Asianet Suvarna News Asianet Suvarna News

ಬೆಂಗ್ಳೂ​ರು ಆಕ್ಸಿಜನ್‌ ಎಕ್ಸ್‌​ಪ್ರೆಸ್‌ ರೈಲಿನ ಮಹಿಳಾ ಚಾಲಕಿಗೆ ಮೋದಿ ಭೇಷ್‌!

* ಮೇ 21ರಂದು ಜಾರ್ಖಂಡ್‌ನ ಜೆಮ್‌​ಶೆ​ಡ್‌​ಪು​ರ​ದಿಂದ ಕರ್ನಾ​ಟ​ಕದ ಬೆಂಗ​ಳೂ​ರಿಗೆ ಪ್ರಾಣ​ವಾ​ಯು​ ಆಮ್ಲ​ಜ​ನ​ಕವನ್ನೊ​ಳ​ಗೊಂಡ ‘ಆಮ್ಲ​ಜ​ನಕ ಎಕ್ಸ್‌​ಪ್ರೆಸ್‌’ ರೈಲು ಆಗಮನ

* ಆಮ್ಲ​ಜ​ನಕ ಎಕ್ಸ್‌​ಪ್ರೆಸ್‌’ ರೈಲನ್ನು ಚಾಲನೆ ಮಾಡಿಕೊಂಡು ಬಂದ ಬೆಂಗ​ಳೂ​ರಿನ ಮಹಿಳಾ ಲೋಕೋ ಪೈಲಟ್‌ ಸಿರೀಶಾ ಗಜಿನಿ ಅವ​ರ ಕಾರ್ಯ​ವೈ​ಖರಿಗೆ ಮೋದಿ 

* ಸಿರೀಶಾ ಅವ​ರಿಗೆ ಕರೆ ಮಾಡಿ ಮಾತ​ನಾ​ಡಿ​ರುವ 2 ನಿಮಿಷ 8 ಸೆಕೆಂಡ್‌ ಸಂಭಾ​ಷ​ಣೆಯು ಭಾನು​ವಾರ ಬೆಳಗ್ಗೆ ರೇಡಿಯೋ ಮತ್ತು ಟೀವಿ ವಾಹಿ​ನಿ​ಗ​ಳಲ್ಲಿ ಪ್ರಸಾ​ರ

Mann ki Baat PM Modi hails Karnataka woman for piloting Oxygen Express pod
Author
Bangalore, First Published May 31, 2021, 9:57 AM IST

ಬೆಂಗ​ಳೂ​ರು(ಮೇ.31): ಮೇ 21ರಂದು ಜಾರ್ಖಂಡ್‌ನ ಜೆಮ್‌​ಶೆ​ಡ್‌​ಪು​ರ​ದಿಂದ ಕರ್ನಾ​ಟ​ಕದ ಬೆಂಗ​ಳೂ​ರಿಗೆ ಪ್ರಾಣ​ವಾ​ಯು​ ಆಮ್ಲ​ಜ​ನ​ಕವನ್ನೊ​ಳ​ಗೊಂಡ ‘ಆಮ್ಲ​ಜ​ನಕ ಎಕ್ಸ್‌​ಪ್ರೆಸ್‌’ ರೈಲನ್ನು ಚಾಲನೆ ಮಾಡಿಕೊಂಡು ಬಂದ ಬೆಂಗ​ಳೂ​ರಿನ ಮಹಿಳಾ ಲೋಕೋ ಪೈಲಟ್‌ ಸಿರೀಶಾ ಗಜಿನಿ ಅವ​ರ ಕಾರ್ಯ​ವೈ​ಖರಿ ಬಗ್ಗೆ ಪ್ರಧಾ​ನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತ​ಪ​ಡಿ​ಸಿ​ದ್ದಾರೆ.

ಪ್ರಧಾನಿ ಮೋದಿ ಅವರು ಸಿರೀಶಾ ಅವ​ರಿಗೆ ಕರೆ ಮಾಡಿ ಮಾತ​ನಾ​ಡಿ​ರುವ 2 ನಿಮಿಷ 8 ಸೆಕೆಂಡ್‌ ಸಂಭಾ​ಷ​ಣೆಯು ಭಾನು​ವಾರ ಬೆಳಗ್ಗೆ ರೇಡಿಯೋ ಮತ್ತು ಟೀವಿ ವಾಹಿ​ನಿ​ಗ​ಳಲ್ಲಿ ಪ್ರಸಾ​ರ​ವಾ​ಗಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ಈ 2 ನಿಮಿ​ಷದ ಸಂಭಾ​ಷಣೆ ವೇಳೆ ಮೋದಿ ಅವರು, ‘ಸಿರೀಶಾ ಜೀ, ನೀವು ಮಹೋ​ನ್ನತ ಕಾರ್ಯ​ದಲ್ಲಿ ನಿಮ್ಮನ್ನು ತೊಡ​ಗಿ​ಸಿ​ಕೊಂಡಿ​ದ್ದೀರಿ. ಕೊರೋನಾ ವಿರು​ದ್ಧದ ಹೋರಾ​ಟ​ದಲ್ಲಿ ನಿಮ್ಮಂತೆ ಹಲವು ಮಹಿ​ಳೆ​ಯರು ಮುಂದೆ ಬಂದು ದೇಶಕ್ಕೆ ಶಕ್ತಿ ತುಂಬಿ​ದ್ದಾರೆ. ನೀವು ಸಹ ನಾರಿ ಶಕ್ತಿಗೆ ಉತ್ತಮ ಉದಾ​ಹ​ರ​ಣೆ​ಯಾ​ಗಿ​ದ್ದೀ​ರಿ’ ಎಂದು ಕೊಂಡಾ​ಡಿ​ದರು.

ನನ್ನ ಪೋಷ​ಕರು ನನ್ನನ್ನು ಹುರಿ​ದುಂಬಿ​ಸಿ​ದರು. ಅವರೇ ನನ್ನ ಈ ಕೆಲ​ಸಕ್ಕೆ ಸ್ಫೂರ್ತಿ ಎಂದು ಮೋದಿ ಅವರ ಪ್ರಶ್ನೆ​ಯೊಂದಕ್ಕೆ ಸಿರೀಶಾ ಉತ್ತ​ರಿ​ಸಿ​ದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios