ಅನಂತ್ ಅಂಬಾನಿ ಮದುವೆಯಲ್ಲಿ ಜುಕರ್‌ಬರ್ಗ್-ಬಿಲ್ ಗೇಟ್ಸ್ ಭೇಟಿ, ಹರಿದಾಡುತ್ತಿದೆ ಮೀಮ್ಸ್!
ಅನಂತ್ ಅಂಬಾನಿ ರಾಧಿಕಾ ಮದುವೆಯಲ್ಲಿ ದೇಶ ವಿದೇಶಗಳ ಗಣ್ಯರು ಪಾಲ್ಗೊಂಡಿದ್ದಾರೆ. ಈ ಪೈಕಿ ಮಾರ್ಕ್ ಜುಕರ್‌ಬರ್ಗ್ ಹಾಗೂ ಬಿಲ್ ಗೇಟ್ಸ್ ಕೂಡ ಪಾಲ್ಗೊಂಡಿದ್ದಾರೆ. ಇಬ್ಬರು ದಿಗ್ಗಜರು ಅಂಬಾನಿ ಮದುವೆಯಲ್ಲಿ ಭೇಟಿಯಾಗಿದ್ದಾರೆ. ಆದರೆ ಇವರಿಬ್ಬರ ಭೇಟಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಬಗೆ ಬಗೆಯ ಮೀಮ್ಸ್ ಹರಿದಾಡುತ್ತಿದೆ.
ಜಾಮ್ನಗರ್(ಮಾ.04) ಉದ್ಯಮಿ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅದ್ಧೂರಿ ಮದುವೆ ಜಾಮ್ನಗರದಲ್ಲಿ ಆಯೋಜಿಸಲಾಗಿದೆ. ಪ್ರಿ ವೆಡ್ಡಿಂಗ್, ಮ್ಯಾರೇಜ್ ಕಾರ್ಯಕ್ರಮಕ್ಕೆ ದೇಶ ವಿದೇಶದ ಗಣ್ಯರು ಪಾಲ್ಗೊಂಡಿದ್ದಾರೆ. ಬಾಲಿವುಡ್‌ನ ಬಹುತೇಕರು ಮದುವೆಗೆ ಹಾಜರಾಗಿದ್ದಾರೆ. ಭಾರತದ ಉದ್ಯಮಿಗಳು, ಗಣ್ಯರು ಮಾತ್ರವಲ್ಲ, ವಿಶ್ವದ ಟಾಪ್ ಗಣ್ಯರು ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಈ ಪೈಕಿ ಫೇಸ್‌ಬುಕ್ ಸಿಇಒ ಮಾರ್ಕ್ ಜುಗರ್‌ಬರ್ಗ್ ಹಾಗೂ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಕೂಡ ಪಾಲ್ಗೊಂಡಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಈ ದಿಗ್ಗರು ಭೇಟಿಯಾಗಿದ್ದಾರೆ. ಇವರ ಭೇಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ಇದೀಗ ಮೀಮ್ಸ್ ಹರಿದಾಡುತ್ತಿದೆ.
ಟೆಕ್ ದಿಗ್ಗಜರಾಗಿ ಗುರುತಿಸಿಕೊಂಡಿರುವ ಜುಗರ್‌ಬರ್ಗ್ ಹಾಗೂ ಬಿಲ್ ಗೇಟ್ಸ್ ವಿಶ್ವದ ಜನಪ್ರಿಯ ಉದ್ಯಮಿ ಮಾತ್ರವಲ್ಲ, ಶ್ರೀಮಂತರು ಕೂಡ ಹೌದು. ಅನಂತ್ ಅಂಬಾನಿ-ರಾಧಿಕಾ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಈ ಗಣ್ಯರು ಪಾಲ್ಗೊಂಡಿದ್ದಾರೆ. ಇಬ್ಬರು ದಿಗ್ಗಜರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನೆಟ್ಟಿಗರು ಹಲವು ರೀತಿಯ ಮೀಮ್ಸ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಅನಂತ್ ಅಂಬಾನಿ ಜೊತೆ ಆಲಿಯಾ ಪುತ್ರಿ ಕ್ಯೂಟ್ ಮಾತುಕತೆ: ಈಗಲೇ ಸ್ಕೆಚ್ ಹಾಕಿದ್ದಾಳೆ ಎಂದ ಫ್ಯಾನ್ಸ್...
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವ್ಯಾಟ್ಸ್ಆ್ಯಪನಲ್ಲಿ ನಿಮಗೆ ಏನಾದರು ಸಮಸ್ಯೆ ಆಗಿದ್ದರೆ, ತೊಂದರೆಗಳಿದ್ದರೆ ನೇರವಾಗಿ ಮಾರ್ಕ್ ಜುಕರ್‌ಬರ್ಗ್ ಭೇಟಿಯಾಗಬಹುದು. ಜಾಮ್ನಗರ್‌ದಲ್ಲಿ ಜುಕರ್‌ಬರ್ಗ್ ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಿ. ಇನ್ನು ಮೈಕ್ರೋಸಾಫ್ಟ್ ಕುರಿತು ಏನಾದರು ತಾಂತ್ರಿಕ ಸಮಸ್ಯೆಗಳಿದ್ದರೂ ನೇರವಾಗಿ ಭೇಟಿಯಾಗಿ ಪರಿಹರಿಸಲು ಸಾಧ್ಯ. ಇವರಿಬ್ಬರು ಜಾಮ್ನಗರಕ್ಕೆ ಆಗಮಿಸಲು ಕಾರಣ ಮುಕೇಶ್ ಅಂಬಾನಿ. ಇಬ್ಬರು ದಿಗ್ಗಜರ ಭಾರತ ಭೇಟಿಯ ಲಾಭವನ್ನು ಪಡೆದುಕೊಳ್ಳಿ. ಈ ಮೂಲಕ ನಿಮ್ಮ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಎಂದು ಮೀಮ್ಸ್ ಮಾಡಲಾಗಿದೆ.
ಅಮೀರ್ ಖಾನ್ ಅಭಿನಯದ 3 ಈಡಿಯೆಟ್ಸ್ ಚಿತ್ರದಲ್ಲಿ ಹಮ್ ಸೈನ್ಸ್ ಕೇ ತರಫ್ ಹಾಯ್ ಅನ್ನೋ ಡೈಲಾಗ್ ಮೂಲವಾಗಿಟ್ಟುಕೊಂಡು, ಅದೇ ಚಿತ್ರದ ಫೋಟೋವನ್ನು ತೆಗೆದು ಜುಕರ್‌ಬರ್ಗ್ ಹಾಗೂ ಬಿಲ್ ಗೇಟ್ಸ್ ಮುಖಗಳನ್ನು ಪೇಸ್ಟ್ ಮಾಡಿ ಮೀಮ್ಸ್ ಮಾಡಲಾಗಿದೆ. ಈ ಮೀಮ್ಸ್ ಭಾರಿ ವೈರಲ್ ಆಗಿದೆ. ಅನಂತ್ ಅಂಬಾನಿ ಮದುವೆಗೆ ಆಗಮಿಸಿರುವ ಬಿಲ್ ಗೇಟ್ಸ್ ಹಾಗೂ ಜುಕರ್‌ಬರ್ಗ್ ಅರನ್ನು ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿಯಾಗಿ ಮಾತುಕತೆ ಎಂದು ಕೆಲ ಫೋಟೋಗಳನ್ನು ಹಂಚಿಕೊಂಡು ಮೀಮ್ಸ್ ಮಾಡಲಾಗಿದೆ.
ಮದುವೆ ಸಂಭ್ರಮದಲ್ಲಿರುವ ಅಂಬಾನಿ ಕುಟುಂಬದಲ್ಲಿದೆ ದುಬಾರಿ ಬಣ್ಣ ಬದಲಿಸುವ ರೋಲ್ಸ್ ರಾಯ್ಸ್!
ಹಲವು ರೀತಿಯ ಮೀಮ್ಸ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅಂಬಾನಿ ಮದುವೆ ಜೊತೆಗೆ ಜುಕರ್‌ಬರ್ಗ್ ಹಾಗೂ ಬಿಲ್ ಗೇಟ್ಸ್ ಇದೀಗ ವೈರಲ್ ಆಗಿದ್ದಾರೆ.