Asianet Suvarna News Asianet Suvarna News

ಟ್ರೆಡ್‌ಮಿಲ್‌ನಲ್ಲಿ ಹಾಯ್‌ ರಾಮಾ ಹಾಡಿಗೆ ವ್ಯಕ್ತಿಯ ಸೂಪರ್‌ ಡಾನ್ಸ್‌, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌!

ರಂಗೀಲಾ ಚಿತ್ರದ ಹೇ ರಾಮಾ ಹಾಡಿಗೆ ವ್ಯಕ್ತಿಯೊಬ್ಬರು ಟ್ರೆಡ್‌ಮಿಲ್‌ನಲ್ಲಿ ಡಾನ್ಸ್‌ ಮಾಡುತ್ತಿರುವುದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Man grooves to Hai Rama on treadmill, viral video takes internet by storm San
Author
First Published Nov 18, 2023, 5:23 PM IST

ನವದೆಹಲಿ (ನ.18): ಸಾಕಷ್ಟು ವ್ಯಕ್ತಿಗಳು ಪಾಪ್ಯುಲರ್‌ ಸಾಂಗ್‌ಗಳಿಗೆ ಡಾನ್ಸ್‌ ಮಾಡಿದ ಅದರ ವಿಡಿಯೋಗಳನ್ನು ತಮ್ಮ ತಮ್ಮ ಇನ್ಸ್‌ಟಾಗ್ರಾಮ್‌ ಖಾತೆಗಳಲ್ಲಿ ಪೋಸ್ಟ್‌ ಮಾಡುವುದನ್ನು ಇಷ್ಟಪಡುತ್ತಾರೆ. ಕೆಲವು ವಿಡಿಯೋಗಳನ್ನು ನೋಡಲು ಬಹಳ ಖುಷಿಯಾದರೆ ಇನ್ನೂ ಕೆಲವು ವಿಡಿಯೋಗಳನ್ನು ನೋಡಿದರೆ, ನಾವು ಮಂತ್ರಮುಗ್ಧರಾಗಿಬಿಡುತ್ತೇವೆ. ಅಂಥದ್ದೇ ಒಂದು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರ ಗಮನಸೆಳೆದಿದೆ. ಇದರಲ್ಲಿ ವ್ಯಕ್ತಿಯೊಬ್ಬ ಟ್ರೆಡ್‌ಮಿಲ್‌ನಲ್ಲಿ ರಂಗೀಲಾದ ಹೇ ರಾಮಾ ಹಾಡಿಗೆ ಡಾನ್ಸ್‌ ಮಾಡಿದ್ದು, ಇಂಟರ್ನೆಟ್‌ನಲ್ಲಿ ಸಾಕಷ್ಟು ವೈರಲ್‌ ಆಗಿದೆ. ಇನ್ಸ್‌ಟಾಗ್ರಾಮ್‌ನ ಯೂಸರ್‌ ಹಾಗೂ ಡಾನ್ಸರ್‌ ಆಗಿರುವ ಅಲೋಕ್‌ ಶರ್ಮ ಈ ವಿಡಿಯೋವನ್ನು ತಮ್ಮ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಟ್ರೆಡ್‌ಮಿಲ್‌ನಲ್ಲಿ ನಿಂತಿರುವ ಅವರು ರೆಟ್ರೋ ಹಾಡಿಗೆ ಅತ್ಯಾಕರ್ಷಕವಾಗಿ ಹೆಜ್ಜೆ ಹಾಕಿದ್ದನ್ನು ವಿಡಿಯೋ ತೋರಿಸಿದೆ. ಇನ್ನು ಈ ವಿಡಿಯೋದ ಉತ್ತಮ ಅಂಶ ಏನೆಂದರೆ, ಟ್ರೆಡ್‌ಮಿಲ್‌ನಲ್ಲಿ ಡಾನ್ಸ್‌ ಮಾಡುವಾಗಲೂ ರಂಗೀಲಾ ಚಿತ್ರದ ಹೇ ರಾಮಾ ಹಾಡಿನ ಹುಕ್‌ ಸ್ಟೆಪ್‌ ಮಾಡುವುದನ್ನು ಅವರು ಮರೆತಿಲ್ಲ. ಈ ವಿಡಿಯೋಗೆ ಹೇ ರಾಮಾ ಎಂದು ಕ್ಯಾಪ್ಶನ್‌ ಹಾಕಿದ್ದಾರೆ.

ನವೆಂಬರ್ 9 ರಂದು ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಕ್ಲಿಪ್ 2,000 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಕಂಡಿದ್ದು, ಇದರ ಸಂಖ್ಯೆಗಳು ಇನ್ನಷ್ಟು ಏರುತ್ತಿವೆ. ಕ್ಲಿಪ್ 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೆಟಿಜನ್‌ಗಳು ಅವರ ಅಭಿನಯವನ್ನು ಸಂಪೂರ್ಣವಾಗಿ ಆನಂದಿಸಿದ್ದಲ್ಲದೆ, ಅವರ ನಿರ್ವಹಣೆಗೆ ಕಾಮೆಂಟ್‌ ಸೆಕ್ಷನ್‌ನಲ್ಲಿ ಬಹಳ ಮೆಚ್ಚುಗೆ ದಾಖಲಿಸಿದ್ದಾರೆ.

 

ರೋಹಿತ್‌ ಶರ್ಮಾ ಬಸ್‌ನಲ್ಲಿ ಹೋಗುವಾಗ ಫ್ಯಾನ್ಸ್‌ಗೆ ಬೈದ್ರೋ, ಹೊಗಳಿದ್ರಾ? ಲಿಪ್‌ ರೀಡಿಂಗ್‌ ಬಂದ್ರೆ ಕಮೆಂಟ್‌ ಮಾಡಿ!

ಇದನ್ನು ನೋಡಿ ಬಹಳ ಖುಷಿಯಾಯಿತು. ನಿಮ್ಮ ವಿಡಿಯೋಗಳು ಬಹಳ ಸುಂದರವಾಗಿರುತ್ತದೆ ಎಂದು ಇನ್ಸ್‌ಟಾಗ್ರಾಮ್‌ನಲ್ಲಿ ಒಬ್ಬರು ಬರೆದಿದ್ದಾರೆ. ನಾನು ಗುಜರಾತ್‌ನವನು. ನಿಮ್ಮ ರೀಲ್ಸ್‌ ನೋಡಿ ನಮಗೆ ಬಹಳ ಬೆಸ್ಟ್‌ ಅನಿಸಿದೆ ಎಂದು ಬರೆದಿದ್ದಾರೆ. ನೀವು ಯಾಕೆ ಡಾನ್ಸ್‌ ಇಂಡಿಯಾ ಡಾನ್ಸ್‌ ಕಾರ್ಯಕ್ರಮದಲ್ಲಿ ಯಾಕೆ ಟ್ರೈ ಮಾಡಬಾರದು. ಬಹಳ ಉತ್ತಮವಾಗಿ ಡಾನ್ಸ್‌ ಮಾಡ್ತೀರಿ ಎಂದು ಇನ್ನೊಬ್ಬರು ಬರೆದಿದ್ದಾರೆ. ಇನ್ನೂ ಕೆಲವು ಬಳಕೆದಾರರು ಸಾಕಷ್ಟು ಇಮೋಜಿಗಳನ್ನು ಬಳಸಿ ಪೋಸ್ಟ್‌ ಮಾಡಿದ್ದಾರೆ.

ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುವ ಹಿಂದೂಗಳು ಮುಸ್ಲಿಂ ಆಗಿ ಹೊರಬರ್ತಾರೆ: Javed Miandad

 

Follow Us:
Download App:
  • android
  • ios