Asianet Suvarna News Asianet Suvarna News

ಮಣಿಪುರ ಕ್ರೌರ್ಯದ ಮತ್ತಷ್ಟು ಕತೆ ವ್ಯಥೆ: ಯುವ ಪೀಳಿಗೆಗೆ ಪಾರಾಗುವಂತೆ ಹೇಳಿ ಪ್ರಾಣ ಬಿಟ್ಟ ಯೋಧನ ಪತ್ನಿ

ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದ ಬೆತ್ತಲೆ ಪರೇಡ್‌ ದೃಶ್ಯಗಳು ಬಯಲಾಗುತ್ತಿದ್ದಂತೆಯೇ ರಾಜ್ಯದಲ್ಲಿ 3 ತಿಂಗಳಿಂದ ನಡೆದಿರುವ ಇನ್ನಷ್ಟು ಕ್ರೂರ ಕತೆಗಳು ಒಂದೊಂದಾಗಿ ಬೆಳಕಿಗೆ ಬರತೊಡಗಿವೆ.

Manipur violence Miscreants set fire to an 80 year old womans house Freedom fighters wife burnt alive akb
Author
First Published Jul 24, 2023, 10:35 AM IST

ಇಂಫಾಲ್‌: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದ ಬೆತ್ತಲೆ ಪರೇಡ್‌ ದೃಶ್ಯಗಳು ಬಯಲಾಗುತ್ತಿದ್ದಂತೆಯೇ ರಾಜ್ಯದಲ್ಲಿ 3 ತಿಂಗಳಿಂದ ನಡೆದಿರುವ ಇನ್ನಷ್ಟು ಕ್ರೂರ ಕತೆಗಳು ಒಂದೊಂದಾಗಿ ಬೆಳಕಿಗೆ ಬರತೊಡಗಿವೆ. ಕಕ್ಚಿಂಗ್‌ ಜಿಲ್ಲೆಯ ಸೆರೋ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರನ 80 ವರ್ಷದ ಪತ್ನಿಯ ಮನೆಗೆ ಬೀಗ ಜಡಿದ ದುಷ್ಕರ್ಮಿಗಳು ಆಕೆಯನ್ನು ಸಜೀವ ದಹನ ಮಾಡಿದ್ದರು. ತನ್ನ ಪ್ರಾಣ ಅಪಾಯದಲ್ಲಿದೆ ಎಂದು ಗೊತ್ತಿದ್ದರೂ ಈ ವೃದ್ಧೆಯು ಮನೆಯ ಇತರ ಸದಸ್ಯರಿಗೆ ಪಾರಾಗಲು ಅವಕಾಶ ನೀಡಿ ತಾವು ಪ್ರಾಣ ಕಳೆದುಕೊಂಡರು ಎಂಬ ವಿಚಾರ ಈಗ ಬಹಿರಂಗವಾಗಿದೆ.

ಮಹಿಳೆಯ ಪತಿ ಎಸ್‌.ಚುರಾಚಂದ್‌ ಸಿಂಗ್‌ ಸ್ವಾತಂತ್ರ್ಯಯೋಧರಾಗಿದ್ದರು, ಅವರನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಅವರು ಗೌರವಿಸಿದ್ದರು. ಅವರ ಪತ್ನಿ ಇಬಿಟೊಂಬಿಯನ್ನು ಮೇ 28ರಂದು ದಹಿಸಲಾಯಿತು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಸಂಬಂಧ ಸೆರೋ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಫಾಲ್‌ನಿಂದ ಕೇವಲ 45 ಕಿ.ಮೀ. ದೂರದಲ್ಲಿರುವ ಈ ಹಳ್ಳಿ ಈ ಮುಂಚೆ ಒಂದು ಸುಂದರ ಹಳ್ಳಿಯಾಗಿತ್ತು. ಆದರೆ ಇಂದು ಸುಟ್ಟಮನೆಗಳು ಮತ್ತು ಮನೆಗಳ ಗೋಡೆಗಳ ಮೇಲೆ ಗುಂಡಿನ ರಂಧ್ರಗಳು ಮಾತ್ರ ಉಳಿದಿವೆ. ಮೈತೇಯಿ-ಕುಕಿ ಸಮುದಾಯಗಳ ನಡುವಿನ ಘರ್ಷಣೆಗೆ ಅತಿ ಹೆಚ್ಚು ನಲುಗಿದ ಗ್ರಾಮಗಳಲ್ಲಿ ಇದೂ ಒಂದಾಗಿದ್ದು, ಇಂದು ಸ್ಮಶಾನಮೌನ ಆವರಿಸಿದೆ.

ಮೀಜೋರಂನಲ್ಲೂ ಮಣಿಪುರದಂತೆ ದಂಗೆ ಭೀತಿ: ಅಸ್ಸಾಂನತ್ತ ಹೊರಟ ಮೈತೇಯಿ ಸಮುದಾಯ

ಆಗಿದ್ದೇನು?:

ಮೇ 28ರಂದು ಸ್ವಾತಂತ್ರ್ಯ ಹೋರಾಟಗಾರನ ಪತ್ನಿ 80 ವರ್ಷದ ಇಬೆಟೊಂಬಿ ಮನೆಯೊಳಗೆ ಇದ್ದಳು. ಆಗ ಪುಂಡರು ಗ್ರಾಮಕ್ಕೆ ನುಗ್ಗಿ ಹೊರಗಿನಿಂದ ಬೀಗ ಹಾಕಿದ್ದರು. ನಂತರ ಅವರು ಮನೆಗೆ ಬೆಂಕಿ ಹಚ್ಚಿದರು. ಆಕೆಯ ಕುಟುಂಬವು ಅವಳನ್ನು ರಕ್ಷಿಸಲು ಬರುವಷ್ಟರಲ್ಲಿ ಬೆಂಕಿಯು ಸಂಪೂರ್ಣ ಮನೆಗೆ ಆವರಿಸಿತ್ತು ಎಂದು ಇಬೆಟೊಂಬಿಯ ಮೊಮ್ಮಗ ಪ್ರೇಮಕಾಂತ್‌ ಹೇಳಿದ್ದಾರೆ. ಪ್ರೇಮಕಾಂತ್‌ ಘಟನೆಯಲ್ಲಿ ಕೂದಲೆಳೆ ಅಂತರದಿಂದ ಪಾರಾಗಿದ್ದು, ಅಜ್ಜಿಯನ್ನು ಉಳಿಸಲು ಪ್ರಯತ್ನಿಸಿದಾಗ ಗುಂಡುಗಳು ಅವರ ತೋಳು ಮತ್ತು ತೊಡೆಯನ್ನು ಭೇದಿಸಿವೆ.

ದಾಳಿಗೆ ನಡೆದಾಗ ನನ್ನ ಅಜ್ಜಿ ನಮಗೆ ಈಗ ಓಡಿಹೋಗಿ ಮತ್ತು ಸ್ವಲ್ಪ ಸಮಯದ ನಂತರ ನನ್ನನ್ನು ರಕ್ಷಿಸಲು ಹಿಂದಿರುಗಿ ಎಂದು ಹೇಳಿದರು. ದುರದೃಷ್ಟವಶಾತ್‌ ಅದು ಅವರ ಕೊನೆಯ ಮಾತಾಯಿತು. ನನ್ನ ಅಜ್ಜಿಗೆ ವಯಸ್ಸಾಗಿದ್ದರಿಂದ ಬೇಗ ಬರಲು ಸಾಧ್ಯ ಆಗುತ್ತಿರಲಿಲ್ಲ. ಹೀಗಾಗಿ ನಮಗೆ ಮೊದಲು ಓಡಿ ಹೋಗಿಹೋಗಲು ಅವಕಾಶ ಮಾಡಿಕೊಟ್ಟರು ಎಂದು ಹೇಳಿದರು.

ಸ್ವಯಂ ಆತ್ಮರಕ್ಷಣೆಗೆ ಮುಂದಾದ ಮಣಿಪುರ ಮಹಿಳೆಯರು: ಊರಿನೊಳಗೆ ಸೇನೆಗೂ ನೋ ಎಂಟ್ರಿ

ಮೈತೇಯಿ ಸಮನ್ವಯ ಸಂಘಟನೆ ವಿರುದ್ಧ ದೇಶದ್ರೋಹ ಕೇಸು

ಇಂಫಾಲ್‌: ಮಣಿಪುರದ ಮೈತೇಯಿ ಸಮುದಾಯದ ‘ಮಣಿಪುರ ಸಮಗ್ರತೆಗಾಗಿನ ಸಮನ್ವಯ ಸಮಿತಿ’ ವಿರುದ್ಧ ಅಸ್ಸಾಂ ರೈಫಲ್ಸ್‌ ಪಡೆ ದೇಶದ್ರೋಹದ ಕೇಸು ದಾಖಲಿಸಿದೆ.
ರಾಜ್ಯದಲ್ಲಿ ಹಿಂಸಾಚಾರ ನಿಯಂತ್ರಣದ ನಿಟ್ಟಿನಲ್ಲಿ ಕುಕಿ ಮತ್ತು ಮೈತೇಯಿ ಸೇರಿದಂತೆ ಸಮುದಾಯದ ಜನರು ಸಂಗ್ರಹಿಸಿಟ್ಟುಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಕೆಲಸವನ್ನು ಕೆಲ ಸಮಯದಿಂದ ಸೇನೆ ಮಾಡುತ್ತಿದೆ. ಆದರೆ ಇತ್ತೀಚೆಗೆ ಸಮನ್ವಯ ಸಮಿತಿಯ ಸದಸ್ಯರು, ಯಾವುದೇ ಕಾರಣಕ್ಕೂ ಸೇನೆಗೆ ನಿಮ್ಮ ಬಳಿ ಇರುವ ಶಸ್ತ್ರಾಸ್ತ್ರ ಮರಳಿಸಬೇಡಿ ಎಂದು ಕರೆ ಕೊಟ್ಟಿದೆ.

ಈ ಹಿನ್ನೆಲೆಯಲ್ಲಿ ಸಂಘಟನೆಯ ಸಮನ್ವಯಕಾರ ಜಿತೇಂದ್ರ ನಿನ್‌ಗೋಂಬಾ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್‌ ಮಾಹಿತಿ ನೀಡಿದೆ. ಮೇ 3ರ ಹಿಂಸಾಚಾರದ ಬಳಿಕ ಸೇನೆ ಮತ್ತು ಪೊಲೀಸರ ವಶದಲ್ಲಿದ್ದ 4 ಲಕ್ಷಕ್ಕೂ ಹೆಚ್ಚು ಶಸ್ತ್ರಾಸ್ತ್ರ ಮತ್ತು ಲಕ್ಷಾಂತರ ಗುಂಡುಗಳನ್ನು ಮೈತೇಯಿ ಮತ್ತು ಕುಕಿ ಸಮುದಾಯದ ಜನರು ದರೋಡೆ ಮಾಡಿ ಹೊತ್ತೊಯ್ದಿದ್ದಾರೆ.

Follow Us:
Download App:
  • android
  • ios