ನಿನ್ನೆಯಷ್ಟೇ ದೇಶದ 94 ಲೋಕಸಭಾ ಕೇತ್ರಗಳಿಗೆ ಮೂರನೇ ಹಂತದಲ್ಲಿ ಚುನಾವಣೆ ನಡೆದಿದ್ದು, ಮತದಾನ ಮುಗಿಸಿದ ಬಳಿಕ ಮತಪೆಟ್ಟಿಗೆ (ಇವಿಎಂ) ಸಾಗಿಸುತ್ತಿದ್ದ ಬಸ್‌ ಬೆಂಕಿಗಾಹುತಿಯಾದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

ಭೋಪಾಲ್‌: ನಿನ್ನೆಯಷ್ಟೇ ದೇಶದ 94 ಲೋಕಸಭಾ ಕೇತ್ರಗಳಿಗೆ ಮೂರನೇ ಹಂತದಲ್ಲಿ ಚುನಾವಣೆ ನಡೆದಿದ್ದು, ಮತದಾನ ಮುಗಿಸಿದ ಬಳಿಕ ಮತಪೆಟ್ಟಿಗೆ (ಇವಿಎಂ) ಸಾಗಿಸುತ್ತಿದ್ದ ಬಸ್‌ ಬೆಂಕಿಗಾಹುತಿಯಾದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶ ಬೇತೂಲ್‌ನ ಮುಲ್ತಾಯಿ ತೆಹ್ಸಿಲ್‌ನ ಗೌಲ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಕಿಗಾಹುತಿಯಾದ ಬಸ್‌ನಲ್ಲಿ 6 ಮತಗಟ್ಟೆಗಳ ಜನರ ಮತಗಳಿದ್ದ ಮತಪೆಟ್ಟಿಗೆಗಳಿದ್ದವು. 

ಕೆಲ ಮಾಹಿತಿ ಪ್ರಕಾರ ಬಸ್‌ನಲ್ಲಿದ್ದ ತಾಂತ್ರಿಕ ದೋಷದಿಂದಾಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆ ನಡೆಯುವ ವೇಳೆ ಬಸ್‌ನಲ್ಲಿ 36 ಜನ ಚುನಾವಣಾ ಸಿಬ್ಬಂದಿ ಹಾಗೂ 6 ಚುನಾವಣಾ ಬೂತ್‌ನ ಮತಪೆಟ್ಟಿಗೆಗಳಿದ್ದು, ಇವುಗಳಲ್ಲಿ 4 ಮತ ಪೆಟ್ಟಿಗೆಗಳು ಹಾನಿಗೊಳಗಾಗಿವೆ ಎಂದು ತಿಳಿದು ಬಂದಿದೆ. 

ಚಾಮರಾಜನಗರ ಇವಿಎಂ ಧ್ವಂಸ ಪ್ರಕರಣ: ಪೊಲೀಸರಿಗೆ ಹೆದರಿ ಊರು ಬಿಟ್ಟ ಗ್ರಾಮಸ್ಥರು, ಆಹಾರವಿಲ್ಲದೆ ಪ್ರಾಣಬಿಟ್ಟ ಮೂಕಪ್ರಾಣಿಗಳು..!

ಘಟನೆಗೆ ಸಂಬಂಧಿಸಿದಂತೆ ಬೇತುಲ್ ಎಸ್‌ಪಿ ನಿಶ್ಚಲ್ ಝಹ್ರಿಯಾ ಪ್ರತಿಕ್ರಿಯಿಸಿದ್ದು, 6 ಮತದಾನ ಕೇಂದ್ರದ ಮತಪೆಟ್ಟಿಗೆಯೊಂದಿಗೆ ಚುನಾವಣಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ತಾಂತ್ರಿಕ ಕಾರಣದಿಂದ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ 4 ಮತಪಟ್ಟಿಗೆಗಳಿಗೆ ಗಾಯಗಳಾಗಿದ್ದರೆ ಉಳಿದ ಎರಡು ಮತಪೆಟ್ಟಿಗೆಗಳಿಗೆ ಯಾವುದೇ ಹಾನಿಯಾಗಿಲ್ಲ, ಬಸ್‌ನಲ್ಲಿ 36 ಜನರಿದ್ದರು. ಅವರು ಬಸ್‌ನ ಕಿಟಕಿ ಗಾಜುಗಳನನು ಒಡೆದು ಬಸ್‌ನಿಂದ ಕೆಳಗೆ ಹಾರಿದ್ದಾರೆ. ಅವರಿಗೆ ಯಾವುದೇ ಹಾನಿಯಾಗಿಲ್ಲ, ಹಾಗೂ ಮತ್ತೊಂದು ಬಸ್‌ನಲ್ಲಿ ಅವರನ್ನು ಕಳುಹಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. 

ಘಟನೆಗೆ ಸಂಬಂಧಿಸಿದಂತೆ ನಾವು ಚುನಾವಣಾ ಆಯೋಗಕ್ಕೆ ವರದಿ ನೀಡಿದ್ದೇವೆ. ಅಲ್ಲಿಂದ ಸೂಚನೆ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ಚುನಾವಣಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಅವರು ತಮ್ಮ ಬಳಿ ಇದ್ದ ಚುನಾವಣಾ ಸಾಮಗ್ರಿಳಗಳನ್ನು ಇಲ್ಲಿ ಡಿಪಾಸಿಟ್ ಮಾಡಿದ್ದಾರೆ. ಪ್ರತ್ಯಕ್ಷದರ್ಶೀಗಳ ಪ್ರಕಾರ ಇದು ಮೆಕಾನಿಕಲ್ ದೋಷ ಎಂಬುದು ಗೊತ್ತಾಗಿದೆ ಎಂದು ಬೇತೂಲ್ ಕಲೆಕ್ಟರ್ ಡಿಎಂ ನರೇಂದ್ರ ಕುಮಾರ್ ಸೂರ್ಯವಂಶಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ 204: ಚಾಮರಾಜನಗರದಲ್ಲಿ ಇವಿಎಂ‌ ಧ್ವಂಸಕ್ಕೆ ಇದೇ ಮೂಲ ಕಾರಣವಾಯ್ತಾ?

Scroll to load tweet…
Scroll to load tweet…