12 ಜ್ಯೋತಿರ್ಲಿಂಗಗಳಲ್ಲಿ ನಾನು ಪವಿತ್ರ ಲಿಂಗ ಎಂದು ಹೇಳಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ತುಣುಕು ವೈರಲ್‌ ಆಗಿದ್ದು, ಇದು ಜಾಲತಾಣದಲ್ಲಿ ಕಿಡಿ ಹೊತ್ತಿಸುತ್ತಿದೆ!  

12 ಶಿವ ಲಿಂಗಗಳಲ್ಲಿ ನಾನೂ ಒಬ್ಬ ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದೀಗ ಮತ್ತೊಮ್ಮೆ ಬಿಸಿಬಿಸಿ ಚರ್ಚೆಗೆ ಕಾರಣರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ, ಛತ್ತೀಸ್​ಗಢದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ, ಅಲ್ಲಿಯ ಅಭ್ಯರ್ಥಿ, ಶಿವಕುಮಾರ್ ದಹರಿಯಾ ಅವರನ್ನು ಶಿವನಿಗೆ ಹೋಲಿಸಿದ ಖರ್ಗೆ ಅವರು, ಶಿವನು ರಾಮನ ಸಮಾನವಾಗಿ ಸ್ಪರ್ಧಿಸಬಹುದು, ಅವರಿಗೆ ಕಠಿಣ ಸ್ಪರ್ಧೆಯೊಡ್ಡಬಹುದು ಎಂದಿದ್ದರು. ರಾಮ ಎಂದರೆ ಬಿಜೆಪಿ ಎನ್ನುವ ಅರ್ಥದಲ್ಲಿ ಅವರು ಹೇಳಿದ್ದರು. ಶಿವಕುಮಾರ್ ಅವರ ಹೆಸರಿನಲ್ಲೇ ಶಿವ ಇದ್ದಾನೆ. ಶಿವನು ರಾಮ (ಬಿಜೆಪಿ)ನ ಸಮಾನವಾಗಿ ಸ್ಪರ್ಧೆ ಮಾಡಬಹುದು ಎನ್ನುವ ಮೂಲಕ ಕಿಡಿ ಹೊತ್ತಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ಇದೇ ರೀತಿಯ ಮಾತನ್ನು ಹೇಳುವ ಮೂಲಕ ಮತ್ತೊಮ್ಮೆ ಜಾಲತಾಣದಲ್ಲಿ ಪರ-ವಿರೋಧಗಳ ಚರ್ಚೆ ಶುರುವಾಗಿದೆ. 

ಅಷ್ಟಕ್ಕೂ, ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದೇನೆಂದರೆ, ತಮ್ಮ ಹೆಸರು ಮಲ್ಲಿಕಾರ್ಜುನ ಎಂದು. ಒಟ್ಟೂ ಹನ್ನೆರಡು ಜ್ಯೋತಿರ್ಲಿಂಗಗಳು ಇವೆ. ಅವುಗಳಲ್ಲಿ ಒಂದು ಮಲ್ಲಿಕಾರ್ಜುನ ಲಿಂಗ. ನನ್ನ ತಂದೆ ನಾನು ಹುಟ್ಟಿದಾಗಲೇ ಮಲ್ಲಿಕಾರ್ಜುನ ಎಂದು ಹೆಸರು ಇಟ್ಟಿದ್ದಾರೆ. ಇದು ಶಿವನ ಹೆಸರು. ಆದ್ದರಿಂದ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ನಾನೂ ಒಬ್ಬ ಪವಿತ್ರ ಲಿಂಗ ಎಂದು ಹೇಳಿದ್ದಾರೆ. ಇದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಪರ-ವಿರೋಧಗಳ ಚರ್ಚೆ ಶುರುವಾಗಿದೆ. ಅದರಲ್ಲಿಯೂ ಬಿಜೆಪಿ ಈ ಮಾತಿಗೆ ಗರಂ ಆಗಿದೆ. 

ದ್ವಿಪೌರತ್ವ ಕಾನೂನು ಕುಣಿಕೆಯಲ್ಲಿ ರಾಹುಲ್‌! ಸಂವಿಧಾನದಲ್ಲಿ ಏನಿದೆ? ಸಾಬೀತಾದ್ರೆ ಏನಾಗತ್ತೆ? ಇಲ್ಲಿದೆ ಡಿಟೇಲ್ಸ್‌

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಮಾಡಿದಾಗಿನಿಂದಲೂ ಕಾಂಗ್ರೆಸ್‌, ಬಿಜೆಪಿಯನ್ನು ರಾಮನ ಪಕ್ಷ ಎಂದೇ ಹೇಳಿಕೊಂಡು ಬಂದಿದೆ. ಆದರೆ ಭಾಷಣದಲ್ಲಿ ಕಾಂಗ್ರೆಸ್‌ ಮುಖಂಡರು ಅಯೋಧ್ಯೆಯ ರಾಮ ನಮ್ಮದಲ್ಲ, ಆದರೆ ಇಡೀ ವಿಶ್ವದ ರಾಮ ನಮ್ಮವ ಎಂದು ಹೇಳುತ್ತಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು, ಈಗ ರಾಮನ ವಿರುದ್ಧ ಶಿವ ಗೆಲ್ಲುತ್ತಾನೆ ಎನ್ನುವ ಮೂಲಕ, ರಾಮನನ್ನು ಕಾಂಗ್ರೆಸ್ ತನ್ನ ಶತ್ರು ಎಂದು ಪರಿಗಣಿಸುತ್ತದೆ ಎಂದು ಖರ್ಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ ಎಂದು ಈ ಹಿಂದೆ ಕಿಡಿ ಕಾರಿತ್ತು. ಈಗಲೂ ಶಿವನ ಹೆಸರನ್ನು ಪಕ್ಷ ಬಳಸಿಕೊಳ್ಳುತ್ತಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್​ನವರು ತಾವು ಶಿವನೆಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಶಿವನು ಶ್ರೀರಾಮನನ್ನು ತನ್ನ ಆರಾಧ್ಯ ದೈವವೆಂದು ಪರಿಗಣಿಸುತ್ತಾನೆ ಎಂಬುದು ಅವರಿಗೆ ತಿಳಿದಿಲ್ಲ ಎಂಬ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ.

ಅಷ್ಟಕ್ಕೂ ಹನ್ನೆರಡು ಜ್ಯೋತಿರ್ಲಿಂಗಗಳು ಎಂದರೆ, ಆಂಧ್ರಪ್ರದೇಶದಲ್ಲಿರುವ ಮಲ್ಲಿಕಾರ್ಜುನ, ಸೋಮನಾಥ ದೇವಸ್ಥಾನ: ಗುಜರಾತ್, ದ್ವಾರಕಾದ ನಾಗೇಶ್ವರ: ಗುಜರಾತ್, ​​ನಾಸಿಕ್‌ನ ತ್ರಯಂಬಕೇಶ್ವರ: ಮಹಾರಾಷ್ಟ್ರ, ರಾಮೇಶ್ವರ ಜ್ಯೋತಿರ್ಲಿಂಗ: ತಮಿಳುನಾಡು, ​​​ಖಾಂಡ್ವಾದ ಓಂಕಾರೇಶ್ವರ : ಮಧ್ಯಪ್ರದೇಶ, ​ರುದ್ರಪ್ರಯಾಗದ ಕೇದಾರನಾಥ : ಉತ್ತರಾಖಂಡ, ಭೀಮಾಶಂಕರ: ಮಹಾರಾಷ್ಟ್ರ, ​ವಾರಣಾಸಿಯ ವಿಶ್ವನಾಥ: ಉತ್ತರ ಪ್ರದೇಶ, ಘೃಶ್ನೇಶ್ವರ ಜ್ಯೋತಿರ್ಲಿಂಗ: ಔರಂಗಾಬಾದ್, ​ದಿಯೊಘರ್‌ನ ವೈದ್ಯನಾಥ ಜ್ಯೋತಿರ್ಲಿಂಗ: ಜಾರ್ಖಂಡ್‌. ಖರ್ಗೆ ಅವರ ಭಾಷಣದ ತುಣುಕು ಈ ಕೆಳಗಿನ ಎಕ್ಸ್‌ ಖಾತೆ ಲಿಂಕ್‌ನಲ್ಲಿದೆ. 

ನನಗೆ ಮತ್ತು ಪತ್ನಿಗೆ ನಾವು ಸಾಯುವ ದಿನ ಗೊತ್ತು: ಆರ್ಯವರ್ಧನ್‌ ಗುರೂಜಿ ಶಾಕಿಂಗ್‌ ರಹಸ್ಯ!

Scroll to load tweet…