂದು ದಂಧೆಯಲ್ಲಿ ತೊಡಗಿಸಿಕೊಂಡಿದ್ದ. ಆರಂಭದಲ್ಲಿ ಬುಕ್ಕಿಯೊಬ್ಬನ ಸಹಾಯಕನಾಗಿ ದಂಧೆಗೆ ಇಳಿದಿದ್ದ ಈತ, ಬಳಿಕ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದ.

ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ಚಳಿ ಬಿಡಿಸಿದ ಮಹಿಳೆ!

ಈತನಿಂದ ಮನೆಹಾಳು ಆಟ ಎಂದೇ ಕುಖ್ಯಾತಿಯಾಗಿರುವ ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ನಂಬರ್ ಗೇಮ್ ಹಿಂದೆ ಬಿದ್ದು ಎದ್ದವರು ಕಡಿಮೆ. ನಗರ, ಪಟ್ಟಣ, ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಮಟ್ಕಾ ಅಡ್ಡಾಗಳಿವೆ. ಬಾಂಬೆಯಿಂದ ಶುರು ಮಾಡಿದರೇ ದೇಶದ ತುದಿ ರಾಜ್ಯ ಪಂಜಾಬ್​​ವರೆಗೂ ಒಸಿ ದಂಧೆ ಅವ್ಯಾಹತವಾಗಿ ಹರಡಿದೆ.

"