ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದು, ಕಳೆದ 5 ವರ್ಷಗಳಲ್ಲಿ ಅವರ ಆಸ್ತಿ 1.35 ಲಕ್ಷ ರು. ಇಳಿಕೆಯಾಗಿದೆ. ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಪ್ರಸ್ತುತ ಆಸ್ತಿ ಕೇವಲ 15.37 ಲಕ್ಷ ರು. ಅವರ ಬಳಿ ಸ್ವಂತ ವಾಹನವಿಲ್ಲ ಮತ್ತು ಯಾವುದೇ ಹೂಡಿಕೆ ಇಲ್ಲ.

ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ: 

ಕೋಲ್ಕತಾ: ಒಂದೆಡೆ ರಾಜಕಾರಣಿಗಳ ಆಸ್ತಿ ಏರುತ್ತಿದ್ದರೆ, 'ದೇಶದ ಅತಿ ಬಡ ಮುಖ್ಯಮಂತ್ರಿ' ಎನ್ನಿಸಿ ಕೊಂಡಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆಸ್ತಿಯಲ್ಲಿ ಕಳೆದ 5 ವರ್ಷಗಳಲ್ಲಿ 1.35 ಲಕ್ಷ ರು. ಇಳಿಕೆಯಾಗಿದೆ. ವಿಧಾನಸಭೆ ಚುನಾವಣೆಯ ಹಿನ್ನೆಲೆ ಭವಾನಿಪುರದಲ್ಲಿ ಅವರು ಬುಧವಾರ ಸಲ್ಲಿಸಿರುವ ಅಫಿಡವಿಟ್‌ನಿಂದ ಇದು ತಿಳಿದು ಬಂದಿದೆ. ಕಳೆದ ಬಾರಿಯ ಆಫಿಡವಿಟ್‌ನಲ್ಲಿ 16.72 ಲಕ್ಷ ರು. ಇದ್ದ ಸಂಪತ್ತು ಈಗ 15.37 ಲಕ್ಷ ರು.ಗೆ ತಗ್ಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೀದಿ ಆಸ್ತಿ ಬರೀ 15.4 ಲಕ್ಷ

ಸದ್ಯ ಮಮತಾ ಬಳಿ 75,700 ರು. ನಗದು ಇದ್ದು, ಬ್ಯಾಂಕ್ ಖಾತೆಯಲ್ಲಿ 12.7 ಲಕ್ಷ ರು. ಇದೆ. ಜತೆಗೆ ಮೂಲದಲ್ಲೇ ಕಡಿತವಾಗುವ ತೆರಿಗೆ (ಟಿಡಿಎಸ್) 40,600 ರು. ಆಗಿದೆ. ತಮ್ಮ ಬಳಿ 1.45 ಲಕ್ಷ ರು. ಮೌಲ್ಯದ ಆಭರಣಗಳಿರುವುದಾಗಿ ಘೋಷಿಸಿಕೊಂಡಿರುವ ಅವರು, ಯಾವುದೇ ಷೇರು, ಬಾಂಡ್, ವಿಮೆಗಳಲ್ಲಿ ಹೂಡಿಕೆ ಮಾಡಿಲ್ಲ. ಅಂತೆಯೇ, ಸ್ವಂತ ವಾಹನವನ್ನೂ ಹೊಂದಿಲ್ಲ. 2024-25ರಲ್ಲಿ ತಮ್ಮ ಒಟ್ಟು ಆದಾಯ 23.21 ಲಕ್ಷ ರು. ಎಂದು ಮಮತಾ ತಿಳಿಸಿದ್ದಾರೆ. ಜತೆಗೆ ಮಮತಾ ಅವರ ಮೇಲೆ ಯಾವುದೇ ಕ್ರಿಮಿನಲ್ ಅಪರಾಧಗಳು ದಾಖಲಾಗಿಲ್ಲ.

ಇದನ್ನೂ ಓದಿ: ಲಿಂಗ ತಾರತಮ್ಯವಲ್ಲ, ಇದು ಶತಮಾನಗಳ ನಂಬಿಕೆ: ಶಬರಿಮಲೆ ಮಹಿಳಾ ಪ್ರವೇಶ ನಿಷೇಧಕ್ಕೆ ಕೇಂದ್ರ ಸರ್ಕಾರದ ಬೆಂಬಲ