Asianet Suvarna News Asianet Suvarna News

ರೈಲು ಹಳಿಗೆ ತಲೆ ಇಟ್ಟು ಗಡದ್ ನಿದ್ದೆಗೆ ಜಾರಿದ ಭೂಪ, ಟ್ರೈನ್ ಬಂದರೂ ಏಳಲೇ ಇಲ್ಲ!

ಚಿಂತೆ ಇಲ್ಲದವರನಿಗೆ ಸಂತೆಯಲ್ಲೂ ನಿದ್ದೆ ಅನ್ನೋ ಮಾತು ಕೇಳಿರುತ್ತೀರಿ. ಇದೀಗ ಈತನಿಗೆ ಚಿಂತೆ ಇಲ್ಲವೂ ಅಥವಾ ತಲೆ ಪೂರ್ತಿ ಚಿಂತೆಯೋ ಗೊತ್ತಿಲ್ಲ.  ರೈಲು ಹಳಿಯಲ್ಲಿ ಛತ್ರಿ ಹಿಡಿದು ಗಡದ್ ನಿದ್ದಿಗೆ ಜಾರಿದ್ದಾನೆ. ರೈಲು ಹಾರ್ನ್ ಹೊಡೆಯುತ್ತಾ ಬಂದರೂ ಈತ ಮಾತ್ರ ಏಳಲೇ ಇಲ್ಲ, ಮುಂದೇನಾಯ್ತು?

Man deep sleeps on railway track with umbrella loco pilot saves him after stops train in UP ckm
Author
First Published Aug 27, 2024, 6:53 PM IST | Last Updated Aug 27, 2024, 6:53 PM IST

ಪ್ರಯಾಗರಾಜ್(ಆ.27) ರೈಲು ಹತ್ತುವಾಗ ಹಾಗೂ ಇಳಿಯುವಾಗ, ರೈಲು ಹಳಿ ದಾಟುವಾಗ ಅತೀವ ಎಚ್ಚರ ವಹಿಸವುದು ಅತ್ಯಗತ್ಯ. ಆದರೆ ಇಲ್ಲೊಬ್ಬ ಭೂಪ ರೈಲು ಹಳಿಯಲ್ಲೇ ಮಲಗಿದ್ದಾನೆ. ರೈಲಿನ ಹಳಿಗೆ ತಲೆ ಇಟ್ಟು ಮಲಗಿದ್ದಾನೆ. ಇಷ್ಟೇ ಅಲ್ಲ, ಬಿಸಿಲಿನ ಬೇಗೆ ಕಾರಣ ಛತ್ರಿಯನ್ನು ಹಿಡಿದು ಮಲಗಿದ್ದಾನೆ. ಈತನ ಗಡದ್ ನಿದ್ದೆ ಹೇಗಿತ್ತು ಎಂದರೆ, ಅದೇ ರೈಲು ಹಳಿಯಿಂದ ರೈಲು ಹಾರ್ನ್ ಹೊಡೆಯುತ್ತಾ ಬಂದರೂ ಈತ ಮಾತ್ರ ಏಳಲೇ ಇಲ್ಲ. ಅದೃಷ್ಟವಶಾತ್ ರೈಲು ಹಳಿಯಲ್ಲಿ ಯಾರೋ ಒಬ್ಬರು ಬಿದ್ದಿರುವುದು ಗಮನಿಸಿದ ಚಾಲಕ ರೈಲು ನಿಲ್ಲಿಸಿದ ಕಾರಣ ಈತನ ಜೀವ ಉಳಿದಿದೆ. ಈ ವಿಡಿಯೋ ಇದೀಗ ಭಾರಿ ಚರ್ಚೆಗೆ ಕಾರಣಾಗಿದೆ.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಈ ಘಟನೆ ನಡೆದಿದೆ. ಲಖನೌ ರೈಲ್ವೇ ವಿಭಾಗದ ನಾರ್ಥನ್ ರೈಲ್ವೇಯಲ್ಲಿ ಈ ಘಟನೆ ಸಂಭವಿಸಿದೆ. ಸುತ್ತ ಮುತ್ತ ಯಾವುದೇ ಮನೆಗಳಿಲ್ಲ. ಕೃಷಿಕರ ಹೊಲ, ಪೊದೆಗಳು ತುಂಬಿದ ಬಯಲು ಪ್ರದೇಶ. ಇದರ ನಡುವಿನಿಂದ ರೈಲು ಮಾರ್ಗ ಸಾಗಿದೆ. ಇದೇ ರೈಲು ಹಳಿಯಲ್ಲಿ ವ್ಯಕ್ತಿಯೊಬ್ಬ ನಿದ್ದೆಗೆ ಜಾರಿ ಭಾರಿ ಆತಂಕ ಸೃಷ್ಟಿಸಿದ್ದಾನೆ.

ರೈಲು ಟಿಕೆಟ್ ಬುಕಿಂಗ್ ಇನ್ನು ಸುಲಭ; ವೈಟಿಂಗ್ ಪಿರಿಯೆಡ್‌ ಎಂದು ಕಾಯಬೇಕಿಲ್ಲ!

ಬಿಸಿಲಿನ ಕಾರಣ ಒಂದು ಕೈಯಲ್ಲಿ ಛತ್ರಿ ಹಿಡಿದಿದ್ದಾನೆ. ತಲೆಯನ್ನು ರೈಲು ಹಳಿಗೆ ಇಟ್ಟಿದ್ದಾನೆ. ನಿದ್ದೆಗೆ ಭಂಗವಾಗದಂತೆ ರೈತರು ತಲೆಗೆ ಅಥವಾ ತೋಳಿಗೆ ಹಾಕುವ ಟವೆಲ್‌ನ್ನು ತಲೆಯ ಅಡಿಗೆ ಇಟಿದ್ದಾನೆ. ಛತ್ರಿ ಬಿಡಿಸಿ ರೈಲು ಹಳಿಯಲ್ಲಿ ನಿದ್ದಿಗೆ ಜಾರಿದ್ದಾನೆ. ಕೆಲವೇ ಹೊತ್ತಲ್ಲಿ ನಿದ್ದೆಯಲ್ಲಿ ತೇಲಾಡಿದ್ದಾನೆ. ತಾನು ಎಲ್ಲಿದ್ದೇನೆ ಅನ್ನೋದು ಆತನಿಗೆ ತಿಳಿಯದಷ್ಟು ನಿದ್ದೆಗೆ ಜಾರಿದ್ದಾನೆ.

ಇದೇ ರೈಲು ಹಳಿಯಲ್ಲಿ ವೇಗವಾಗಿ ರೈಲು ಆಗಮಿಸಿದೆ. ಅದೃಷ್ಟವಶಾತ್ ರೈಲುು ಹಳಿ ನೇರವಾಗಿದ್ದ ಕಾರಣ ದೂರದಲ್ಲಿ ರೈಲು ಹಳಿಯಲ್ಲಿ ವಸ್ತುವೊಂದು ಬಿದ್ದಿರುವುದು ಲೋಕೋ ಪೈಲೆಟ್ ಗಮನಿಸಿದ್ದಾನೆ. ಹಾರ್ನ್ ಹಾಕುತ್ತಾ ಆಗಮಿಸಿದ ಲೋಕೋ ಪೈಲೆಟ್‌ಗೆ ತಕ್ಷಣವೇ  ಬ್ರೇಕ್ ಹಾಕಿದ್ದಾರೆ. ಹಳಿಯಲ್ಲಿ ವ್ಯಕ್ತಿಯೊಬ್ಬರು ಬಿದ್ದಿರುವುದು ಕಂಡಿದೆ. ಬ್ರೇಕ್ ಹಾಕಿದ ಕಾರಣ ರೈಲು ಈತನ ಮಗಿದ ಕೆಲವೇ ದೂರದಲ್ಲಿ ನಿಂತಿದೆ. ಇತ್ತ ಪ್ರಯಾಣಿಕರಿಗೆ ಈ ಕಾಡಿನಲ್ಲಿ ರೈಲು ಯಾಕೆ ನಿಲ್ಲಿಸಲಾಗಿದೆ ಅನ್ನೋ ಗೊಂದಲ. 

 

 

ರೈಲು ನಿಲ್ಲಿಸಿ ಇಳಿದು ಬಂದ ಲೋಕೋ ಪೈಲೆಟ್‌ಗೆ ಆಘಾತವಾಗಿದೆ. ವ್ಯಕ್ತಿಯೊಬ್ಬ ಛತ್ರಿ ಹಿಡಿದು ರೈಲು ಹಳಿಯಲ್ಲಿ ಮಲಗಿದ್ದಾನೆ. ಈ ದೃಶ್ಯ ನೋಡಿ ಸಿಟ್ಟು, ಆಕ್ರೋಶದ ಜೊತೆಗೆ ನಗು ವಕ್ಕರಿಸಿದೆ. ರೈಲಿನ ಹಾರ್ನ್ ಶಬ್ದಕ್ಕೆ ಎಚ್ಚರವಾಗದ ಈತ, ಲೋಕೋ ಪೈಲೆಟ್ ಎಬ್ಬಿಸಿದರೆ ಏಳುವುದುಂಟೆ? ಸತತ ಪ್ರಯತ್ನದ ಬಳಿಕ ಈತನ ಎಬ್ಬಿಸಿ ರೈಲು ಹಳಿಯನ್ನು ದಾಟಿಸಲಾಗಿದೆ. ಬಳಿಕ ರೈಲು ಪ್ರಯಾಣ ಮುಂದುವರಿಸಿದ ಘಟನೆ ನಡೆದಿದೆ. 

ಬೆಂಗಳೂರು ಕೋಲ್ಕತಾ ರೈಲು ಟಿಕೆಟ್ ದರ 10 ಸಾವಿರ ರೂ, ಬೆಚ್ಚಿದ ಪ್ರಯಾಣಿಕನಿಗೆ ನೆಟ್ಟಿಗರ ಅದ್ಭುತ ಸಲಹೆ!
 

Latest Videos
Follow Us:
Download App:
  • android
  • ios