ಲಕ್ನೋ[ನ.19]: ಉತ್ತರ ಪ್ರದೇಶದ ವಾರಾಣಸಿಯ ವ್ಯಕ್ತಿಯೊಬ್ಬ ಭಾರತೀಯ ಯೋಧರಿಗಾಗಿ 'ಐರನ್ ಮ್ಯಾನ್'[ಉಕ್ಕಿನ ಮನುಷ್ಯ] ಸೂಟ್ ತಯಾರಿಸಿದ್ದಾರೆ. ಶತ್ರುಗಳೊಂದಿಗೆ ಹೋರಾಡುವಾಗ ಈ ಕವಚ ಗುಂಡೇಟನ್ನು ತಡೆಯುತ್ತದೆ. 

ವಾರಾಣಸಿಯ ಅಶೋಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಆ್ಯಂಡ್ ಮ್ಯಾನೇಜ್ಮೆಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಮ್ ಚೌರಾಸಿಯಾ ಎಂಬವರು ತಯಾರಿಸಿದ್ದಾರೆ. ಭಾರತೀಯ ಸೇನೆಯನ್ನು ಗಮನದಲ್ಲಿಟ್ಟುಕೊಂಡು ಈ ಸೂಟ್ ನಿರ್ಮಿಸಿದ್ದಾರೆ.

ANI ಜೊತೆ ಮಾತನಾಡಿರುವ ಶಾಮ್ 'ಇದೊಂದು ಲೋಹದಿಂದ ತಯಾರಿಸಿದ ಕವಚವಾಗಿದ್ದು, ಇದು ಭಾರತೀಯ ಯೋಧರನ್ನು ಭಯೋತ್ಪಾದಕರು ಹಾಗೂ ಶತ್ರುಗಳಿಂದ ರಕ್ಷಿಸಲಿದೆ. ಸದ್ಯ ಇದೊಂದು ಡೆಮೋ ಆಗಿದೆ. ಇದು ಯುದ್ಧದ ಸಂದರ್ಭದಲ್ಲಿ ಯೋಧರಿಗೆ ಬಹಳ ಸಹಾಯ ಮಾಡಲಿದೆ. ಇದರಲ್ಲಿ ಗೇರ್ಸ್ ಹಾಗೂ ಮೋಟರ್ ಗಳನ್ನು ಬಳಸಲಾಗಿದೆ. ಅಲ್ಲದೇ ಇದರಲ್ಲೊಂದು ಮೊಬೈಲ್ ಕನೆಕ್ಷನ್ ಕೂಡಾ ಇದೆ. ಇಷ್ಟೇ ಅಲ್ಲದೇ ಇದರಲ್ಲಿ ಸೆನ್ಸಾರ್ ಗಳನ್ನೂ ಅಳವಡಿಸಲಾಗಿದ್ದು, ಶತ್ರುಗಳು ದಾಳಿ ನಡೆಸುವ ಮುನ್ನ ಯೋಧರನ್ನು ಎಚ್ಚರಿಸಲಿದೆ' ಎಂದಿದ್ದಾರೆ.

ಈ ಲೋಕದ ಕವಚದಿಂದ ಶತ್ರುಗಳು ನಾಶವಾಗುತ್ತಾರೆ ಹಾಗೂ ಯೋಧರ ಶಕ್ತಿ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಸರ್ಕಾರಿ ಏಜೆನ್ಸಿ ಈ ಬಗ್ಗೆ ಗಮನವಹಿಸಬೇಕು ಹಾಗೂ ಯೋಧರಿಗಾಗಿ ಇವುಗಳನ್ನು ತಯಾರಿಸಲು ಯೋಜನೆ ಹಾಕಿಕೊಳ್ಳಬೇಕು ಎಂದು ಸರ್ಕಾರಿ ಏಜೆನ್ಸಿ DRDO ಬಳಿ ವಿನಂತಿಸುತ್ತೇನೆ. ಯೋಧರಿಗಾಗಿ ಇದು ನನ್ನದೊಂದು ಪುಟ್ಟ ಪ್ರಯತ್ನ' ಎಂದಿದ್ದಾರೆ.