ಮುಂಬೈ(ಜ.05): ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸುತ್ತಿದ್ದಾಗ ಬಿದ್ದ ವ್ಯಕ್ತರಿಯನ್ನು ಕಾಪಾಡಲು ಕಾನ್ಸ್‌ಟೇಬಲ್ ಒಬ್ಬ ಜೀವದ ಹಂಗು ತೊರೆದು ಮುನ್ನುಗ್ಗಿರುವ ಘಟನೆಯ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ಸದ್ಯ ಈ ಪೊಲೀಸಪ್ಪನ ಧೈರ್ಯಕ್ಕೆ ಜನರು ಭೇಷ್ ಎನ್ನುತ್ತಿದ್ದಾರೆ.

ರೈಲ್ವೇ ನಿಲ್ದಾಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲಾಗಿದೆ. ಮುಂಬೈನ ದಹಿಸರ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇನ್ನು ವಿಡಿಯೋದಲ್ಲಿ ವ್ಯಕ್ತಿ ಪ್ಲಾಟ್‌ಫಾರಂಗೆ ಬಂದಿರುತ್ತಾನೆ, ಅಷ್ಟರಲ್ಲೇ ರೈಲು ಚಲಿಸಲಾರಂಭಿಸುತ್ತದೆ. ಹೀಗಿರುವಾಗ ಆತ ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸುತ್ತಾನೆ. ಆದರೆ ನಿಯಂತ್ರಣ ಕಳೆದುಕೊಳ್ಳುವ ಆತ ಬೀಳುತ್ತಾನೆ. ಹೀಗಿರುವಾಗ ಅಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ಯೋಗೆಶ್ ಆತನನ್ನು ಹಿಡಿದು ಹಿಂದೆಳೆಯುತ್ತಾನೆ. ಈ ಮೂಲಕ ವ್ಯಕ್ತಿಯನ್ನು ಕಾಪಾಡುತ್ತಾನೆ.

ಮುಂಬೈ ಪೊಲೀಸರು ಈ ಶಾಕಿಂಗ್ ವಿಡಿಯೋವನ್ನು ಟ್ವೀಟ್ ಮಾಡಿದ್ದು, ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.