Asianet Suvarna News Asianet Suvarna News

ರೈಲು ಬರುತ್ತಿದ್ದಾಗ ಹಳಿಗೆ ದೂಡಿ ಪತ್ನಿಯ ಹತ್ಯೆ: ಮಕ್ಕಳೆದುರೇ ದುರಂತ

ರೈಲು ಬರುತ್ತಿದ್ದಾಗ ವ್ಯಕ್ತಿಯೊಬ್ಬ ಪತ್ನಿಯನ್ನು ಹಳಿಗೆ ದೂಡಿ ಹತ್ಯೆ ಮಾಡಿದ ಭಯಾನಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹತ್ಯೆಯ ಬಳಿಕ ತನ್ನಿಬ್ಬರು ಮಕ್ಕಳೊಂದಿಗೆ ಆತ ರೈಲ್ವೆ ಫ್ಲಾಟ್‌ಫಾರ್ಮ್‌ನಿಂದ ಪರಾರಿಯಾಗಿದ್ದಾನೆ.

Man pushed his wife in front of a moving train in Palghar district of Maharashtra akb
Author
Bangalore, First Published Aug 23, 2022, 1:34 PM IST

ಮುಂಬೈ: ರೈಲು ಬರುತ್ತಿದ್ದಾಗ ವ್ಯಕ್ತಿಯೊಬ್ಬ ಪತ್ನಿಯನ್ನು ಹಳಿಗೆ ದೂಡಿ ಹತ್ಯೆ ಮಾಡಿದ ಭಯಾನಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಹತ್ಯೆಯ ಬಳಿಕ ತನ್ನಿಬ್ಬರು ಮಕ್ಕಳೊಂದಿಗೆ ಆತ ರೈಲ್ವೆ ಫ್ಲಾಟ್‌ಫಾರ್ಮ್‌ನಿಂದ ಪರಾರಿಯಾಗಿದ್ದಾನೆ. ಈ ಎಲ್ಲಾ ದೃಶ್ಯಗಳು ರೈಲು ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಮಹಾರಾಷ್ಟ್ರದ ಪಾಲ್‌ಘಾರ್ ಜಿಲ್ಲೆಯ ವಾಸಿ ರೋಡ್ ರೈಲು ನಿಲ್ದಾಣದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಕ್ಕಳೆದುರೇ ಪತ್ನಿಯನ್ನು ರೈಲು ಹಳಿಗೆ ದೂಡಿ ಹತ್ಯೆ ಮಾಡಿದ ಪತಿ ವಿರುದ್ಧ ವಾಸಿ ರೈಲ್ವೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌  302ರ ಅಡಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಕೊಲೆಯ ಬಳಿಕ ಪರಾರಿಯಾದ ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 

ಹೆಂಡತಿಯನ್ನು ಹತ್ಯೆ ಮಾಡಿದ ಬಳಿಕ ತನ್ನೆರಡು ಮಕ್ಕಳೊಂದಿಗೆ ಆತ ಸ್ಥಳದಿಂದ ವೇಗವಾಗಿ ಪರಾರಿಯಾಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಈತ ಅಂದಾಜು 30 ವರ್ಷದ ಆಸುಪಾಸಿನಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಹಳಿಗೆ ದೂಡುವ ಮೊದಲು ಈತ ಮಲಗಿದ್ದ ತನ್ನ ಹೆಂಡತಿಯನ್ನು ಎಳೆದುಕೊಂಡು ಹೋಗಿ ರೈಲು ಹಳಿಗೆ ದೂಡುತ್ತಿರುವ ದೃಶ್ಯ ಸೆರೆ ಆಗಿದೆ. ಫ್ಲಾಟ್ಫಾರ್ಮ್‌ ನಂಬರ್ 5 ರಲ್ಲಿಈ ಘಟನೆ ನಡೆದಿದೆ. ನಿದ್ದೆಯಿಂದ ಪತ್ನಿಯನ್ನು ಏಳಿಸಿದ ಆತ ವೇಗವಾಗಿ ಬರುತ್ತಿರುವ ರೈಲಿನ ಮುಂದೆ ತಳ್ಳಿ ಬಿಡುತ್ತಾನೆ. ಪರಿಣಾಮ ಅವಧ್‌ ಎಕ್ಸ್‌ಪ್ರೆಸ್ ಕೆಳಗೆ ಬಿದ್ದು, ಪತ್ನಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ರೈಲ್ವೆಯ ಅಸಿಸ್ಟೆಂಟ್ ಕಮೀಷನರ್ ಆಫ್ ಪೊಲೀಸ್ ಬಾಜಿರಾವ್ ಮಹಾಜನ್ ಈ ವಿಚಾರ ತಿಳಿಸಿದ್ದಾರೆ. 

ಮಹಿಳೆ ಪ್ಲಾಟ್‌ಫಾರ್ಮ್‌ 5ರಲ್ಲಿ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿದ್ದಳು. ಈ ವೇಳೆ ನಿದ್ದೆಯಿಂದ ಆಕೆಯನ್ನು ಏಳಿಸಿದ ಪತಿ ಆಕೆಗೆ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಪ್ಲಾಟ್‌ಫಾರ್ಮ್‌ನಿಂದ ರೈಲು ಬರುತ್ತಿದ್ದ ಹಳಿಯತ್ತ ತಳ್ಳಿದ್ದಾನೆ. ಪರಿಣಾಮ ಆಕೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಂತರ ಆರೋಪಿ ತನ್ನಿಬ್ಬರು ಮಕ್ಕಳೊಂದಿಗೆ ಸ್ಥಳದಿಂದ ವೇಗವಾಗಿ ಹೊರಟು ಹೋಗಿದ್ದಾನೆ. ಘಟನೆಯ ಬಳಿಕ ಆತ ದಾದರ್‌ಗೆ ರೈಲೇರಿ ಹೊರಟು ಹೋಗಿದ್ದಾನೆ. ಅಲ್ಲಿಂದ ಆತ ಕಲ್ಯಾಣಕ್ಕೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ. ಈ ಜೋಡಿ ಅದಕ್ಕೂ ಮೊದಲು ಪರಸ್ಪರ ಜಗಳ ಮಾಡಿ ನಂತರ ಪ್ಲಾಟ್‌ಫಾರ್ಮ್‌ನಲ್ಲಿ ಮಕ್ಕಳೊಂದಿಗೆ ಮಲಗಿದ್ದರು.
 

Follow Us:
Download App:
  • android
  • ios