ಲಕ್ನೋ [ಮಾ.20] : ವಿಶ್ವಾದ್ಯಂತ ನಡುಕ ಹುಟ್ಟಿಸಿರುವ ಕೊರೋನಾ ಗುಣಪಡಿಸುವ ವಿಶಿಷ್ಟ ತಾಯತ ವೊಂದನ್ನು ಉತ್ತರ ಪ್ರದೇಶದ ಸ್ವಘೋಷಿತ ದೇವ ಮಾನವನೊಬ್ಬ ಶೋಧಿಸಿ ದ್ದಾನಂತೆ. 

ಅಲ್ಲದೆ, ತನ್ನ ಅಂಗಡಿ ಮುಂದೆ ಕೊರೋನಾ ಭೀತಿ ಇರುವವರು ತಾನು ಸಿದ್ಧಪಡಿಸಿದ ರಕ್ಷಾಯಂತ್ರ ವನ್ನು ಕತ್ತಿಗೆ ಹಾಕಿ ಕೊಳ್ಳಿ. ಹೀಗೆ, ಮಾಡಿದರೆ, ಈ ಸೋಂಕು ನಿಮ್ಮ ಬಳಿ ಸುಳಿಯಲ್ಲ ಎಂದು ಬೋಗಸ್ ಬಿಟ್ಟುಕೊಂಡು 11 ರು.ಗೆ ಒಂದರಂತೆ ತಾಯತಾ ಮಾರುತ್ತಿದ್ದ. 

ಭಾರತದಲ್ಲಿ ಕೊರೋನಾಗೆ 5ನೇ ಬಲಿ : ಜೈಪುರದಲ್ಲಿ ವ್ಯಕ್ತಿ ಸಾವು

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅಹ್ಮದ್ ಸಿದ್ದಿಕ್ ಎಂಬ ಬೋಗಸ್ ಸ್ವಾಮಿಯನ್ನು ಬಂಧಿಸಿದ್ದಾರೆ.

ಕೊರೋನಾ ಭೀತಿ : ದುಬೈನಿಂದ ಆಗಮಿಸುವರ ಪ್ರತ್ಯೇಕಕ್ಕೆ ವ್ಯವಸ್ಥೆ

ಈಗಾಗಲೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 200ರ ಗಡಿ ದಾಟಿಗೆ. ಕಳೆದ 24 ಗಂಟೆಯಲ್ಲಿ ಕೊರೋನಾದಿಂದ ಇಬ್ಬರು ಸಾವಿಗೀಡಾಗಿದ್ದು, ಭಾರತದಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇಟಲಿ ಮೂಲದ ಪ್ರವಾಸಿಗ ಜೈಪುರದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಮಾರ್ಚ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ