ಮನ್ ಕಿ ಬಾತ್: ಭಾರತ್ ಕಿ ಬಾತ್: ನಾಳೆ ಹಿಸ್ಟರಿ ಟಿವಿಯಲ್ಲಿ ಪ್ರಸಾರವಾಗಲಿದೆ ಸಾಕ್ಷ್ಯಚಿತ್ರ
ಪ್ರಧಾನಿ ನರೇಂದ್ರ ಮೋದಿಯವರು ಶುರು ಮಾಡಿದ್ದ ಮನ್ ಕೀ ಬಾತ್‌ನಿಂದ ಆದ ಪ್ರಭಾವಗಳ ಬಗ್ಗೆ ಸಾಕ್ಷ್ಯಚಿತ್ರವೊಂದು ನಿರ್ಮಾಣವಾಗಿದ್ದು, ಈ ಸಾಕ್ಷ್ಯಚಿತ್ರ ನಾಳೆ ರಾತ್ರಿ 8 ಗಂಟೆಗೆ ಹಿಸ್ಟರಿ ಟಿವಿಯಲ್ಲಿ ಪ್ರಸಾರವಾಗಲಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶುರು ಮಾಡಿದ್ದ ಮನ್ ಕೀ ಬಾತ್‌ನಿಂದ ಆದ ಪ್ರಭಾವಗಳ ಬಗ್ಗೆ ಸಾಕ್ಷ್ಯಚಿತ್ರವೊಂದು ನಿರ್ಮಾಣವಾಗಿದ್ದು, ಈ ಸಾಕ್ಷ್ಯಚಿತ್ರ ನಾಳೆ ರಾತ್ರಿ 8 ಗಂಟೆಗೆ ಹಿಸ್ಟರಿ ಟಿವಿಯಲ್ಲಿ ಪ್ರಸಾರವಾಗಲಿದೆ. 2014ರ ಅಕ್ಟೋಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್' ಅನ್ನು ಪ್ರಾರಂಭಿಸಿದ್ದರು. ಈ ರೇಡಿಯೋ ಕಾರ್ಯಕ್ರಮದ ಮೂಲಕ ಅವರು ರಾಷ್ಟ್ರಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ದೇಶದ ನಾಗರಿಕರೊಂದಿಗೆ ಸಂವಾದ ನಡೆಸಿದ್ದರು.
ಈ ಅಪ್ರತಿಮ ಕಾರ್ಯಕ್ರಮವೂ ಈಗ 100 ಸಂಚಿಕೆಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಉಂಟು ಮಾಡಿದ ಪ್ರಭಾವ ಹಾಗೂ ಪರಿಣಾಮಗಳ ಬಗ್ಗೆ ವಿಶೇಷ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ.
'ಮನ್ ಕಿ ಬಾತ್: ಭಾರತ್ ಕಿ ಬಾತ್', ಹೆಸರಿನಲ್ಲಿ ಸಾಕ್ಷ್ಯಚಿತ್ರ ನಿರ್ಮಾಣವಾಗಿದ್ದು, ನಾಳೆ ರಾತ್ರಿ (ಶುಕ್ರವಾರ ಜೂನ್ 2) ರಾತ್ರಿ 8 ಗಂಟೆಗೆ ಹಿಸ್ಟರಿ ಟಿವಿ 18ನಲ್ಲಿ ಮೊದಲ ಬಾರಿ ಪ್ರಸಾರವಾಗಲಿದೆ. 2014 ರಲ್ಲಿ ಮೋದಿಯವರ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮವು ಹೇಗೆ ಹುಟ್ಟಿಕೊಂಡಿತು ಮತ್ತು ಈ ನಿಜವಾದ ಮತ್ತು ಸರಳವಾದ ಕಲ್ಪನೆಯು ಸಂವಾದ ಕಾರ್ಯಕ್ರಮವೂ ದೇಶದ ಮೂಲೆ ಮೂಲೆಗಳನ್ನು ಹೇಗೆ ಮತ್ತು ಏಕೆ ಸಂಪರ್ಕಿಸಲು ಸಾಧ್ಯವಾಯಿತು ಎಂಬ ವಿಶ್ಲೇಷಣೆಯೂ ಈ ಸಾಕ್ಷ್ಯಚಿತ್ರದಲ್ಲಿ ಇರಲಿದೆ.
ಜನರ ಜತೆಗಿರಲು 50 ವರ್ಷ ಹಿಂದೆ ಮನೆ ಬಿಟ್ಟಿದ್ದೆ; ಪ್ರಧಾನಿ ಆದ ಬಳಿಕ ‘ಮನ್ ಕೀ ಬಾತ್’ ಮೂಲಕ ಜನ ಸಂಪರ್ಕ: ಮೋದಿ
ಕಳೆದ ಏಪ್ರಿಲ್ 30 ರಂದು 'ಮನ್ ಕಿ ಬಾತ್' ನ 100 ನೇ ಸಂಚಿಕೆ ಪ್ರಸಾರವಾಗಿತ್ತು. ಈ ಸಾಕ್ಷ್ಯಚಿತ್ರವು ಸಕಾರಾತ್ಮಕತೆ ಮತ್ತು ಸ್ವಾವಲಂಬನೆಗೆ ಜೀವಂತ ಉದಾಹರಣೆಯಾಗಿರುವ ಅಸಂಖ್ಯಾತ ಭಾರತೀಯರನ್ನು ನೆನೆದುಕೊಂಡು ಕೊಂಡಾಡಿದ ರೋಚಕ ಯಾನವನ್ನು ಹೊಂದಿದೆ. ರಾಜಕೀಯವಲ್ಲದ ಈ ಮಾಸಿಕ ರೇಡಿಯೋ ಕಾರ್ಯಕ್ರಮವೂ ದೇಶದ ಪ್ರಮುಖ ಸಂಸ್ಥೆಗಳು, ಪಡೆಗಳು, ಜನರು, ಗ್ರಾಮದ ಹಿರಿಯರು, ಸಮಾಜದ ಗಣ್ಯರು ಸೇರಿದಂತೆ ಪ್ರತಿಯೊಬ್ಬ ಸಾಮಾನ್ಯ ನಾಗರಿಕ ಹಾಗೂ ಪ್ರಧಾನಿ ಮಧ್ವೆ ದ್ವಿಮುಖ ಸಂವಾದಕ್ಕೆ ವೇದಿಕೆ ಒದಗಿಸಿತ್ತು, ಜೊತೆಗೆ ಜನತಾ ಜನಾರ್ಧನ ಎನಿಸಿದ ಸಾಮಾನ್ಯ ನಾಗರಿಕರ ಕಾಳಜಿಗೆ ಧ್ವನಿ ನೀಡಿತ್ತು. ತಮ್ಮ ಹಳ್ಳಿಗಳು ನಗರಗಳು, ಜಿಲ್ಲೆಗಳು ಮತ್ತು ನೆರೆಹೊರೆಗಳನ್ನು ಉತ್ತಮ, ಸ್ವಚ್ಛ ಮತ್ತು ಸುರಕ್ಷಿತಗೊಳಿಸಲು ಶ್ರಮಿಸುವ ಔಟ್-ಆಫ್-ದಿ-ಬಾಕ್ಸ್- ಚಿಂತಕರ ಪ್ರಯತ್ನಗಳನ್ನು ಸಹ ಈ ಕಾರ್ಯಕ್ರಮದ ಮೂಲಕ ಪ್ರಧಾನಿ ಗಮನ ಸೆಳೆದಿದ್ದರು.
ಈ ಸಾಕ್ಷ್ಯಚಿತ್ರವೂ ಪ್ರಧಾನಿಗೆ ಸ್ಪೂರ್ತಿ ನೀಡಿದ ಸಾಮಾನ್ಯರೆನಿಸಿದ ನಾಗರಿಕರ ಬದುಕಿನ ಕಥೆಗಳನ್ನು ಸಹ ದೇಶದ ಮುಂದಿಡಲಿದೆ. ಈ ಮನ್ ಕೀ ಬಾತ್ ಎಂಬ ಸಂವಹನ ವೇದಿಕೆಯು ದುರ್ಗಮ ಪರ್ವತಗಳು ಸೇರಿದಂತೆ ಹಳ್ಳಿಗಾಡಿನಲ್ಲಿ ವಾಸ ಮಾಡುವವರಿಂದ ಹಿಡಿದು ಕಿಕ್ಕಿರಿದ ಜನಸಂದಣಿಯ ನಗರಗಳವರೆಗೆ ಎಲ್ಲೆಡೆ ಭಾರತೀಯರ ಜೀವನದ ಮೇಲೆ ಬೀರಿದ ಪ್ರಭಾವ ಅಮೋಘವಾಗಿದೆ.
ಮನ್ ಕೀ ಬಾತ್‌ಗೆ 100ರ ಸಂಭ್ರಮ: ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನೇರ ಪ್ರಸಾರ; ಪ್ರತಿ ಸಂಚಿಕೆಯೂ ವಿಶೇಷ ಎಂದ ನಮೋ
'ಮನ್ ಕಿ ಬಾತ್' ಮಹಿಳಾ ಸಬಲೀಕರಣ (women empowerment) ಮತ್ತು ಎಲ್ಲರಿಗೂ ಶಿಕ್ಷಣ ಹಾಗೂ ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಪರಿಸರ ಸಂರಕ್ಷಣೆಯವರೆಗೆ ವ್ಯಾಪಕವಾದ ಸಮಸ್ಯೆಗಳತ್ತ ಗಮನ ಹರಿಸಿದೆ. ಈ ಚಿತ್ರದಲ್ಲಿ ನೋಡಿದಂತೆ, ಈ ಪ್ರದರ್ಶನವು ದೇಶೀಯ ಪ್ರವಾಸೋದ್ಯಮದಲ್ಲಿ (domestic tourism) ಹೆಚ್ಚಳಕ್ಕೆ ಕಾರಣವಾಗಲಿದೆ. ಯೋಗದ ಜನಪ್ರಿಯತೆ ಮತ್ತು ಆರೋಗ್ಯಕರ ಜೀವನಕ್ಕೆ ಇದು ಗಣನೀಯ ಕೊಡುಗೆ ನೀಡಿದೆ. ಕೊರೊನಾ ವೈರಸ್ ಸಾಂಕ್ರಾಮಿಕ (Coronavirus pandemic) ಅತ್ಯಂತ ತೀವ್ರವಾಗಿದ್ದ ಸಮಯದಲ್ಲಿ 'ಮನ್ ಕಿ ಬಾತ್' ಭಯವನ್ನು ಕಡಿಮೆ ಮಾಡಲು ಮತ್ತು ನಿಜವಾದ ಮಾಹಿತಿಯನ್ನು ಪ್ರಸಾರ ಮಾಡಲು ಸಹಾಯ ಮಾಡಿದ್ದಲ್ಲದೇ ಲೆಕ್ಕವಿಲ್ಲದಷ್ಟು ಜೀವಗಳನ್ನು ಉಳಿಸಿದೆ.