ಗುವಾಹಟಿ[ಜ.04]: ಅಕ್ರಮ ವಲಸಿಗರನ್ನಿರಿಸಿದ ಅಸ್ಸಾಂನ ಬಂಧನ ಕೇಂದ್ರದಲ್ಲಿ ಬಂಧಿಯಾಗಿದ್ದ ವ್ಯಕ್ತಿಯೊಬ್ಬ ಗುವಾಹಟಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾನೆ. 10 ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಈತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಮೂಲಕ ಬಂಧನ ಕೇಂದ್ರದಲ್ಲಿ ಮೃತಪಟ್ಟವರ ಸಂಖ್ಯೆ 29ಕ್ಕೇರಿಕೆಯಾಗಿದೆ.

2019ರ ಅಕ್ಟೋಬರ್ ನಲ್ಲಿ ಬಂಧನ ಕೇಂದ್ರದಲ್ಲಿ ಬಂಧಿಯಾಗಿದ್ದ 65 ವರ್ಷದ ವೃದ್ಧನೊಬ್ಬ ಗುವಾಹಟಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ವೃದ್ಧನ ಸಾವಿನ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಕುಟುಂಬ ಸದಸ್ಯರು, ವೃದ್ಧ ಮಾನಸಿಕ ಅಸ್ವಸ್ಥನಾಗಿದ್ದು, ವರನ್ನು ಬಂಧನ ಕೇಂದ್ರದಲ್ಲಿ ಬಂಧಿಸಿಡಲಾಗಿತ್ತು ಎಂದಿದ್ದರು. ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ 'ಸೋನಿತ್ಪುರ್ ಜಿಲ್ಲೆಯ ಅಲಿಸಿಂಗ ಹಳ್ಳಿಯ ನಿವಾಸಿಯಾಗಿದ್ದ ದುಲಾಲ್ ಪಾವ್ಲ್ ಅನಾರೋಗ್ಯಕ್ಕೀಡಾಗಿದ್ದರು. ಹೀಗಾಗಿ ಅವರನ್ನು ಸಪ್ಟೆಂಬರ್ 28ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ' ಎಂದಿದ್ದರು. ದುಲಾಲ್ ಪಾವ್ಲ್ 2017ರ ಅಕ್ಟೋಬರ್ 11 ರಿಂದ ತೇಜ್ಪುರದ ಬಂಧನ ಕೇಂದ್ರದಲ್ಲಿ ಬಂಧಿಯಾಗಿದ್ದರು.

ಪೌರತ್ವ ಕಾಯ್ದೆ ವಾಪಸ್‌ ಆಗುತ್ತಾ? : ಗೃಹ ಸಚಿವರ ಸ್ಪಷ್ಟನೆ ಏನು?

ಪ್ರಸ್ತುತ ಅಸ್ಸಾಂನಲ್ಲಿ 6 ಬಂಧನ ಕೇಂದ್ರಗಳಿವೆ. ಹೀಗಿದ್ದರೂ ಬಂಧಿತರನ್ನು ಜಿಲ್ಲಾ ಕಾರಾಗೃಹಗಳಲ್ಲಿ ಇರಿಸಲಾಗಿದೆ. ಇಲ್ಲಿ ತಮ್ಮ ಗುರುತು ಸಾಬೀತುಪಡಿಸಲಾಗದ ಸುಮಾರು 1 ಸಾವಿರಕ್ಕೂ ಅಧಿಕ ಅಕ್ರಮ ವಾಸಿಗಳನ್ನು ಬಂಧಿಸಿಡಲಾಗಿದೆ. 7ನೇ ಬಂಧನ ಕೇಂದ್ರದ ಕಾಮಗಾರಿ ಮುಂದುವರೆದಿದ್ದು, ಇದು ಗೋಲ್ಪರ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುತ್ತಿದೆ.

ಸರ್ಕಾರಿ ದಾಖಲೆಗಳನ್ವಯ ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿಗಳು[Assam’s Foreigners’ Tribunals], ಅಕ್ರಮ ವಲಸಿಗರೆಂದು ಘೋಷಿಸಿರುವ ಬಂಧಿತರಲ್ಲಿ ಈವರೆಗೂ[ಕಳೆದ 3 ವರ್ಷಗಳಲ್ಲಿ] ಒಟ್ಟು 28 ಮಂದಿ ಮೃತಪಟ್ಟಿದ್ದಾರೆನ್ನಲಾಗಿದೆ. 

ಈ ಕುರಿತು ಅಸ್ಸಾಂ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದ ಸಚಿವ ಚಂದ್ರ ಮೋಹನ್ ಪಟೋವರಿ 'ಅಸ್ಸಾಂನ 25 ಬಂಧನ ಕೇಂದ್ರಗಳಲ್ಲಿ ಈವರೆಗೂ ಒಟ್ಟು 25 ಮಂದಿ ಮೃತಪಟ್ಟಿದ್ದಾರ' ಎಂದಿದ್ದರು. 2018 ಹಾಗೂ 2019[ಜುಲೈವರೆಗೆ] 7 ಮಂದಿ, 2017ರಲ್ಲಿ 6 ಮಂದಿ ಹಾಗೂ 2011ರಲ್ಲಿ ಓರ್ವ ಮೃತಪಟ್ಟಿದ್ದಾನೆಂದು ಅವರು ವರದಿಯಲ್ಲಿ ತಿಳಿಸಿದ್ದರು. ಇವರೆಲ್ಲರೂ ಅನಾರೋಗ್ಯದಿಂದ ಮೃತರಾಗಿದ್ದಾರೆಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 

ಅಕ್ರಮ ಬಾಂಗ್ಲಾ ನುಸುಳುಕೋರರು ಭಾರತ ಪ್ರವೇಶಿಸುತ್ತಿರುವ ವಿಡಿಯೋ!

ಇನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸಲಾಗಿದ್ದ ದಾಖಲೆಯಲ್ಲಿ ಮೃತರಲ್ಲಿ ಕೇವಲ ಇಬ್ಬರು ಮಾತ್ರ ಬಾಂಗ್ಲಾದೇಶದವರಾಗಿದ್ದು, ಉಳಿದರ ವಿಳಾಸ ಸ್ಸಾಂ ಎಂದು ನಮೂದಿಸಲಾಗಿತ್ತು. ಅನಾರೋಗ್ಯಕ್ಕೀಡಾಗಿ ಕೊನೆಯುಸಿರೆಳೆದಿದ್ದ 'ಅಕ್ರಮ ವಲಸಿಗರ'ಲ್ಲಿ ಯಾರೊಬ್ಬರ ಮೃತದೇಹವನ್ನು ಬಾಂಗ್ಲಾದೇಶಕ್ಕೆ ರವಾನಿಸಿರಲಿಲ್ಲ ಎಂಬುವುದು ಉಲ್ಲೇಖನೀಯ.