Asianet Suvarna News Asianet Suvarna News

ಕಾಂಗ್ರೆಸ್‌ಗೆ ನಿಷೇಧಿತ ಪಿಎಫ್‌ಐನ ರಾಜಕೀಯ ಮುಖವಾಣಿ ಎಸ್‌ಡಿಪಿಐ ಬೆಂಬಲ!

ದೇಶ ವಿರೋಧಿ ಕೃತ್ಯಗಳ ಹಿನ್ನೆಲೆಯಲ್ಲಿ ನಿಷೇಧಿಸಲ್ಪಟ್ಟಿರುವ ಪಾಪ್ಯುಲರ್ ನೇತೃತ್ವದ ಯುಡಿಎಫ್ ಕೂಟ ಫ್ರೆಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ರಾಜಕೀಯ ಮುಖವಾಣಿಯಾದ ಎಸ್‌ಡಿಪಿಐ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಘೋಷಿಸಿದೆ. 

Massive Row In Kerala As BJP Takes On Congress For Taking Support From PFI Linked SDPI gvd
Author
First Published Apr 3, 2024, 7:03 AM IST

ಕೇರಳ (ಏ.03): ದೇಶ ವಿರೋಧಿ ಕೃತ್ಯಗಳ ಹಿನ್ನೆಲೆಯಲ್ಲಿ ನಿಷೇಧಿಸಲ್ಪಟ್ಟಿರುವ ಪಾಪ್ಯುಲರ್ ನೇತೃತ್ವದ ಯುಡಿಎಫ್ ಕೂಟ ಫ್ರೆಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ರಾಜಕೀಯ ಮುಖವಾಣಿಯಾದ ಎಸ್‌ಡಿಪಿಐ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಘೋಷಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕೇರಳ ಎಸ್‌ಡಿಪಿಐ ಅಧ್ಯಕ್ಷ ಮೂವತ್ತುಪುಳ ಅಶ್ರಫ್, 'ಧರ್ಮದ ಆಧಾರದಲ್ಲಿ ಜನರಿಗೆ ಪೌರತ್ವ ನೀಡಲು ಬಿಜೆಪಿ ಕಾನೂನು ರೂಪಿಸುತ್ತಿದೆ. 

ನಮ್ಮ ಸಂವಿಧಾನವನ್ನೇ ಬಿಜೆಪಿ ಪ್ರಶ್ನಿಸುತ್ತಿದೆ. ಹೀಗಾಗಿ ಆ ಪಕ್ಷದ ವಿರುದ್ದ ಹೋರಾಡುತ್ತಿರುವ ಕಾಂಗ್ರೆಸ್‌ ನೇತೃತ್ವದ ಯುಡಿಎಫ್ ಕೂಟ ಬೆಂಬಲಿಸಲು ನಿರ್ಧರಿಸಿದ್ದೇವೆ' ಎಂದಿದ್ದಾರೆ. ಈ ಬೆಂಬಲವನ್ನು ಕಾಂಗ್ರೆಸ್ ಕೂಡಾ ಸ್ವಾಗತಿಸಿದೆ. ಈ ನಡುವೆ ಎಸ್‌ಡಿಪಿಐ ಬೆಂಬಲ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್, ಡಿಪಿಐ ಮತ್ತು ಪಿಎಫ್‌ಐ ದೇಶ ಒಡೆಯಲು ಪ್ರಯತ್ನಿಸಿದ್ದವು. ಹಿಂದೂ, ಕ್ರೈಸ್ತರ ಹತ್ಯೆ, ದೇವಾಲಯ, ಚರ್ಚು ನಾಶ ಇವುಗಳ ಗುರಿ. ಇಂಥ ಶಕ್ತಿಗಳು ಕಾಂಗ್ರೆಸ್ ಬೆಂಬಲ ಘೋಷಿಸಿವೆ. ಇದು ಆಘಾತಕಾರಿ ಸಂಗತಿ. 

ಆರ್ಥಿಕ ಅಶಿಸ್ತೇ ಈ ಪರಿಸ್ಥಿತಿಗೆ ಕಾರಣ: ಕೇರಳಕ್ಕೆ ಸುಪ್ರೀಂಕೋರ್ಟ್‌ ತಪರಾಕಿ

ಈ ಬಗ್ಗೆ ರಾಹುಲ್ ನಿಲುವು ಏನು ಏನೆಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ ಸಿಪಿಎಂ ಕೂಡಾ ಈ ಬೆಳವಣಿಗೆ ಬಗ್ಗೆ ರಾಜ್ಯದ ಜನತೆ ಚುನಾವ ಣೆಯಲ್ಲಿ ಯುಡಿಎಫ್ ಮೈತ್ರಿಕೂಟಕ್ಕೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ವೇಣುಗೋಪಾಲ್ 'ನಾವು ಎಸ್‌ಡಿಪಿಐನಿಂದ ಸಹಾಯ ಕೇಳಿಲ್ಲ. ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಕೇಳುವುದು ಗೆಲುವಿಗಾಗಿ, ಆದರೆ ಈ ಹಂತದಲ್ಲಿ ಪಕ್ಷದ ರಾಜಕೀಯ ಸಿದ್ಧಾಂತಗಳ ಜೊತೆಗೆ ರಾಜಿ ಮಾಡಿಕೊಳ್ಳುವುದಿಲ್ಲ' ಎಂದಿದ್ದಾರೆ.

Follow Us:
Download App:
  • android
  • ios