ಬಿಜೆಪಿ ಸರ್ಕಾರ ಕುಂಭಮೇಳಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಿ ಬೆಂಬಲಿಸುತ್ತದೆ. ಆದರೆ ಗಂಗಾಸಾಗರದತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.

ಪ.ಬಂಗಾಳ (ಜ.6): ಬಿಜೆಪಿ ಸರ್ಕಾರ ಕುಂಭಮೇಳಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಿ ಬೆಂಬಲಿಸುತ್ತದೆ. ಆದರೆ ಗಂಗಾಸಾಗರದತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.

ಪ್ರತಿ ವರ್ಷ ನಡೆಯುವಂತೆ ಈ ಬಾರಿಯೂ ಗಂಗಾಸಾಗರ ಮೇಳ ನಡೆಸಲಿದ್ದು, ಅದರ ಸಿದ್ಧತೆಗಳನ್ನಗಳನ್ನು ಮಮತಾ ಬ್ಯಾನರ್ಜಿ ಇಂದು(ಜ.6) ಪರಿಶೀಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಗಂಗಾಸಾಗರದ ಒಂದು ಬದಿಯಲ್ಲಿ ಸುಂದರ್‌ಬನ್‌ಗಳಿವೆ, ಒಂದು ಕಡೆ ಅರಣ್ಯವಿದೆ, ಇನ್ನೊಂದು ಬದಿಯಲ್ಲಿ ಸಾಗರ, ದೇವಾಲಯಗಳು ಮತ್ತು ಭಕ್ತರು. ಇದು ತುಂಬಾ ಅದ್ಭುತವಾಗಿದೆ. ಯಾವುದೇ ಭಕ್ತರಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ಮಾಡುತ್ತದೆ. ಈಗಾಗಲೇ ಸಮನ್ವಯ ಸಭೆಗಳನ್ನು ನಡೆಸಿದೆ ಎಂದರು.

ಗಂಗಾಸಾಗರಕ್ಕೆ ಒಂದು ಸೇತುವೆ ನಿರ್ಮಿಸಲು ಸಾಧ್ಯವಾಗಿಲ್ಲ:

ಉತ್ತರ ಪ್ರದೇಶದ ಪ್ರಯಾಗರಾಜ್ ಕುಂಭ ಮೇಳಕ್ಕೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡಿದೆ. .ಆದರೆ ಪಶ್ಚಿಮ ಬಂಗಾಳದ ಗಂಗಾಸಾಗರ ಸೇತುವೆ ನಿರ್ಮಿಸಲು ಪ್ರಧಾನಿಗೆ ಸಾಧ್ಯವಾಗಿಲ್ಲ. ಜನರು ಗಂಗಾಸಾಗರಕ್ಕೆ ನೀರಿನ ಮಾರ್ಗವಾಗಿ ಬರಬೇಕು. ಇದಕ್ಕಾಗಿ ಕೇಂದ್ರ ಸರ್ಕಾರ ಸೇತುವೆ ನಿರ್ಮಿಸಬೇಕು ಆದರೆ ಇದ್ಯಾವುದಕ್ಕೂ ಗಮನಹರಿಸಿಲ್ಲ. ಇದೀಗ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಟೆಂಡರ್ ಕರೆದಿದೆ. ಇದರ ನಂತರ ಇದು ಸಾಕಷ್ಟು ಅನುಕೂಲವಾಗಲಿದೆ.. ಗಂಗಾಸಾಗರಕ್ಕೆ ಬರುವ ಭಕ್ತರಿಗೆ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸುತ್ತೇವೆ. ನಾವು ಪೊಲೀಸ್, PWD ಮತ್ತು PHE ನಂತಹ ವಿವಿಧ ಇಲಾಖೆಗಳೊಂದಿಗೆ ಸಭೆಗಳನ್ನು ನಡೆಸಿದ್ದೇವೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಇಲ್ಲಿನ ಕಪಿಲ ಮುನಿ ಆಶ್ರಮದಿಂದ ಆಯೋಧ್ಯೆಗೆ ದೇಣಿಗೆ ನೀಡಲಾಗಿದೆ

ಪ್ರತಿ ವರ್ಷದಂತೆ ಈ ಬಾರಿಯೂ ಮಕರ ಸಂಕ್ರಾಂತಿಯಂದು ನಡೆಯುವ ಗಂಗಾಸಾಗರ ಜಾತ್ರೆಗೆ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಗಾಸಾಗರ ದ್ವೀಪಕ್ಕೆ ಎರಡು ದಿನಗಳ ಭೇಟಿ ನೀಡಿದರು. ಕಪಿಲ್ ಮುನಿ ಆಶ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬ್ಯಾನರ್ಜಿ, "ಈ ಹಿಂದೆ ಗಂಗಾಸಾಗರದಲ್ಲಿ ಏನೂ ಇರಲಿಲ್ಲ. ನಾವು ಈ ಸ್ಥಳಕ್ಕೆ ನಮ್ಮಿಂದ ಸಾಧ್ಯವಿರುವ ಎಲ್ಲ ವ್ಯವಸ್ಥೆ ಮಾಡುತ್ತಿದ್ದೇವೆ. ನಾನು ಇಲ್ಲಿ ಮಹಾರಾಜ್ ಜಿ ಅವರನ್ನು ಭೇಟಿ ಮಾಡಿದ್ದೇನೆ. ಪ್ರತಿ ವರ್ಷ ಕಪಿಲ್ ಮುನಿ ಆಶ್ರಮಕ್ಕೆ ದೇಣಿಗೆ ನೀಡಲು ಲಕ್ಷಾಂತರ ಭಕ್ತರು ಬರುತ್ತಾರೆ. ಆದರೆ ಎಲ್ಲಾ ದೇಣಿಗೆಗಳನ್ನು ಅಯೋಧ್ಯೆಗೆ ಕಳುಹಿಸಲಾಗುತ್ತದೆ ಎಂದರು.