ಭೋಪಾಲ್[ಡಿ.09]: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿನ ಗ್ರಾಮಸ್ಥರು ಓರ್ವ ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಲ್ಲದೇ, ಅತ ಭೇಟಿಯಾಗಲು ಬಂದಿದ್ದ ಮಹಿಳೆಗೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲದ್ ಆಗಿವೆ.

ಬಯಲು ಮಲವಿಸರ್ಜನೆ ಮಾಡಿದ 2 ದಲಿತ ಮಕ್ಕಳ ಥಳಿಸಿ ಹತ್ಯೆ!

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು 'ಮಹಿಳೆಯ ಕುಟುಂಬ ಸದಸ್ಯರು ತಮ್ಮ ಮನೆಗೆ ನುಗ್ಗಿದ್ದ ಯುವಕನನ್ನು ರಾತ್ರಿ ಇಡೀ ಥಳಿಸಿದ್ದಾರೆ. ಬೆಳಗಾಗುತ್ತಿದ್ದಂತೆಯೇ ಮನೆ ಎದುರಿದ್ದ ಮರಕ್ಕೆ ಕಟ್ಟಿ ಹಾಕಿ ಮತ್ತೆ ಥಳಿಸಲಾರಂಭಿಸಿದ್ದಾರೆ. ನಮಗೆ ಮಾಹಿತಿ ಸಿಕ್ಕ ಕೂಡಲೇ ಅಲ್ಲಿಗೆ ತೆರಳಿದ್ದೇವೆ. ಈ ವೇಳೆ ಆತನನ್ನು ಗ್ರಾಮಸ್ಥರು ನಮಗೆ ಹಸ್ತಾಂತರಿಸಿದ್ದಾರೆ' ಎಂದಿದ್ದಾರೆ.

ಟ್ಯೂಷನ್ ಗೆ ಹೋಗುವ ಬಾಲಕಿಯೇ ಕಿಡ್ನ್ಯಾಪ್ ಆದಳು : ಪೋಷಕರೇ ಎಚ್ಚರ!

ಇಲ್ಲಿನ ಸ್ಥಳೀಯನೊಬ್ಬ ಯುವಕನಿಗೆ ಹೊಡೆಯುತ್ತಿರುವ ದೃಶ್ಯಾವಳಿಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಥಳಿತಕ್ಕೊಳಗಾದ ಯುವಕನ ಹೆಸರು ಜೀತೂ ಎಂದು ಹೇಳಲಾಗಿದೆ. ವಿವಾಹಿತೆಯ ಮನೆಯೊಳಗೆ ನುಗ್ಗಿ ಬೆದರಿಕೆಯೊಡ್ಡಿರುವ ದೂರು ಈತನ ವಿರುದ್ಧ ದಾಖಲಿಸಲಾಗಿದೆ.