Asianet Suvarna News Asianet Suvarna News

ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಅಶ್ಲೀಲ AI ವಿಡಿಯೋ ಸೃಷ್ಟಿಸಿ ಬ್ಲಾಕ್‌ಮೇಲ್, ತನಿಖೆಗೆ SIT ರಚನೆ!

ಮಹಿಳಾ ಕಾಲೇಜಿನ 50ಕ್ಕೂ ವಿದ್ಯಾರ್ಥಿಗಳ ಅಶ್ಲೀಲ  AI ವಿಡಿಯೋ ಸೃಷ್ಟಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಸರ್ಕಾರ SIT ರಚಿಸಿದ್ದು, ತ್ವರಿತಗತಿಯಲ್ಲಿ ಆರೋಪಿ ಬಂಧಿಸಲು ಸೂಚಿಸಿದೆ.
 

Man extort money from Colleg girls after sending AI generated obscene video madhya Pradesh ckm
Author
First Published Sep 16, 2024, 7:46 PM IST | Last Updated Sep 16, 2024, 7:46 PM IST

ಜಬಲಪುರ್(ಸೆ.16) ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಟ್‌ಜಿಪಿಟಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಿದ್ದಂತೆ ಸೈಬರ್ ಕ್ರೈಂ ಸಮಸ್ಯೆಗಳು ಹೆಚ್ಚಾಗುತ್ತಿದೆ. ದೇಶದಲ್ಲಿ ಈಗಾಗಲೇ ಡೀಫ್ ಫೇಕ್ ವಿಡಿಯೋ ಕೋಲಾಹಲ ಸೃಷ್ಟಿಸಿದೆ. ನಟಿಯರ ಫೇಕ್ ವಿಡಿಯೋ ಸೃಷ್ಟಿಸಿ ಹರಿಬಿಟ್ಟ ಪ್ರಕರಣ ವರದಿಯಾಗಿದೆ. ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಮಹಿಳಾ ಕಾಲೇಜು ಸೇರಿದಂತೆ ಇತರ ಮಹಿಳೆಯರ ಅಶ್ಲೀಲ ವಿಡಿಯೋ  ಸೃಷ್ಟಿಸಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಪ್ರಕರಣ ಮಧ್ಯಪ್ರದೇಶದ ಜಬಲಪುರದಲ್ಲಿ ವರದಿಯಾಗಿದೆ.

ಮನ್‌ಕುನ್‌ವಾರ್ ಬಾಯಿ ಮಹಿಳಾ ಕಾಲೇಜಿನ 50ಕ್ಕೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳನ್ನು ಎಐ ಮೂಲಕ ಸೃಷ್ಟಿಸಿದ್ದಾನೆ. ಬಳಿಕ ವಿದ್ಯಾರ್ಥಿನಿಯರ ವ್ಯಾಟ್ಸಾಪ್‌ಗೆ ಈ ವಿಡಿಯೋ ಕಳುಹಿಸಿ ಹಣ ಹಾಗೂ ಇತರ ಬೇಡಿಕೆ ಮುಂದಿಟ್ಟಿದ್ದಾನೆ. ಕೆಲ ವಿದ್ಯಾರ್ಥಿನಿಯರು 5,000 ರೂಪಾಯಿ, 3000 ರೂಪಾಯಿ ಸೇರಿದಂತೆ ಒಂದಷ್ಟು ಹಣ ಆರೋಪಿಗೆ ವರ್ಗಾವಣೆ ಮಾಡಿದ್ದಾರೆ. 

ಫ್ಯಾನ್‌ ಫೇಜ್‌ ನಡೆಸುತ್ತಿದ್ದವನಿಂದಲೇ ರಶ್ಮಿಕಾ ಡೀಪ್ ಫೇಕ್‌ ವಿಡಿಯೋ ಸೃಷ್ಟಿ: ಆಂಧ್ರದಲ್ಲಿ ಆರೋಪಿ ಬಂಧನ

ವ್ಯಾಟ್ಸಾಪ್‌ಗೆ ಅಶ್ಲೀಲ ವಿಡಿಯೋ ಕಳುಹಿಸುವ ಈತ, ಬಳಿಕ ಪೊಲೀಸ್ ಅಧಿಕಾರಿ ವಿಕ್ರಮ್ ಗೋಸ್ವಾಮಿ ಅನ್ನೋ ಹೆಸರಿನಲ್ಲಿ ಕರೆ ಮಾಡುತ್ತಿದ್ದ. ವಿಡಿಯೋ ಪೊಲೀಸರಿಗೆ ಸಿಕ್ಕಿದೆ. ಈ ವಿಡಿಯೋ ಆಧರಿಸಿ ದೂರು ದಾಖಲಿಸಲಾಗುತ್ತದೆ. ನೇರವಾಗಿ ನಿಮ್ಮ ಪೋಷಕರ ಮನೆಗೆ ದಾಳಿ ಮಾಡಲಾಗುತ್ತದೆ ಎಂದು ಬೆದರಿಸುತ್ತಿದ್ದ. ಈತನ ಬೆದರಿಕೆ ಹಾಗೂ ಮಾನಕ್ಕೆ ಅಂಜಿದ ಹಲವು ವಿದ್ಯಾರ್ಥಿಗಳು ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಈತನ ಬೇಡಿಕೆ ಹೆಚ್ಚಾಗುತ್ತಲೇ ಹೋಗಿದೆ. 

ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಮಹಿಳಾ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ. ದೂರು ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದಕ್ಕಾಗಿ ಸ್ಪೆಷಲ್ ಇನ್‌ವೆಸ್ಟಿಗೇಶನ್ ತಂಡ(ಎಸ್ಐಟಿ) ರಚನೆ ಮಾಡಲಾಗಿದೆ. ವಿದ್ಯಾರ್ಥಿನಿಯ ನಂಬರ್‌ಗೆ ವಿಡಿಯೋ ಕಳುಹಿಸುತ್ತಿದ್ದ ಅನ್ನೋ ವಿದ್ಯಾರ್ಥಿನಿಯರ ಮಾತು ಇದೀಗ ಪೊಲೀಸರಿಗೆ ಮಹತ್ವ ಸುಳಿವು ನೀಡಿದೆ. ವಿದ್ಯಾರ್ಥಿನಿಯ ನಂಬರ್ ಈತನಿಗೆ ಹೇಗೆ ಸಿಕ್ಕಿತ್ತು. ಕಾಲೇಜು ಒಳಗಿನ ಯಾರೋ ಇದನ್ನು ಮಾಡಿರುವ ಸಾಧ್ಯತೆ ಇದೆ. ಅಥವಾ ವಿದ್ಯಾರ್ಥಿನಿಯರ ನಂಬರ್ ಎಲ್ಲಿ ಸೋರಿಕೆಯಾಗಿದೆ ಅನ್ನೋದು ಪತ್ತೆ ಹಚ್ಚಿದರು ಆರೋಪಿ ಸುಳಿವು ಸಿಗುವ ಸಾಧ್ಯತೆಯನ್ನು ಪೊಲೀಸರು ಚರ್ಚಿಸಿದ್ದರೆ.

50ಕ್ಕೂ ಯುವತಿಯರನ್ನು ಈತ ಟಾರ್ಗೆಟ್ ಮಾಡಿದ್ದಾನೆ. ಆದರೆ ಕೇವಲ ಮೂವರು ಮಾತ್ರ ಮುಂದೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತರ ವಿದ್ಯಾರ್ಥಿನಿಯರು ಈ ಕುರಿತು ಯಾವುದೇ ಮಾಹಿತಿ, ಆತ ಕಳುಹಿಸಿದ ವಿಡಿಯೋ, ಸಂದೇಶ, ಫೋನ್ ಕಾಲ್ ಇದ್ದರೆ ಮಾಹಿತಿ ನೀಡಲ ಮನವಿ ಮಾಡಿದ್ದಾರೆ.

ಡೀಫ್‌ ಫೇಕ್‌ ಆಯ್ತು, ಈಗ ಕ್ಲಿಯರ್‌ ಫೇಕ್‌ ಕಾಟ ಶುರು: ಇದು ಇನ್ನೂ ಡೇಂಜರಸ್

Latest Videos
Follow Us:
Download App:
  • android
  • ios