ಟೀ ಬೇಕಾ ಟೀ… 36 ಸಾವಿರ ಅಡಿ ಎತ್ತರದಲ್ಲಿ ಚಹಾ ಸರ್ವ್ ಮಾಡಿದ ಪ್ರಯಾಣಿಕ!

ಇಂಡಿಗೋ ವಿಮಾನವೊಂದು ಎಲ್ಲರ ಗಮನ ಸೆಳೆದಿದೆ. ಫ್ಲೈಟ್ ನಲ್ಲಿ ವ್ಯಕ್ತಿಯೊಬ್ಬ ಟೀ ಸರ್ವ್ ಮಾಡಿದ್ದಾನೆ. ಅಷ್ಟೆತ್ತರಕ್ಕೆ ಟೀ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದು ಯಾರು ಎಂಬ ಪ್ರಶ್ನೆ ಎಲ್ಲರನ್ನು ಕಾಡ್ತಿದೆ. 
 

Man Serves Tea In Indigo Flight

ರೈಲಿ (Train) ನಲ್ಲಿ ಟೀ, ಟೀ ಅಂತ ಕೋಗ್ತಾ ಬರೋರನ್ನು ನಾವೆಲ್ಲ ನೋಡಿದ್ದೇವೆ. ಇಡ್ಲಿ, ವಡಾ, ಕಾಫಿ, ಚಹಾ (tea) ಅಂತ ಒಬ್ಬರಾದ್ಮೇಲೆ ಒಬ್ಬರು ಬರ್ತಿರುತ್ತಾರೆ. ಇನ್ನು ಬಸ್ ಸ್ಟಾಪ್ ಅಥವಾ ಟೋಲ್ ಗೇಟ್ ಬಳಿ, ಹಣ್ಣು, ಸೌತೆಕಾಯಿ ಹಿಡಿದು ಬಸ್ ಹತ್ತುವ ಮಾರಾಟಗಾರರು ನಮಗೆ ಗೊತ್ತು. ಆದ್ರೆ ವಿಮಾನದಲ್ಲಿ ಹಾಗಲ್ಲ. ಅಲ್ಲಿ ವಿಶೇಷ ರೂಲ್ಸ್ ಇದ್ದು, ಅದನ್ನು ಪ್ರಯಾಣಿಕರ ಜೊತೆ ಗಗನಸಖಿಯರು ಪಾಲಿಸಬೇಕು. ಸಹ ಪ್ರಯಾಣಿಕರಿಗೆ ತೊಂದ್ರೆ ಆಗದಂತೆ ಗಗನ ಸಖಿಯರು, ಪ್ರತಿಯೊಬ್ಬರ ಬಳಿ ಬಂದು ಅವರಿಗೆ ಏನು ಬೇಕು ಎಂಬುದನ್ನು ಕೇಳಿ, ಸರ್ವ್ ಮಾಡ್ತಾರೆ. ವಿಮಾನದಲ್ಲಿ ಟೀ, ಕಾಫಿ ಸೇರಿದಂತೆ ಎಲ್ಲ ಆಹಾರ ಲಭ್ಯವಿದೆ. ಆದ್ರೆ ಇಂಡಿಗೋ ವಿಮಾನದಲ್ಲಿ, ರೈಲಿನಂತೆ ಚಹಾ ಚಹಾ ಎಂಬ ಧ್ವನಿ ಕೇಳಿದೆ. ಇದನ್ನು ನೋಡಿದ ಪ್ರಯಾಣಿಕರು ಅಚ್ಚರಿಗೊಳಗಾಗಿದ್ದಾರೆ. ಇಂಡಿಗೋ ವಿಮಾನದಲ್ಲಿ ಪ್ರಯಾಣಿಸ್ತಿದ್ದ ವ್ಯಕ್ತಿಯೊಬ್ಬರು, ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಟೀ ನೀಡಿದ್ದಾರೆ. 

ಚಹಾ ಮಾರುತ್ತಿರುವ ವ್ಯಕ್ತಿಯನ್ನು ಇಂಡಿಯನ್ ಚಾಯ್ವಾಲಾ (Indian chai wala) ಎಂದು ಕರೆಯಲಾಗ್ತಿದೆ. ಈ ವ್ಯಕ್ತಿ, ವಿಮಾನ, ನೆಲದಿಂದ 36 ಸಾವಿರ ಅಡಿ ಎತ್ತರಕ್ಕೆ ತಲುಪಿದ ನಂತರ ಚಹಾ ವಿತರಿಸಲು ಪ್ರಾರಂಭಿಸಿದ್ದರು. ಈ ವ್ಯಕ್ತಿ ಟೀ ಮಾರಾಟ ಮಾಡ್ತಿದ್ದರೆ ಅಲ್ಲಿದ್ದ ಯಾವುದೇ ಫ್ಲೈಟ್ ಅಟೆಂಡೆಂಟ್ ಅಥವಾ ಕ್ಯಾಬಿನ್ ಸಿಬ್ಬಂದಿ ವಿರೋಧಿಸಲಿಲ್ಲ.

ಮಹಾ ಕುಂಭಮೇಳಕ್ಕೆ ಹೋಗಲು ಪ್ರಯಾಗರಾಜ್‌ಗೆ ವಿಶೇಷ ರೈಲು ವ್ಯವಸ್ಥೆ

 ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ (Instagram) ಹ್ಯಾಂಡಲ್ ಇಂಡಿಯನ್ ಚಾಯ್ವಾಲಾದಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ವೈರಲ್ ಆಗಿದ್ದು, 7 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ಸಾವಿರಾರು ಲೈಕ್ಸ್ ಬಂದಿದೆ. ಹಾಗೆಯೇ ನೂರಾರು ಕಮೆಂಟ್ ಗಳನ್ನು ನೀವು ಕಾಣ್ಬಹುದು. ವಿಮಾನದಲ್ಲಿ ಟೀ ವಿತರಣೆ ಮಾಡಲು ಅವರಿಗೆ ಒಪ್ಪಿಗೆ ಹೇಗೆ ಸಿಕ್ತು ಎಂಬುದೇ ಬಹುತೇಕ ಬಳಕೆದಾರರ ಪ್ರಶ್ನೆಯಾಗಿದೆ. ವಿಡಿಯೋದಲ್ಲಿ ಟೀ ನೀಡ್ತಿರುವ ವ್ಯಕ್ತಿಗೆ ಇನ್ನೊಬ್ಬರು ಸಹಾಯ ಮಾಡ್ತಿದ್ದಾರೆ. ಯೂಸ್ ಆಂಡ್ ಥ್ರೋ ಕಪ್ ನಲ್ಲಿ ಟೀ ಹಾಕಿ, ಪ್ರತಿಯೊಬ್ಬರಿಗೂ ನೀಡಲಾಗ್ತಿದೆ. ಎಲ್ಲ ಪ್ರಯಾಣಿಕರಿಗೆ ಟೀ ಸಿಗುತ್ತೆ ಎಂದು ಪ್ರಯಾಣಿಕ ಹೇಳ್ತಿದ್ದಾರೆ. 

ವಿಡಿಯೋ ನೋಡಿದ ಬಳಕೆದಾರರು, ಇಂಡಿಯಾದಲ್ಲಿ ಮಾತ್ರ ಇದೆಲ್ಲ ಸಾಧ್ಯ ಎಂದಿದ್ದಾರೆ. ಅನೇಕರು ಇದು ಅಪಾಯಕಾರಿ ಎಂದಿದ್ದಾರೆ. ಅಷ್ಟೊಂದು ದ್ರವ ಪದಾರ್ಥವನ್ನು ಕೊಂಡೊಯ್ಯಲು ಹೇಗೆ ಅನುಮತಿ ನೀಡಲಾಯ್ತು ಎಂದು ಜನರು ಪ್ರಶ್ನೆ ಕೇಳಿದ್ದಾರೆ. ಅವರು ಟೀ ತಯಾರಿಸಲು ಅಥವಾ ಟೀ ಬಿಸಿ ಮಾಡಲು ದಹಿಸುವ ವಸ್ತುವನ್ನು ವಿಮಾನದಲ್ಲಿ ಕೊಂಡೊಯ್ದಿರುವ ಸಾಧ್ಯತೆ ಇದೆ ಎಂದು ಮತ್ತೆ ಕೆಲವರು ಅನುಮಾನಿಸಿದ್ದಾರೆ. ಇಂಡಿಗೋ ಈಗ ಸ್ಲೀಪರ್ ಕೋಚ್ ಆಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಹಾಗಾಗಿಯೇ ಇಂಡಿಗೋವನ್ನು ಅತ್ಯಂತ ಕೆಟ್ಟ ವಿಮಾನ ಎಂದು ಪರಿಗಣಿಸಲಾಗುತ್ತೆ ಎಂದು ಇನ್ನೊಬ್ಬರು ಬರೆದಿದ್ದಾರೆ. 

ಸಾಮಾನ್ಯ ಫೋನ್‌ ಕರೆಗಳಿಗೆ ಬೇರೆ ರೀಚಾರ್ಜ್ ಪ್ಲಾನ್ ಮಾಡಿ: ಟೆಲಿಕಾಂ ಕಂಪನಿಗಳ ದರೋಡೆಗೆ

ಇಂಡಿಗೋ ಈಗ ಸ್ಲೀಪರ್ ಕೋಚ್ ಆಗಿದೆ, ಇಂಡಿಗೋವನ್ನು ಬಸ್ ಆಗಿ ಏಕೆ ಬದಲಿಸಿದ್ದಾರೆ, ವಿಮಾನದಲ್ಲಿ ಹೊರಗಿನ ಆಹಾರ ತೆಗೆದುಕೊಂಡು ಹೋಗ್ಬಾರದು ಎನ್ನುವ ನಿಯಮವಿದ್ರೂ ಇವರಿಗೆ ಹೇಗೆ ಒಪ್ಪಿಗೆ ಸಿಕ್ಕಿದೆ ಎಂದೆಲ್ಲ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇಂಡಿಗೋ ವಿಮಾನದಲ್ಲಿ ಟೀ ಮಾರಾಟ ಮಾಡಿದ ವ್ಯಕ್ತಿ ಯಾರು, ಏಕೆ ಹೀಗೆ ಮಾಡಿದ್ದಾರೆ, ವಿಮಾನ ಸಿಬ್ಬಂದಿ ಅನುಮತಿ ನೀಡಿದ್ದು ಏಕೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಇಂಡಿಗೋ ಕಂಪನಿ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

Latest Videos
Follow Us:
Download App:
  • android
  • ios