ಏರ್ ಲೈನ್ ವೆಬ್ ಸೈಟ್ ಹ್ಯಾಕ್ ಮಾಡಿದ ಪ್ರಯಾಣಿಕಕಳೆದುಹೋಗಿದ್ದ ಲಗೇಜ್ ಹುಡುಕುವ ಸಲುವಾಗಿ ಈ ಕೆಲಸಇಂಡಿಗೋ ವಿಮಾನಯಾನ ಸಂಸ್ಥೆಗೆ ಮುಖಭಂಗ
ನವದೆಹಲಿ (ಮಾ. 31): ಇಂಡಿಗೋ (Indigo) ವಿಮಾನಯಾನ (Airline) ಸಂಸ್ಥೆಗೆ ಭಾರೀ ಮುಖಭಂಗವಾಗಿದ್ದು, ಪಾಟ್ನಾದಿಂದ (Patna) ಬೆಂಗಳೂರಿಗೆ (Belnagluru) ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ವಿಮಾನ ಪ್ರಯಾಣದ ವೇಳೆ ಕಳೆದು ಹೋದ ತಮ್ಮ ಲಗೇಜ್ ಪತ್ತೆ ಹಚ್ಚಲು ಇಂಡಿಗೋ ವೆಬ್‌ಸೈಟ್ ಅನ್ನೇ ಹ್ಯಾಕ್ ಮಾಡುವ ಮೂಲಕ ಸುದ್ದಿಯಾಗಿದ್ದಾನೆ.
ತನ್ನ ಬ್ಯಾಗ್ ಅನ್ನು ತಪ್ಪಾಗಿ ತೆಗೆದುಕೊಂಡು ಹೋದ ಸಹ ಪ್ರಯಾಣಿಕನ ವಿವರ ಪತ್ತೆಹಚ್ಚಲು ಇಂಡಿಗೋ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್ ಹ್ಯಾಕ್ ಮಾಡಿದ ಬೆಂಗಳೂರಿನ ಟೆಕ್ಕಿ ನಂದನ್ ಕುಮಾರ್ (Nandan Kumar)ಅವರು, ಈ ವೆಬ್ ಸೈಟ್ ನಲ್ಲಿ ನಮಗೆ ಬೇಕಾದ ಸೂಕ್ಷ್ಮ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಈ ವೆಬ್ ಸೈಟ್ ತಾಂತ್ರಿಕವಾಗಿ ದುರ್ಬಲವಾಗಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು ಮತ್ತು ಇನ್ನಷ್ಟು ಭದ್ರಪಡಿಸಬೇಕು ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
ಮಾರ್ಚ್ 27 ರಂದು ಪಾಟ್ನಾದಿಂದ ಬೆಂಗಳೂರಿಗೆ 6E-185 ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ನಂದನ್ ಕುಮಾರ್ ಅವರ ಬ್ಯಾಗ್ ಕಣ್ತಪ್ಪಿನಿಂದ ಬದಲಾಗಿತ್ತು. "ನಾನು ಮನೆ ತಲುಪಿದ ನಂತರ ನನ್ನ ಪತ್ನಿ ಇದು ನಮ್ಮ ಬ್ಯಾಗ್ ಅಲ್ಲ. ಬೇರೆಯವರದ್ದು ಎಂದು ಹೇಳಿದರು. ನಾನು ತಕ್ಷಣ ನಿಮ್ಮ ಕಸ್ಟಮರ್ ಕೇರ್‌ಗೆ ಕರೆ ಮಾಡಿದೆ. ಆದರೆ ಅವರು ಗೌಪ್ಯತೆ ಮತ್ತು ಡೇಟಾ ರಕ್ಷಣೆ ಉಲ್ಲೇಖಿಸಿ ಆ ವ್ಯಕ್ತಿಯ ನಂಬರ್ ಕೊಡಲಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ನಂದನ್ ಅವರ ಬ್ಯಾಗ್ ಅವರ ಸಹಪ್ರಯಾಣಿಕರ ಜೊತೆ ಹೋಗಿತ್ತು. ಇದು ಕಣ್ತಪ್ಪಿನಿಂದ ಆದ ಎಡವಟ್ಟಾಗಿತ್ತು. ಆದರೆ ಬ್ಯಾಗ್ನ್ನು ಪಡೆಯಲು ಇಂಡಿಗೋ ಕೊಟ್ಟ ಸಹಕಾರ ಸೂಕ್ತವಾಗಿರಲಿಲ್ಲ. ನನ್ನ ಬ್ಯಾಗ್ನಲ್ಲಿ ಅನೇಕ ಮಹತ್ವದ ವಸ್ತುಗಳು ಇದ್ದುದರಿಂದ ಅದನ್ನು ಪಡೆಯಲೇಬೇಕಾಗಿತ್ತು.
ನೋಟುಗಳ ಮುದ್ರಣಕ್ಕೆ ಸರ್ಕಾರದಿಂದ 4.5 ಸಾವಿರ ಕೋಟಿ ಖರ್ಚು, ಪ್ರತಿ ಮುಖಬೆಲೆಯ ನೋಟಿಗೆ ಆಗುವ ಖರ್ಚೆಷ್ಟು!
ಹೀಗಾಗಿ ಇಂಡಿಗೋ ವೆಬ್‌ಸೈಟ್ ಹ್ಯಾಕ್ ಮಾಡುವ ಮೂಲಕ ಸಹ ಪ್ರಯಾಣಿಕನ ಫೋನ್ ನಂಬರ್ ಪಡೆದೆ ಎಂದು ನಂದನ್ ಹೇಳಿದ್ದಾರೆ. ನಾನು ಎಫ್ 12 ಬಟನ್ ಪ್ರೆಸ್ ಮಾಡುವ ಮೂಲಕ ವೆಬ್ಸೈಟ್ನ developer console ಓಪನ್ ಮಾಡಿ ಸಹ ಪ್ರಯಾಣಿಕನ ಫೋನ್ನಂಬರ್, ವಿವರಗಳನ್ನೆಲ್ಲ ತೆಗೆದುಕೊಂಡೆ ಎಂದು ನಂದನ್ ಕುಮಾರ್ ತಿಳಿಸಿದ್ದಾರೆ. ಸಹ ಪ್ರಯಾಣಿಕನ ಪಿಎನ್ಆರ್ ಬಳಸಿಕೊಂಡು ಇಂಡಿಗೋ ವೆಬ್ ಸೈಟ್ ನಲ್ಲಿ ನಂದನ್ ಕುಮಾರ್ ವಿವರವನ್ನು ಹುಡುಕಲು ಆರಂಭಿಸಿದ್ದ. ಸಹ ಪ್ರಯಾಣಿಕನ ವಿಳಾಸ ಅಥವಾ ದೂರವಾಣಿ ಸಂಖ್ಯೆ ಸಿಗುವ ಭರವಸೆಯಲ್ಲಿ ತಮ್ಮ ಪ್ರಯತ್ನ ನಡೆಸಿದ್ದರು. "ಎಲ್ಲಾ ವಿಫಲ ಪ್ರಯತ್ನಗಳ ನಂತರ, ನನ್ನ ಡೆವಲಪರ್ ಥಿಂಕ್ ಪ್ರಾರಂಭವಾಯಿತು. ನಾನು ನನ್ನ ಕಂಪ್ಯೂಟರ್ ಕೀಬೋರ್ಡ್‌ನಲ್ಲಿ F12 ಬಟನ್ ಒತ್ತಿ ಮತ್ತು IndiGo ವೆಬ್‌ಸೈಟ್‌ನಲ್ಲಿ ಡೆವಲಪರ್ ಕನ್ಸೋಲ್ ಅನ್ನು ತೆರೆದಿದ್ದೆ" ಎಂದು ಕುಮಾರ್ ಹೇಳಿದ್ದಾರೆ. "ನಾನು 'ನೆಟ್‌ವರ್ಕ್ ಲಾಗ್‌ಗಳನ್ನು ಪರಿಶೀಲಿಸೋಣ' ಎಂದಷ್ಟೇ ಭಾವಿಸಿದ್ದೆ. ಆದರೆ, ನಾನು ಕಂಡುಕೊಂಡದ್ದು ಆಶ್ಚರ್ಯಕರವಾಗಿತ್ತು. ನನ್ನ ಸಹ-ಪ್ರಯಾಣಿಕನ ಫೋನ್ ಸಂಖ್ಯೆ. "ನಿಜವಾಗಿ ಹೇಳಬೇಕೆಂದರೆ, ನನ್ನ ಬ್ಯಾಗ್ ಅನ್ನು ಹಿಂಪಡೆಯುವ ನಿಟ್ಟಿನಲ್ಲಿ ಸಂಪರ್ಕಕ್ಕೆ ಸಾಧ್ಯವಾಗಬಹುದಾದಂಥ ಫೋನ್ ಸಂಖ್ಯೆ ಅಥವಾ ಇಮೇಲ್ ಅನ್ನು ಮಾತ್ರ ಪರಿಶೀಲಿಸಿದ್ದೇನೆ' ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಎಕ್ಸೈಡ್ ಇಂಡಸ್ಟ್ರೀಸ್ 6000 ಕೋಟಿ ಹೂಡಿಕೆ, ಉದ್ಯೋಗಾವಕಾಶ ಸೃಷ್ಟಿ
ಹಾಗಿದ್ದರೂ, ಸಿಸ್ಟಮ್‌ನ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಿರಬೇಕು ಎಂದು ಅವರು ಹೇಳಿದ್ದಾರೆ. ಎನ್ ಕ್ರಿಪ್ಟ್ ಮಾಡದೇ ಇದ್ದಲ್ಲಿ ಯಾರೂ ಬೇಕಾದರೂ ಖಾಸಗಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ. "ಪಿಎನ್ ಆರ್ ಮತ್ತು ಕೊನೆಯ ಹೆಸರನ್ನು ಪಡೆಯುವುದು ತುಂಬಾ ಸುಲಭ. ಜನರು ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಹಂಚಿಕೊಳ್ಳುತ್ತಾರೆ. ಯಾರಾದರೂ ನಿಮ್ಮ ಬ್ಯಾಗ್‌ಗಳನ್ನು ನೋಡಬಹುದು, ಚಿತ್ರ ತೆಗೆಯಬಹುದು ಮತ್ತು ನಂತರ ಅದನ್ನು ಬಳಸಿ ನಿಮ್ಮ ಮಾಹಿತಿಯನ್ನು ಪಡೆಯಬಹುದು" ಎಂದು ಕುಮಾರ್ ಹೇಳುತ್ತಾರೆ.
