ಟಿಕೆಟ್‌ ಕೊಳ್ಳಲು ದುಡ್ಡಿಲ್ಲ ಎಂದು ರೈಲಿನ ಕೆಳಗೆ ಕುಳಿತು 250 ಕಿ. ಮೀ ಪ್ರಯಾಣ!

ಟಿಕೆಟ್‌ ಕೊಳ್ಳಲು ಕಾಸಿಲ್ಲದ ಕಾರಣ ವ್ಯಕ್ತಿಯೊಬ್ಬ ರೈಲಿನ ಬೋಗಿಯಡಿ ಕುಳಿತು ಬರೋಬ್ಬರಿ 250 ಕಿ.ಮೀ ಪ್ರಯಾಣಿಸಿದ ಬೆಚ್ಚಿಬೀಳೀಸುವ ಘಟನೆ ಡಿ.24ರಂದು ನಡೆದಿದೆ. 

Man Hangs Under Train to Travel 250 km from Itarsi to Jabalpur gvd

ಜಬಲ್ಪುರ (ಡಿ.28): ಟಿಕೆಟ್‌ ಕೊಳ್ಳಲು ಕಾಸಿಲ್ಲದ ಕಾರಣ ವ್ಯಕ್ತಿಯೊಬ್ಬ ರೈಲಿನ ಬೋಗಿಯಡಿ ಕುಳಿತು ಬರೋಬ್ಬರಿ 250 ಕಿ.ಮೀ ಪ್ರಯಾಣಿಸಿದ ಬೆಚ್ಚಿಬೀಳೀಸುವ ಘಟನೆ ಡಿ.24ರಂದು ನಡೆದಿದೆ. ಇಟಾರ್ಸಿಯಿಂದ ಜಬಲ್ಪುರಕ್ಕೆ ಬಂದ ದಾನಾಪುರ ಎಕ್ಸಪ್ರೆಸ್‌ ರೈಲಿನ ಪರಿಶೀಲನೆ ವೇಳೆ ರೈಲ್ವೇ ಸಿಬ್ಬಂದಿಗೆ ಬೋಗಿಯ ಅಡಿ 2 ಚಕ್ರಗಳ ನಡುವೆ ಯುವಕನೊಬ್ಬ ಕಾಣಿಸಿಕೊಂಡಿದ್ದಾನೆ.

ಭದ್ರತಾ ದೃಷ್ಟಿಯಿಂದ ಕೂಡಲೇ ರೈಲನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಲಾಗಿದೆ. ಬಳಿಕ ವಿಚಾರಣೆ ವೇಳೆ ತನ್ನ ಬಳಿ ಹಣವಿಲ್ಲದ ಕಾರಣ ಇಂತಹ ಸಾಹಸಕ್ಕೆ ಕೈಹಾಕಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಆ ಯುವಕ ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಆತನ ಗುರುತು ಪತ್ತೆಗೆ ಯತ್ನಿಸಲಾಗುತ್ತಿದೆ. ಆದಾಗ್ಯೂ ಆತ 250 ಕಿ.ಮೀ.ನಷ್ಟು ದೂರ ಹೇಗೆ ರೈಲಿನ ಕೆಳಗೆ ಕುಳಿತು ಹೇಗೆ ಪ್ರಯಾಣಿಸಿದ ಎಂಬುದು ಅಚ್ಚರಿಯ ವಿಷಯವಾಗಿದೆ.

ಕಾಂಗ್ರೆಸ್‌ ಗಾಂಧಿಗಿರಿಗೆ 100: ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ

ಇಂದಿನಿಂದ 11 ಎಲೆಕ್ಟ್ರಿಕ್ ರೈಲು ಸಂಚಾರ: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಬ್ರಾಡ್‌ಗೇಜ್‌ ಹಳಿಗಳ ಶೇ.100 ವಿದ್ಯುದೀಕರಣ ಪೂರ್ಣಗೊಂಡಿದೆ. ಬಾಕಿಯಿದ್ದ ಹಾಸನ, ಚಿಕ್ಕಬಳ್ಳಾಪುರ ಮಾರ್ಗದಲ್ಲೂ ಕಾಮಗಾರಿ ಮುಗಿದಿರುವ ಕಾರಣದಿಂದ ಈವರೆಗೆ ಡೀಸೆಲ್‌ನಲ್ಲಿ ಓಡುತ್ತಿದ್ದ 11 ರೈಲುಗಳು (ಡೆಮು) ಶುಕ್ರವಾರದಿಂದ (ಡಿ. 27) ಎಲೆಕ್ಟ್ರಿಕ್‌ ರೈಲುಗಳಾಗಿ (ಮೆಮು) ಸಂಚರಿಸಲಿವೆ. ಬೆಂಗಳೂರು ವಿಭಾಗ 1138 ಕಿಮೀ ಉದ್ದದ ಹಳಿ ಹೊಂದಿದ್ದು ಈ ಪೈಕಿ ಕರ್ನಾಟಕ 971ಕಿಮೀ, ತಮಿಳುನಾಡು 173ಕಿಮೀ ಹಾಗೂ ಆಂಧ್ರಪ್ರದೇಶದಲ್ಲಿ 172 ಕಿಮೀ ಉದ್ದ ಸೇರಿದೆ. 

ಕಳೆದ ವರ್ಷವೇ ಹಾಸನದ ಹಿರಿಸಾವೆ ಮಾರ್ಗದಲ್ಲಿ ಈಚೆಗೆ 110 ಕಿ.ಮೀ ಸೆಕ್ಷನಲ್‌ ಸ್ಪೀಡ್ ಪ್ರಾಯೋಗಿಕ ಸಂಚಾರ ಯಶಸ್ವಿ ಆಗುವುದರ ಮೂಲಕ ಬೆಂಗಳೂರು ವಿಭಾಗವು ಶೇ.100ರಷ್ಟು ವಿದ್ಯುದೀಕರಣ ಸಂಪರ್ಕ ಸಾಧಿಸಿತ್ತು. ಆದರೆ, ಚಿಕ್ಕಬಳ್ಳಾಪುರ-ಕೋಲಾರ ಮಾರ್ಗದ ಚಿಂತಾಮಣಿ ಬಳಿ ಟ್ರಾಕ್ಷನ್‌ ಸಬ್‌ಸ್ಟೇಷನ್ (ಟಿಎಸ್‌ಎಸ್‌) ಅಂದರೆ ಹಳಿಗೆ ವಿದ್ಯುತ್‌ ಪೂರೈಸುವ ಕೆಲಸ ಬಾಕಿಯಿತ್ತು. ಫೆಬ್ರವರಿ ವೇಳೆಗೆ ಕಾಮಗಾರಿ ಪೂರ್ಣಗೊಂಡು ಎಲೆಕ್ಟ್ರಿಕ್‌ ರೈಲುಗಳ ಸಂಚಾರ ಆರಂಭಿಸಬೇಕಿತ್ತು. ಆದರೆ, ವಿಳಂಬವಾಗಿ ಈಗ ಬೆಂಗಳೂರಿಂದ ಕೋಲಾರದ ಹಾಗೂ ಹಾಸನದವರೆಗೆ ಮೆಮು ರೈಲುಗಳು ಓಡಾಡಲಿವೆ.

ಕೇವಲ ಕಾಂಗ್ರೆಸ್‌ ಅಲ್ಲ, ಎಲ್ಲರ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್

ಡೀಸೆಲ್‌ ರೈಲು ಅನಿವಾರ್ಯ: ಬೆಂಗಳೂರು ವಿಭಾಗ ಎಲೆಕ್ಟ್ರಿಫಿಕೇಶನ್‌ ಪೂರ್ಣಗೊಂಡಿದ್ದರೂ ಕೂಡ ಕೆಲವೆಡೆ ಡೆಮು ರೈಲು ಓಡುವುದು ಅನಿವಾರ್ಯ. ವಿಶೇಷವಾಗಿ ಹುಬ್ಬಳ್ಳಿ, ಶಿವಮೊಗ್ಗ ಕಡೆಗೆ ಡೀಸೆಲ್‌ ರೈಲುಗಳು ಓಡಾಡಬೇಕಿದೆ. ಶಿವಮೊಗ್ಗದಿಂದ ಮುಂದಕ್ಕೆ ವಿದ್ಯುದೀಕರಣ ಕಾಮಗಾರಿ ಬಾಕಿ ಇದೆ. ಅದರಂತೆ, ಬೆಂಗಳೂರಿಂದ ಪಂಡರಾಪುರಕ್ಕೆ ಹೋಗುವ ಗೋಲಗುಂಬಜ್‌ ಎಕ್ಸ್‌ಪ್ರೆಸ್‌ ಹುಬ್ಬಳ್ಳಿವರೆಗೆ ಎಸಿ ಟ್ರಾಕ್ಷನ್‌ ಮೂಲಕ ರೈಲು ಸಾಗಿ ಅಲ್ಲಿಂದ ಡೀಸೆಲ್‌ ರೈಲು ಹೋಗಲಿದೆ. ಬಾಗಲಕೋಟೆ ಕಡೆಯಲ್ಲಿ ಇನ್ನೂ ಕೆಲ ಕಾಮಗಾರಿ ಬಾಕಿ ಇದೆ. ಅದರಂತೆ, ಗೋವಾ ಕಡೆಯಲ್ಲೂ ವಿದ್ಯುದ್ದೀಕರಣ ಆಗಿರದ ಕಾರಣ ಅಲ್ಲಿಗೆ ಡೀಸೆಲ್‌ ರೈಲುಗಳ ಸಂಚಾರ ಅನಿವಾರ್ಯ. ಚಂಡಿಗಢಗೆ ಹೋಗುವ ಸಂಪರ್ಕ ರೈಲು ಲೊಕೋಪೈಲಟ್‌ ಸಮಸ್ಯೆ ಕಾರಣಕ್ಕೆ ಡೀಸೆಲ್‌ ರೈಲುಗಳು ಓಡುವುದು ಅನಿವಾರ್ಯ. ಆದರೆ, ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಇನ್ನು ಮುಂದೆ ಸಂಪೂರ್ಣವಾಗಿ ಎಲೆಕ್ಟ್ರಿಕ್‌ ರೈಲುಗಳು ಓಡಾಡಲು ಸಜ್ಜಾಗಿದೆ.

Latest Videos
Follow Us:
Download App:
  • android
  • ios