Asianet Suvarna News Asianet Suvarna News

ಟೊಮೆಟೋ ಕತ್ತರಿಸಲು KitKat ಬಾರ್‌ನ್ನು ಹರಿತಗೊಳಿಸಿದ ಭೂಪ... ನೋಡಿ ವೈರಲ್ ವಿಡಿಯೋ

  • ಕಿಟ್‌ಕ್ಯಾಟ್‌ ಚಾಕೋಲೇಟ್‌ ಬಾರ್‌ನ್ನು ಆಯುಧದಂತೆ ಬಳಸಿದ ವ್ಯಕ್ತಿ 
  • ಚಾಕೋಲೇಟ್‌ನಿಂದ ಟೊಮೆಟೋ ಕತ್ತರಿಸಿದ್ದು ನೋಡಿ ಗಾಬರಿಯಾದ ನೆಟ್ಟಿಗರು
Man sharpens KitKat to cut tomato Watch viral video akb
Author
Bangalore, First Published Dec 24, 2021, 6:27 PM IST
  • Facebook
  • Twitter
  • Whatsapp

ಟೊಮೆಟೋವನ್ನು ಸಾಮಾನ್ಯವಾಗಿ ನಾವು ಚಾಕುವಿನಲ್ಲಿ ಕತ್ತರಿಸುವುದು ಸಾಮಾನ್ಯ ಆದರೆ ಇಲ್ಲೊಬ್ಬ ಟೊಮೆಟೋ ಕತ್ತರಿಸಲು ಬಳಸಿದ ಆಯುಧ ನೋಡಿದರೆ ನೀವು ಗಾಬರಿಯಾಗುತ್ತೀರಿ. ಹೌದು ಇಂಟರ್‌ನೆಟ್‌ನಲ್ಲಿ ವಿಡಿಯೋವೊಂದು ವೈರಲ್‌ ಆಗಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ಟೊಮೆಟೋ ಕತ್ತರಿಸುವ ಸಲುವಾಗಿ ಬಳಸಿದ್ದು ಕಿಟ್‌ಕ್ಯಾಟ್‌ (KitKat)  ಚಾಕೋಲೇಟ್‌ ಬಾರ್‌. ವಿಚಿತ್ರವದರೂ ಇದು ಸತ್ಯ. ಚಾಕೋಲೇಟ್‌ ಬಾರನ್ನು ಕತ್ತಿಯನ್ನು ಹರಿತಗೊಳಿಸಲು ನಾವು ಹೇಗೆ ಸಾಣೆ ಹಿಡಿಯುತ್ತೇವೆಯೋ ಹಾಗೆ ಈತ ಚಾಕೋಲೇಟ್‌ ಬಾರ್‌ನ್ನು ಗ್ರಾನೈಟ್‌ನಂತಹ ತೆಳ್ಳನೆಯ ವಸ್ತುವಿಗೆ ಉಜ್ಜಿ ಸಾಣೆ ಹಿಡಿಯುತ್ತಾನೆ. ಈ ವೇಳೆ ಚಾಕೋಲೇಟ್‌ನ ಒಂದು ಭಾಗ ತೆಳ್ಳಗಾಗಿ ಚಾಕುವಿನ ಬಾಯಿಯಂತಾಗುತ್ತದೆ. ನಂತರ ಆತ ಅದರಲ್ಲೇ ಟೊಮೆಟೋವನ್ನು ಕತ್ತರಿಸುವುದರೊಂದಿಗೆ ಈ ವಿಡಿಯೋ ಮುಕ್ತಾಯವಾಗುತ್ತದೆ.

ಇದನ್ನು ವೀಕ್ಷಿಸಿದ ನೆಟ್ಟಿಗರಂತೂ ಇದೇಕೆ ಹೀಗೆ ಎಂದು ಕೇಳುತ್ತಿದ್ದಾರೆ. ಅಲ್ಲದೇ ಈ ವಿಡಿಯೋ ನಕಲಿ ಎಂದು ಹೇಳುತ್ತಿದ್ದಾರೆ. ಅದಾಗ್ಯೂ ಈ ವಿಡಿಯೋಗೆ
ಇನ್ಸ್ಟಾಗ್ರಾಮ್‌ನಲ್ಲಿ 19 ಸಾವಿರ ಲೈಕ್ಸ್‌ ಬಂದಿದೆ.  ವಾಟ್‌ಹೌವೈ ಸ್ಟುಡಿಯೋ (whathowhystudio) ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ಪೋಸ್ಟ್‌ ಆಗಿದೆ. 
ಒಟ್ಟಿನಲ್ಲಿ ಸೋಶಿಯಲ್‌ ಮೀಡಿಯಾ ಬಂದ ಮೇಲೆ ಇಂತಹ ವಿಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುವುದು ಸಾಮಾನ್ಯವಾಗಿದೆ. 

ಹೂವಲ್ಲ ಹಾವು
ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು ತಲೆಗೆ ಹೇರ್‌ ಬ್ಯಾಂಡ್‌ನಂತೆ ಹಾವನ್ನು ಸುತ್ತಿಕೊಂಡು ಶಾಪಿಂಗ್‌ ಮಾಲ್‌ನಲ್ಲಿ ಶಾಪಿಂಗ್‌ ಮಾಡುತ್ತಿದ್ದ ವಿಡಿಯೋ ವೈರಲ್‌ ಆಗಿತ್ತು.
ಪ್ರಾಣಿಗಳು ಪಕ್ಷಿಗಳು, ಸರೀಸೃಪ ಹಾವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿವೆ. ಕೆಲವು ವಿಡಿಯೋಗಳಿಗೆ ಅಯ್ಯೋ ಎಂದು ನೀವು ಉದ್ಘರಿಸುವಂತಿದ್ದರೆ ಮತ್ತೆ ಕೆಲವು  ವಿಡಿಯೋಗಳು ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಆದರೆ ನಾವು ಈಗ ನಿಮಗೆ ತೋರಿಸಲು ಹೊರಟಿರುವ ವಿಡಿಯೋ ನಿಮ್ಮ ನಿಮ್ಮ ಕಣ್ಣುಗಳನ್ನು ತಿರುಗಿವಂತೆ ಮಾಡುವುದು ಗ್ಯಾರಂಟಿ. ಹಾವು (snake) ಕಂಡಾಗ ಸಾಮಾನ್ಯವಾಗಿ ನಾವೆಲ್ಲರೂ ಒಂದೋ ಅದನ್ನು ಓಡಿಸಲು ಪ್ರಯತ್ನಿಸುತ್ತೇವೆ ಅಥವಾ ನಾವೇ ಓಡಲು ಆರಂಭಿಸುತ್ತೇವೆ. ಆದರೆ ಇಲ್ಲೊಬ್ಬಳು ತಲೆಗೆ ಹಾವನ್ನೇ ಹೇರ್‌ ಬ್ಯಾಂಡ್  ರೀತಿ ಸುತ್ತಿಕೊಂಡು ಶಾಪಿಂಗ್‌ ಬಂದಿದ್ದು, ಎಲ್ಲರನ್ನೂ ಗಾಬರಿಗೆ ನೂಕಿದ್ದಾಳೆ. 

ಶಾಪಿಂಗ್ ಮಾಲ್ (shopping mall) ಒಳಗಿನ ವಿಡಿಯೋ ಇದಾಗಿದ್ದು, ಶಾಪಿಂಗ್‌ ಬಂದ ಮಹಿಳೆಯೊಬ್ಬಳು ತಲೆಗೆ ಹೇರ್‌ ಬ್ಯಾಂಡ್‌ ರೀತಿ ಹಾವನ್ನೇ ಬಳಸಿ ಕೂದಲನ್ನು ಕಟ್ಟಿದ್ದು, ಹೀಗೆಯೇ ಈಕೆ ಮಾಲ್‌ನಲ್ಲಿ ಓಡಾಡಿದ್ದಾಳೆ. ಆದರೆ ಮಾಲ್‌ಗೆ ಬಂದ ಇತರರ ಜೀವ ಹಾವು ನೋಡಿ ಸುಮ್ಮನೆ ಕೂರಲು ಸಾಧ್ಯವೇ. ಈಕೆಯ ತಲೆಯಲ್ಲಿ ಹಾವು ನೋಡಿದವರೆಲ್ಲರೂ ಭಯಾನಕ ಪ್ರತಿಕ್ರಿಯೆಗಳನ್ನು ನೀಡಿದ್ದಲ್ಲದೇ ಈ ರೀತಿಯೂ ಜನ ಇರುತ್ತಾರೆ ಎಂದು ತಲೆಗೆ ಹಾವು ಸುತ್ತಿ ಬಂದವಳ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ (Social Media)ದಲ್ಲಿ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ (Instagram)ನಲ್ಲಿ ವೈರಲ್‌ ಆಗಿದೆ. 

ವಿಡಿಯೋವನ್ನು ತುಂಬಾ ಹತ್ತಿರದಿಂದ ಗಮನಿಸಿದರೆ ಇದು ಹೇರ್‌ಬ್ಯಾಂಡ್‌(hairband) ಅಲ್ಲ ಹಾವು ಎಂಬುದು ತಿಳಿದು ಬರುತ್ತದೆ. ಈ ವಿಡಿಯೋವನ್ನು  15,000ಕ್ಕೂ ಹೆಚ್ಚು ಜನ ಇನ್ಸ್ಟಾಗ್ರಾಮ್‌ನಲ್ಲಿ ವೀಕ್ಷಿಸಿದ್ದು, ಈ ವಿಡಿಯೋ ನೋಡಿದವರೆಲ್ಲರೂ ಶಾಕ್‌ನಿಂದ ಪ್ರತಿಕ್ರಿಯಿಸಿದ್ದಾರೆ. ರಬ್ಬರ್‌ ಬ್ಯಾಂಡ್‌ಗಿಂತ ಇದು ಗಟ್ಟಿಯಾಗಿ ಕೂದಲನ್ನು ಹಿಡಿದಿಡುವುದು ಎಂದು ಆಕೆ ಭಾವಿಸಿರಬೇಕು ಎಂದು ಒಬ್ಬರು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. ವಿದೇಶವೊಂದರ ವಿಡಿಯೋ ಇದಾಗಿದ್ದು, ಎಲ್ಲಿ ಈ ಘಟನೆ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

Follow Us:
Download App:
  • android
  • ios