Asianet Suvarna News Asianet Suvarna News

ವಿಷ ಸರ್ಪ ಕಚ್ಚಿ ಆಸ್ಪತ್ರೆ ಸೇರಿದ, ಚೇತರಿಸಿಕೊಂಡು ಮರಳಿದ ಬೆನ್ನಲ್ಲೇ ಮತ್ತೆ ಹಾವು ಕಚ್ಚಿ ಸಾವು!

ವಿಷದ ಹಾವೊಂದು ಕಚ್ಚಿ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ವ್ಯಕ್ತಿ 5ದಿನಗಳ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ. ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ ಮರುದಿನ ಮತ್ತೆ ಹಾವು ಕಚ್ಚಿ ಮೃತಪಟ್ಟ ಘಟನೆ ನಡೆದಿದೆ.
 

Man survive snakebite after treatment but dies in 5 days due to snakebite once again in Rajasthan ckm
Author
First Published Jun 30, 2023, 10:18 PM IST

ಜೋಧಪುರ(ಜೂ.30) ವಯಸ್ಸು 44. ಪತ್ನಿ ಹಾಗೂ ಐವರು ಮಕ್ಕಳ ಕುಟುಂಬ. ಹೊಲದಲ್ಲಿ ಕೆಲಸ ಮಾಡುತ್ತಿರುವ ವೇಳೆ ಕಾಲಿಗೆ ಹಾವು ಕಚ್ಚಿದೆ. ಹಾವಿನ ವಿಷದಿಂದ ಅಸ್ವಸ್ಥಗೊಂಡಿದ್ದಾನೆ. ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆ ದಾಖಲಿಸಿದ್ದಾರೆ. ಸತತ 5 ದಿನ ಚಿಕಿತ್ಸೆಯಿಂದ ಆತ ಬದುಕುಳಿದಿದ್ದ. ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾನೆ. ಕೆಲ ದಿನಗಳ ವಿಶ್ರಾಂತಿಗೆ ವೈದ್ಯರುು ಸೂಚಿಸಿದ್ದಾರೆ. ಮನೆಗೆ ಮರಳಿದ ಮರುದಿನವೇ ಮನೆಯ ಆವರಣದಲ್ಲೇ ಮತ್ತೊಂದು ಕಾಲಿಗೆ ಹಾವು ಕಚ್ಚಿದೆ. ಮತ್ತೆ ಆಸ್ಪತ್ರೆ ದಾಖಲಿಸಿದ್ದರೂ ಬದುಕಿ ಉಳಿಯಲಿಲ್ಲ. ಈ ದಾರುಣ ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯ ಮೆಹ್ರಾಂಘಡ ಗ್ರಾಮದಲ್ಲಿ ನಡೆದಿದೆ. ಆದರೆ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

44 ವರ್ಷದ ಜಸಬ್ ಖಾನ್ ಎಂದಿನಂತೆ ಕೆಲಸದಲ್ಲಿ ತೊಡಗಿದ್ದ. ಈ ವೇಳೆ ಕಾಲಿಗೆ ಹಾವು ಕಚ್ಚಿದೆ. ವಿಷ ಹಾವಾದ ಕಾರಣ ಜಸಬ್ ಖಾನ್ ಅಸ್ವಸ್ಥನಾಗಿದ್ದಾನೆ. ಹೀಗಾಗಿ ಕುಟುಂಬಸ್ಥರು ತಕ್ಷಣವೇ ಪೋಖ್ರಾನ್‌ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಜೂನ್ 20 ರಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಸತತತ 5 ದಿನ ಚಿಕಿತ್ಸೆ ನೀಡಿದ ಪರಿಣಾಮ ಜಸಬ್ ಖಾನ್ ಚೇತರಿಸಿಕೊಂಡಿದ್ದಾರೆ. 

ಇದೆಂಥಾ ವಿಚಿತ್ರ... 8 ವರ್ಷದ ಬಾಲಕ ಕಚ್ಚಿ ಹಾವು ಸಾವು

ಜೂನ್ 25 ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಇದೇ ವೇಳೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಜೂನ್ 25ರ ಸಂಜನೆ ಮನೆಗೆ ಮರಳಿದ ಜಸಬ್ ಖಾನ್ ವಿಶ್ರಾಂತಿಗೆ ಜಾರಿದ್ದಾರೆ. ಮರುದಿನ ಮನೆಯ ಆವರಣದಲ್ಲೇ ಜಸಬ್ ಖಾನ್‌ಗೆ ಮತ್ತೆ ಹಾವು ಕಚ್ಚಿದೆ. ಮತ್ತೆ ಕುಸಿದ ಹೋದು ಜಸಬ್‌ ಖಾನ್‌ನನ್ನು ಪೋಖ್ರಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ದೇಹದಲ್ಲಿ ವಿಷ ಹೆಚ್ಚಾಗಿದ್ದ ಕಾರಣ ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಜೋಧಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದಾರೆ.

ಜೋಧಪುರ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಜೂನ್ 27 ಮುಂಜಾನೆ ಜಸಬ್ ಖಾನ್ ಮೃತಪಟ್ಟಿದ್ದಾರೆ. ಮೊದಲ ಹಾವು ಕಚ್ಚಿದ ವಿಷದ ಸಂಪೂರ್ಣವಾಗಿ ದೇಹದಿಂದ ಇಳಿದಿರಲಿಲ್ಲ. ಮೊದಲ ಘಟನೆಯಿಂದ ಚೇತರಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಮತ್ತೆ ಹಾವು ಕಚ್ಚಿದ ಕಾರಣ ಜಸಬ್ ಖಾನ್ ಮೃತಪಟ್ಟಿದ್ದಾನೆ. ಇದೀಗ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಎರಡೆರಡು ಬಾರಿ ಹಾವು ಕಚ್ಚಿ ಮೃತಪಟ್ಟಿದ್ದು ಹೇಗೆ? ಸ್ವಾಭಾವಿಕವಾಗಿ ಹಾವು ಕಚ್ಚಿದ್ದೇ? ಅಥವಾ ಕಚ್ಚಿಸಿದ್ದೇ? ಅನ್ನೋ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಕುರಿತು ಜಸಬ್ ಖಾನ್ ಆಪ್ತರು, ಗೆಳೆಯರು, ಕುಟುಂಬಸ್ಥರನ್ನು ವಿಚಾರಣೆ ನಡೆಸಲ ಪೊಲೀಸರು ಮುಂದಾಗಿದ್ದಾರೆ. 

 

ಮನೆಯಲ್ಲಿ ಮಲಗಿದ್ದ ದಂಪತಿಗೆ ಕಚ್ಚಿದ ಹಾವು: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ

ಜಸಬ್ ಖಾನ್ ಪತ್ನಿ, ನಾಲ್ವರು ಹೆಣ್ಣುಮಕ್ಕಳು ಹಾಗೂ 5 ವರ್ಷದ ಪುತ್ರನನ್ನು ಅಗಲಿದ್ದಾರೆ. ಇದೀಗ ಜೋಧಪುರದ ಹಲವು ಗ್ರಾಮದಲ್ಲಿ ವಿಷ ಹಾವುಗಳ ಕಡಿತ ಪ್ರಕರಣಗಳು ದಾಖಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿಗಳ ತಂಡ ಹಲವು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಗ್ರಾಮದ ನಿವಾಸಿಗಳ ಜೀವಕ್ಕೆ ಹೆಚ್ಚಿನ ಅಪಾಯವಾಗುತ್ತಿರುವ ಕಾರಣ ಸೂಕ್ತ ನಿರ್ಧಾರ ಕೈಗೊಳ್ಳಲು ಸತತ ಸಭೆ ನಡೆಸುತ್ತಿದೆ.

Latest Videos
Follow Us:
Download App:
  • android
  • ios