ಮುಂಬೈ(ಜೂ.20): ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಎಷ್ಟೇ ಮನವಿ ಮಾಡಿದರೂ ಸರ್ಕಾರ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳುವುದೇ ಇಲ್ಲ. ಹೀಗಾಗಿ ಮುಂಬೈನಲ್ಲಿ ದಾದಾರಾವ್‌ ಬಿಲ್ಹೋರೆ ಎನ್ನುವವರು ತಾವೇ ಸ್ವತಃ ರಸ್ತೆ ಗುಂಡಿಯನ್ನು ಮುಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ.

ರಸ್ತೆಗುಂಡಿಯಿಂದ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಾದಾರಾವ್‌ 2015ರಲ್ಲಿ ತಮ್ಮ 16 ವರ್ಷದ ಮಗನನ್ನು ಕಳೆದುಕೊಂಡಿದ್ದರು. ಬಳಿಕ ಎಲ್ಲೇ ರಸ್ತೆ ಗುಂಡಿ ಕಂಡರೂ ಮಣ್ಣುಹಾಕಿ ಮುಚ್ಚುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇದುವರೆಗೆ 500ಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ದಾದಾರಾವ್‌ ಮುಚ್ಚಿದ್ದಾರೆ. ಅಲ್ಲದೇ ರಸ್ತೆಗುಂಡಿಯ ಬಗ್ಗೆ ಮಾಹಿತಿ ಪಡೆಯಲು ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.

ಇದೀಗ ದಾದಾರಾವ್‌ ಅವರ ಕಾರ್ಯ ಎಲ್ಲರ ಗಮನ ಸೆಳೆಯುತ್ತಿದೆ. ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಅವರು ದಾದಾರಾವ್‌ ಬಗ್ಗೆ ಟ್ವೀಟ್‌ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.