ಕನಸು ನನಸಾಗಿದೆ. ಹೀಗಾಗಿ ಗುಡಿಗೆ ತೆರಳಿ ಮೇಕೆಯನ್ನು ಬಲಿಕೊಟ್ಟಿದ್ದಾನೆ. ಬಳಿಕ ರುಚಿಯಾದ ಅಡುಗೆ ಮಾಡಲಾಗಿದೆ. ಆದರೆ ಮೇಕೆಯ ಆಕ್ರೋಶದ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಮೇಕೆ ಕೊಂದು ತಿಂದ ವ್ಯಕ್ತಿ ಮೇಕೆಯ ಕಣ್ಣಿನಿಂದಲೇ ಮೃತಪಟ್ಟಿದ್ದಾನೆ.
ರಾಯ್‌ಪುರ್(ಜು.04) ಹಲವು ದಿನಗಳಿಂದ ಕಾಣುತ್ತಿದ್ದ ಕನಸು ನನಸಾಗಿಸಲು ಗ್ರಾಮ ದೇವರ ಮೊರೆ ಹೋಗಿದ್ದ. ಹರಕೆ ಹೊತ್ತು ಕೆಲ ದಿನಗಳಲ್ಲೇ ಈತನ ಬಯಕೆ ಈಡೇರಿದೆ. ಕನಸು ನನಸಾದ ಬೆನ್ನಲ್ಲೇ ಈತ ಹರಕೆ ತೀರಿಸಲು ಮುಂದಾಗಿದ್ದಾನೆ. ಇದಕ್ಕಾಗಿ ಮೇಕೆಯನ್ನು ಬಲಿಕೊಟ್ಟಿದ್ದಾನೆ. ಬಳಿಕ ಗ್ರಾಮಸ್ಥರು ಅಡುಗೆ ಮಾಡಿದ್ದಾರೆ. ಮೇಕೆಯ ಕಣ್ಣನ್ನು ಅಡುಗೆ ಮಾಡಲಾಗಿದೆ. ಒಂದು ಕಣ್ಣು ತೆಗೆದು ಬಾಯಿಗೆ ಹಾಕಿದ ಈತನಿಗೆ ಸಂಕಷ್ಟ ಎದುರಾಗಿದೆ. ಕೆಲವೇ ಕ್ಷಣದಲ್ಲಿ ಈತ ಕುಸಿದು ಬಿದ್ದು ಮೃತಪಟ್ಟ ಘಟನೆ ಚತ್ತೀಸಘಡದಲ್ಲಿ ನಡೆದಿದೆ.
ಸುರಾಜ್‌ಪುರ ಜಿಲ್ಲೆಯ ಮದನಪುರ್ ಗ್ರಾಮದ 50 ವರ್ಷದ ಬಗರ್ ಸಾಯಿ ತನ್ನ ಕನಸು ನನಸಾಗಿಸಲು ಹಲವು ಪ್ರಯತ್ನ ಪಟ್ಟಿದ್ದ. ಪರಿಶ್ರಮ, ಪ್ರಯತ್ನಕ್ಕೆ ಫಲ ನೀಡಲಿಲ್ಲ. ಆದರೆ ತನ್ನ ಪ್ರಯತ್ನ ಮಾತ್ರ ಬಿಡಲಿಲ್ಲ. ಇತ್ತ ಕೋಪಾಧಾಮ್ ಬಳಿಯ ಗ್ರಾಮ ದೇವರಿಗೆ ಹರಕೆ ಹೊತ್ತಿದ್ದ. ಹರಕೆ ಹೊತ್ತ ಕೆಲ ದಿನಗಳಲ್ಲೇ ಈತನ ಕನಸು ನನಸಾಗಿದೆ. ಅಂದುಕೊಂಂತೆ ಕೆಲಸವೂ ಆಗಿದೆ. ಈತನ ಖುಷಿಗೆ ಪಾರವೇ ಇರಲಿಲ್ಲ. ಹೀಗಾಗಿ ಕೋಪಾಧಾಮಕ್ಕೆ ತೆರಳಿ ಮೇಕೆ ಬಲಿಕೊಡಲು ಮುಂದಾಗಿದ್ದಾನೆ.
ಗಂಡ-ಹೆಂಡ್ತಿ ಇಬ್ರೂ ಪೊಲೀಸ್: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾದ ಪತಿ
ಕೋಪಾಧಾಮ್ ಬಳಿಯ ಗುಡಿಯ ವಿಶೇಷತೆ ಅಂದರೆ ಮೇಕೆ ಅಥವಾ ಕೋಳಿಯನ್ನು ಬಲಿಕೊಟ್ಟು ಅಲ್ಲಿಯೇ ಅಡುಗೆ ಮಾಡಿ ಎಲ್ಲರೂ ಜೊತೆಯಾಗಿ ಆಹಾರ ಸೇವಿಸುವುದು ಪದ್ಧತಿ. ಕುಟುಂಬದೊಳಗಿನ ಮನಸ್ತಾಪ, ಇಷ್ಟಾರ್ಥಗಳು ಸೇರಿದಂತೆ ಎಲ್ಲವನ್ನು ಈ ಗುಡಿ ದೇವರು ಪರಿಹರಿಸುತ್ತಾರೆ ಅನ್ನೋದು ನಂಬಿಕೆ. ತನ್ನ ಇಷ್ಟಾರ್ಥ ಈಡೇರಿದ ಕಾರಣ ಬಗರ್ ಸಾಯಿ ಹಾಗೂ ಕೆಲ ಸ್ಥಳೀಯರು ಪೂಜೆ ಸಲ್ಲಿಸಿ ಮೇಕೆಯನ್ನು ಬಲಿಕೊಟ್ಟಿದ್ದಾರೆ. ಬಳಿಕ ಮೇಕೆಯನ್ನು ಅಡುಗೆ ಮಾಡಿದ್ದಾರೆ.
ಮೇಕೆಯನ್ನು ಅಡುಗೆಯ ಬಳಿಕ ಪದ್ಧತಿಯಂತೆ ಗುಡಿ ಆವರಣದಲ್ಲಿ ಸವಿಯುವಲು ಮುಂದಾಗಿದ್ದಾರೆ. ಆಡುಗೆ ವೇಳೆ ಮೇಕೆಯನ್ನು ಕಣ್ಣು ಸೇರಿದಂತೆ ಇತರ ವಸ್ತುಗಳನ್ನು ಅಡುಗೆ ಮಾಡಲಾಗಿದೆ. ಅಡುಗೆ ಬಡಿಸಿದ ಬಳಿಕ ಬಗರ್ ಸಾಯಿ ಮೇಕೆಯ ಒಂದು ಕಣ್ಣು ತೆಗೆದು ಬಾಯಿಗೆ ಹಾಕಿದ್ದಾನೆ. ಈ ಕಣ್ಣು ನೇರವಾಗಿ ಗಂಟಲಿನಲ್ಲಿ ಸಿಲುಕಿದೆ. ಕೆಲವೇ ಕ್ಷಣದಲ್ಲಿ ಈತ ಕುಸಿದು ಬಿದ್ದಿದ್ದಾನೆ. ಗಂಟಲಿನಲ್ಲಿ ಮೇಕೆ ಕಣ್ಣು ಸಿಲುಕಿಕೊಂಡ ಕಾರಣ ಉಸಿರಾಟದ ಸಮಸ್ಯೆಯಾಗಿದೆ.
Bengaluru: ತಾನು ಸಾಕಿದ ನಾಯಿ ಬೆಲ್ಟ್‌ನಿಂದಲೇ ನೇಣು ಬಿಗಿದುಕೊಂಡ ಯುವಕ
ತಕ್ಷಣವೇ ಸ್ಥಳೀಯರು ಸೂರಾಜ್‌ಪುರ್ ಜಿಲ್ಲಾಸ್ಪರ್ತೆಗೆ ದಾಖಲಿಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಆಸ್ಪತ್ರೆ ಸಾಗಿಸುವ ದಾರಿಯ ಮಧ್ಯಯೇ ಬಗರ್ ಸಾಯಿ ಮೃತಪಟ್ಟಿದ್ದಾನೆ. ಮೇಕೆ ಕೊಂದು ಅಡುಗೆ ಮಾಡಿದ ಬಗರ್ ಸಾಯಿ ಇದೀಗ ಮೇಕೆಯ ಕಣ್ಣಿನಿಂದಲೇ ಮೃತಪಟ್ಟಿದ್ದಾನೆ. ಇತ್ತ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆಯಿಂದ ಸುರಾಜ್‌ಪುರ್ ಜಿಲ್ಲೆಯ ಮದನಪುರ್ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಪೂಜಾ ಕಾರ್ಯದಲ್ಲಿ ಲೋಪವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.ಅವಸರವಾಗಿ ಬಗರ್ ಸಾಯಿ ಮೇಕೆ ಕಣ್ಣು ಸವಿಯಲು ಮುಂದಾಗಿದ್ದಾನೆ. ಆದರೆ ಬಿಸಿ ಇದ್ದ ಕಾರಣ ಬಾಯಿ ಸುಡುವ ಪರಿಸ್ಥಿತಿ ಇತ್ತು. ಹೀಗಾಗಿ ನುಂಗಲು ಪ್ರಯತ್ನಿಸಿದ್ದಾನೆ. ಅತ್ತ ನುಂಗಲು ಆದರೇ ಉಗುಳಲು ಆಗದೇ ಬಗರ್ ಸಾಯಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.
.
