ಚಂಡೀಗಢ(ನ.22): ಅಣ್ಣ, ತಮ್ಮಂದಿರ ಮಕ್ಕಳು (ಮೊದಲ ಕಸಿನ್ಸ್‌) ಪರಸ್ಪರ ಮದುವೆಯಾಗುವುದು ಕಾನೂನಿಗೆ ವಿರುದ್ಧ ಎಂದು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಆದೇಶ ನೀಡಿದೆ.

ಪ್ರಕರಣವೊಂದರಲ್ಲಿ 21 ವರ್ಷದ ಯುವಕ ತಾನು 17 ವರ್ಷದ ಅಪ್ರಾಪ್ತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ತಮಗೆ ಯುವತಿಯ ಮನೆಯವರಿಂದ ರಕ್ಷಣೆ ಕೊಡಿಸಬೇಕು ಎಂದು ಕೋರ್ಟ್‌ಗೆ ಹೋಗಿದ್ದ. ಅಲ್ಲದೆ, ಆಕೆಗೆ 18 ವರ್ಷವಾದ ಮೇಲೆ ಮದುವೆಯಾಗುವುದಾಗಿಯೂ ತಿಳಿಸಿದ್ದ. ಪ್ರಕರಣದ ವಿಚಾರಣೆಯ ವೇಳೆ, ಆತ ಪ್ರೀತಿಸುತ್ತಿರುವ ಯುವತಿ ಆತನ ಚಿಕ್ಕಪ್ಪನ ಮಗಳು ಎಂಬುದು ಕೋರ್ಟ್‌ಗೆ ತಿಳಿಯಿತು. ಈ ಹಿನ್ನೆಲೆಯಲ್ಲಿ ಆದೇಶ ನೀಡಿದ ಕೋರ್ಟ್‌, ‘ಯುವಕ ಹಾಗೂ ಯುವತಿಯ ಅಪ್ಪಂದಿರು ಅಣ್ಣ-ತಮ್ಮಂದಿರು. ಅಣ್ಣ-ತಮ್ಮಂದಿರ ಮಕ್ಕಳು ಮದುವೆಯಾಗುವುದು ಅಕ್ರಮ’ ಎಂದು ಆದೇಶ ನೀಡಿತು.

ವಯಸ್ಸಾದ್ರೂ ಯಂಗ್‌ ಲುಕ್‌ ಬೇಕಂದ್ರೆ ಹಿಂಗೆಲ್ಲ ಮಾಡ್ಲೇಬಾರ್ದು..!

ಲೂಧಿಯಾನಾದ 21 ವರ್ಷದ ಯುವಕನೊಬ್ಬ ತನ್ನ ಅಪ್ರಾಪ್ತ ಪುತ್ರಿಯನ್ನು ಅಪಹರಣ ಮಾಡಿದ್ದಾನೆಂದು ಪೊಲೀಸರಿಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಯುವಕ ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಅದರ ವಿಚಾರಣೆಯ ವೇಳೆ, ತಮ್ಮಿಬ್ಬರಿಗೆ ಜೀವ ಬೆದರಿಕೆಯಿದೆ, ರಕ್ಷಣೆ ನೀಡಬೇಕು ಎಂದೂ ಕೋರಿದ್ದ. ಈ ವೇಳೆ, ದೂರುದಾರರ ಪರ ವಕೀಲರು ‘ಅರ್ಜಿದಾರ ಯುವಕ ಹಾಗೂ ಅಪ್ರಾಪ್ತ ಯುವತಿ ಲಿವ್‌-ಇನ್‌ ಸಂಬಂಧ ಹೊಂದಿದ್ದಾರೆ. ಇವರಿಬ್ಬರೂ ಅಣ್ಣ-ತಮ್ಮಂದಿರ ಮಕ್ಕಳು’ ಎಂದು ಕೋರ್ಟ್‌ಗೆ ತಿಳಿಸಿದರು. ಆಗ, ಅಣ್ಣ-ತಮ್ಮಂದಿರ ಮಕ್ಕಳು ಮದುವೆಯಾಗುವುದು ಅಕ್ರಮ ಎಂದು ಹೇಳಿದ ಕೋರ್ಟ್‌, ಯುವಕ ಮತ್ತು ಯುವತಿಯ ವಿಷಯದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಕ್ಕೆ ತಾನು ಅಡ್ಡ ಬರುವುದಿಲ್ಲ ಎಂದು ಹೇಳಿತು. ಆದರೆ, ಅರ್ಜಿದಾರನಿಗೆ ಹಾಗೂ ಯುವತಿಗೆ ಸರ್ಕಾರ ರಕ್ಷಣೆ ನೀಡಬೇಕೆಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

#Feelfree: ಮದುವೆಯಾಗಿ ವರ್ಷವಾದರೂ ಆಕೆ ಬೆತ್ತಲಾಗಿಲ್ಲ

ಈ ವೇಳೆ, ದೂರುದಾರರ ಪರ ವಕೀಲರು ‘ಅಣ್ಣ-ತಮ್ಮಂದಿರ ಮಕ್ಕಳು ವಿವಾಹವಾಗುವುದು ನಿಷಿದ್ಧ ಎಂದು ಹೇಳಿದ ಮೇಲೆ ಇವರು ಲಿವ್‌-ಇನ್‌ ಸಂಬಂಧದಲ್ಲಿ ಇರುವುದು ಅನೈತಿಕ ಹಾಗೂ ಸಾಮಾಜಿಕವಾಗಿ ತಪ್ಪಾಗುತ್ತದೆ’ ಎಂದು ವಾದಿಸಿದರು. ಈ ಕುರಿತು ಪರಾಮರ್ಶೆ ನಡೆಸಲು ಸ್ವಲ್ಪ ಸಮಯ ಬೇಕು ಎಂದು ಹೇಳಿದ ಕೋರ್ಟ್‌, ವಿಚಾರಣೆಯನ್ನು ಜನವರಿಗೆ ಮುಂದೂಡಿತು.