Asianet Suvarna News Asianet Suvarna News

75th Independence Day: ಸ್ವಾತಂತ್ರ್ಯದ ಅಮೃತ ಸಂಭ್ರಮ, ಕೆಂಪುಕೋಟೆಯಿಂದ ಮೋದಿ ಭಾಷಣ!

* ಐತಿಹಾಸಿಕ ಕೆಂಪುಕೋಟೆಯಿಂದ ಮೋದಿ ಭಾಷಣ

* ಮುಂದಿನ 25 ವರ್ಷದಲ್ಲಿ ಅಭಿವೃದ್ಧಿಯತ್ತ ಪಯಣ

* ಕೆಂಪುಕೋಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಥ್ಲೀಟ್‌ಗಳು

* ಇಲ್ಲಿದೆ ಮೋದಿ ಭಾಷಣದ ಮುಖ್ಯಾಂಶಗಳು 

 

Make next 25 yrs glorious PM Modi Address To Nation On 75th Independence Day pod
Author
Bangalore, First Published Aug 15, 2021, 8:51 AM IST

ನವದೆಹಲಿ(ಆ.15): ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಂಡು ಅನುಭವಿಸಿದ ಸ್ವಾತಂತ್ರ್ಯದ ಸಂಭ್ರಮ ಕ್ಷಣಗಳಿಗೆ ಭಾನುವಾರ 75 ವರ್ಷದ ಸಂಭ್ರಮ. ಈ ಅಮೃತ ಮಹೋತ್ಸವದ ಹರ್ಷಾಚರಣೆ ದೇಶದೆಲ್ಲೆಡೆ ಹಬ್ಬದ ವಾತಾವರಣ ಮೂಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ದೆಹಲಿಯ ಕೆಂಪುಕೋಟೆಯ ಮೇಲಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿ ‘ಅಮೃತದ ಸಿಹಿ’ಯನ್ನು ಎಲ್ಲರಿಗೂ ಹಂಚಿದ್ದಾರೆ. 

ಮೋದಿ ಭಾಷಣದ ಮುಖ್ಯಾಂಶಗಳು:

* 75ನೇ ಸ್ವಾತಂತ್ರ್ಯ ದಿನದಂದು ನಿಮಗೆ ಹಾಗೂ ವಿಶ್ವಾದ್ಯಂತ ಭಾರತವನ್ನು ಪ್ರೀತಿಸುವ, ಪ್ರಜಾಪ್ರಭುತ್ವ ಪ್ರೀತಿಸುವ ಎಲ್ಲರಿಗೂ ಶುಭಾಶಯಗಳು. ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಅಪೂರ್ವ ಸಂದರ್ಭದಲ್ಲಿ ದೇಶ ತನ್ನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ರಾಷ್ಟ್ರ ರಕ್ಷಣೆಯಲ್ಲಿ ಹಗಲಿರುಳೆನ್ನದೆ ಶ್ರಮಿಸುತ್ತಿರುವ ವೀರ ಯೋಧರಿಗೆ ಇಂದು ದೇಶ ನಮಿಸುತ್ತಿದೆ. 

"

* ಸ್ವಾತಂತ್ರ್ಯವನ್ನು ಜನಾಲೋಂದನ ಮಾಡಿದ ಪೂಜ್ಯ ಬಾಪೂಜಿಯಾಗಿರಲಿ ಅಥವಾ ಸ್ವಾತಂತ್ರ್ಯಕ್ಕಾಗಿ ತಮ್ಮದೆಲ್ಲವನ್ನೂ ತ್ಯಾಗ ಮಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಬಿಸ್ಮಿಲ್ಲಾರಂತಹ ಕ್ರಾಂತಿಕಾರರಾಗಿರಲಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರಿನ ರಾಣಿ ಚೆನ್ನಮ್ಮರಾಗಿರಲಿ, ದೇಶದ ಮೊದಲ ಪ್ರಧಾನಿ ಜವಹರಲಾಲ್‌ ನೆಹರೂ, ದೇಶವನ್ನು ಒಗ್ಗೂಡಿಸಿದ ಸರ್ದಾರ್‌ ವಲ್ಲಭಬಾಯಿ ಪಟೇಲ್, ಭಾರತದ ಭವಿಷ್ಯದ ದಿಕ್ಕು ತೋರಿದ ಬಾಬಾ ಸಾಹೇಬಬ್ ಅಂಬೇಡ್ಕರ್ ಸೇರಿ ಹುತಾತ್ಮರಾದ ಪ್ರತಿಯೊಬ್ಬ ವ್ಯಕ್ತಿ, ವ್ಯಕ್ತಿತ್ವವನ್ನು ಇಂದು ದೇಶ ನೆನಪಿಸಿಕೊಳ್ಳುತ್ತಿದೆ. ದೇಶ ಈ ಎಲ್ಲಾ ಮಹಾಪುರುಷರಿಗೂ ಋಣಿ.

* ಭಾರತ ನೂರಾರು ವರ್ಷಗಳವರೆಗೆ ಮಾತೃಭೂಮಿ, ಸಂಸ್ಕೃತಿ ಹಾಗೂ ಸ್ವಾತಂತ್ರ್ಯಕ್ಕಾಗಿ ಸಂಘರ್ಷ ನಡೆಸಿದೆ. ಗುಲಾಮರಂತಿದ್ದ ನೋವು, ಸ್ವಾತಂತ್ರ್ಯದ ಹಠವನ್ನು ದೇಶ ಹಲವಾರು ವರ್ಷಗಳವರೆಗೆ ಬಿಡಲಿಲ್ಲ. ಗೆಲುವು, ಸೋಲು ಬಂದು ಹೋದವು ಆದರೆ ಮನಸ್ಸಿನಲ್ಲಿದ್ದ ಸ್ವಾತಂತ್ರ್ಯದ ಆಕಾಂಕ್ಷೆ ಯಾವತ್ತೂ ಕಡಿಮೆಯಾಗಲಿಲ್ಲ. ಇಂದು ಈ ಸಂಘರ್ಷಕ್ಕೆ ಕೊಡುಗೆ ಕೊಟ್ಟ ಎಲ್ಲರನ್ನೂ ನೆನಪಿಸಿಕೊಳ್ಳುವ ದಿನ. ಅವರೆಲ್ಲರೂ ಇದರ ಹಕ್ಕುದಾರರು.

* ಕೊರೋನಾ ಮಹಾಮಾರಿ ನಮ್ಮ ವೈದ್ಯರು, ನರ್ಸಸ್‌, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಸ್ವಚ್ಛತಾ ಸಿಬ್ಬಂದಿ, ಲಸಿಕೆ ತಯಾರಿಯಲ್ಲಿ ತೊಡಗಿಸಿಕೊಂಡ ವಿಜ್ಞಾನಿಗಳು, ಸೇವಾಭಾವನೆಯಲ್ಲಿ ತೊಡಗಿಸಿಕೊಂಡ ಕೋಟ್ಯಾಂತರ ಭಾರತೀಯರು ಇವರೆಲ್ಲರೂ ನಮ್ಮ ಅಭಿನಂದನೆಗೆ ಪಾತ್ರರಾಗಿದ್ದಾರೆ. ಇಂದು ಕೂಡಾ ದೇಶದ ಕೆಲ ಭಾಗಗಳಲ್ಲಿ ಪ್ರವಾಹ, ಭೂಕುಸಿತ, ಶಾಕಿಂಗ್ ಸುದ್ದಿಗಳು ಬರುತ್ತಿರುತ್ತವೆ. ಅನೇಕ ಕ್ಷೇತ್ರಗಳಲ್ಲಿ ಜನರಿಗೆ ಕಷ್ಟದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕೇಂದ್ರವಾಗಿರಲಿ, ರಾಜ್ಯ ಸರ್ಕಾರವಾಗಿರಲಿ ಎರಡೂ ಜನ ಸಾಮಾನ್ಯರೊಂದಿಗಿವೆ. 

* ಇಂದು ಈ ಕಾರ್ಯಕ್ರಮದಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತದ ಯುವಕರು, ಭಾರತದ ಹೆಸರಿಗೆ ಮತ್ತಷ್ಟು ಹೊಳಪು ತುಂಬಿದ್ದಾರೆ. ಇಂತಹ ನಮ್ಮ ಅಥ್ಲೀಟ್‌ಗಳು ನಮ್ಮ ಕ್ರೀಡಾಗಳು ನಮ್ಮ ಜೊತೆಗಿದ್ದಾರೆ. ನಾನಿಂದು ಇಡೀ ದೇಶದ ಜನತೆಗಗೆ ಹಾಗೂ ಇಲ್ಲಿರುವ ಎಲ್ಲರಿಗೂ ಹಿಂದೂಸ್ಥಾನನ ಮೂಲೆ ಮೂಲೆಯಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಈ ನಮ್ಮ ಹೆಮ್ಮೆಯ ಕ್ರೀಡಾಳುಗಳಿಗೆ ಚಪ್ಪಾಳೆ ತಟ್ಟಿ ಸನ್ಮಾನಿಸಲು ಮನವಿ ಮಾಡುತ್ತೇನೆ. ಅಥ್ಲೀಟ್‌ಗಳು ವಿಶೇಷವಾಗಿ ನಮಗೆ ಹೆಮ್ಮೆ ತಂದು ಕೊಟ್ಟಿದ್ದಾರೆ. ಅವರು ನಮ್ಮ ಹೃದಯ ಮಾತ್ರ ಗೆದ್ದಿದ್ದಲ್ಲ, ಬದಲಾಗಿ ಮುಂದಿನ ಜನರೇಷನ್‌ಗೆ ಪ್ರೇರಣೆ ಕೊಟ್ಟಿದ್ದಾರೆ. 

* ನಾವು ಸ್ವಾತಂತ್ರ್ಯದ ಸಂಭ್ರಮ ಆಚರಿಸುತ್ತೇವೆ, ಆದರೆ ವಿಭಜನೆಯ ನೋವು ಇಂದು ಕೂಡಾ ಭಾರತದ ಹೃದಯ ಹಿಂಡುತ್ತದೆ. ಇದು ಕಳೆದ ಶತಮಾನದ ಬಹುದೊಡ್ಡ ನೋವಿನಲ್ಲಿ ಒಂದಾಗಿತ್ತು. ಆದದದರೆ ಈ ವಿಚಾರವಚಾಗಿ ಭಾರತ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಇನ್ಮುಂದೆ ಪ್ರತಿ ವರ್ಷ ಆಗಸ್ಟ್‌ 14 ರಂದು ವಿಭಾಜನ್ ವಿಭಿಷಿಕ ಸ್ಮೃತಿ ದಿನವನ್ನಾಗಿ ಸ್ಮರಿಸಲಾಗುತ್ತದೆ. ವಿಜನೆಯ ವೇಳೆ ಅಮಾನವೀಯ ಪರಿಸ್ಥಿತಿಯನ್ನೆದುರಿಸಿದ ಜನರು, ಕಷ್ಟವನ್ನೆದುರಿಸಿದ, ಗೌರವದ ಅಂತ್ಯಸಂಸ್ಕಾರ ಸಿಗದವರು ನಮ್ಮ ನೆನಪಿನಲ್ಲಿ ಜೀವಂತವಾಗಿರುವುದು ಅತ್ಯಗತ್ಯ. 

* ನೂರನೇ ಸ್ವಾತಂತ್ರ್ಯ ದಿಇನದ ಸಂದರ್ಭದಲ್ಲಿ ಭಾರತ ಅಭಿವೃದ್ಧಿಯ ಉತ್ತುಂಗಕ್ಕೇರಬೇಕು. ಇಲ್ಲಿ ಸೌಲಭ್ಯಗಳ ಹೋಲಿಕರೆಯಲ್ಲಿ ಹಳ್ಳಿ ಹಾಗೂ ನಗರಗಳನ್ನು ಹೋಲಿಸವವರು ಇರಬಾರದು, ನಾಗರಿಕರ ಜೀವನದಲ್ಲಿ ಸರ್ಕಾರ ಕಾರಣವಿಲ್ಲದೇ ಎಂಟ್ರಿ ಕೊಡುವಂತಿರಬಾರದು, ವಿಶ್ವದ ಪ್ರತಿಯೊಂದು ಆಧುನಿಕ ಸೌಲಭ್ಯ ಇರಬೇಕು . ನಾವು ಯಾರಿಗೂ ಕಡಿಮೆ ಇರಬಾರದು ಇದೇ ಕೋಟ್ಯಾಂತರ ಜನರ ಸಂಕಲ್ಪವಾಗಿರಬೇಕು. 

* ಆದರೆ ಸಂಕಲ್ಪದ ಜೊತೆ ಪರಿಶ್ರಮ ಹಾಗೂ ಪರಾಕ್ರಮದ ಪರಾಕಾಷ್ಠೆ ಸಾಧಿಸದಿದ್ದರೆ ಈ ಸಂಕಲ್ಪ ಅಪೂರ್ಣವಾಗುತ್ತದೆ. ಹೀಗಾಗಿ ನಾವು ಈ ಸಂಕಲ್ಪ ಪರಿಶ್ರಮದಿಂದ ಸಾಧಿಸಬೇಕು.

"

* ಸ್ವಾತಂತ್ರ್ಯದ 75ನೇ ವರ್ಷದಂದು ವಿಭಾಜನ್ ವಿಭಿಷಿಕ ಸ್ಮೃತಿ ದಿನ ನಿರ್ಧಾರಗೊಳ್ಳುತ್ತಿರುವುದು ಪ್ರತಿಯೊಬ್ಬ ಭಾರತೀಯನ ಪರವಾಗಿ ಆಧರಪೂರ್ವ ಶ್ರದ್ಧಾಂಜಲಿಯಾಗಲಿದೆ. 

* ಪ್ರಗತಿಯತ್ತ ಸಾಗುತ್ತಿರುವ ನಮ್ಮ ದೇಶದೆದುರು ಹಾಘೂ ಇಡೀ ವಿಶ್ವದೆದುರು ಕೊರೋನಾ ಎಂಬುವುದು ಬಹುದೊಡ್ಡ ಸವಾಲಾಗಿ ಬಂದಿದೆ. ಭಾರತೀಯರು ಬಹಳ ಸಂಯಮ, ಸಹನೆ ಹಾಗೂ ಧೈರ್ಯದಿಂದ ಈ ಯುದ್ಧದಲ್ಲಿ ಹೋರಾಡಿದೆ. ಈ ಹೋರಾಟದಲ್ಲಿ ನಮ್ಮೆದುರು ಅನೇಕ ಸವಾಲುಗಳಿದ್ದವು, ಆದರೆ ಪ್ರತಿ ಕ್ಷೇತ್ರದಲ್ಲಿ ನಾವು ಭಾರತೀಯರು ಅಸಾಧಾರಣ ವೇಗದಲ್ಲಿ ಹೋರಾಡಿದ್ದೇವೆ. ನಮ್ಮ ವಿಜ್ಞಾನಿಗಳು, ಉದ್ಯಮಿಗಳ ತಾಕತ್ತಿನ ಫಲ ಎಂಬಂತೆ ಭಾರತ ಲಸಿಕೆಗಾಗಿ ಇಂದು ಬೇರೊಬ್ಬರನ್ನು ಅವಲಂಭಿಸುವ ಪರಿಸ್ಥಿತಿ ಬಂದಿಲ್ಲ. 

* ಒಂದು ವೇಳೆ ಕಭಾರತದ ಬಳಿ ತನ್ನದೇ ಲಸಿಕೆ ಇರದಿದ್ದರೆ ಏನಾಗುತ್ತಿತ್ತು ಎಂದು ನೀವೇ ಯೋಚಿಸಿ. ಪೋಲಿಯೋ ಲಸಿಕೆ ಗಳಿಸಲು ನಾವೆಷ್ಟು ವರ್ಷ ವ್ಯಯಿಸಿದ್ದೇವೆ. ಇಷ್ಟು ದೊಡ್ಡ ಸಂಕಟದ ಪರಿಸ್ಥಿತಿಯಲ್ಲಿ, ಇಡೀ ವಿಶ್ವದಲ್ಲಿ ಈ ಸೋಂಕು ಹರಡಿದ್ದ ವೇಳೆ ನಮಗೆ ಲಸಿಕೆ ಹೇಗೆ ಸಿಗುತ್ತಿತ್ತು? ಬಹುಶಃ ಸಿಗುತ್ತಿರಲಿಲ್ಲವೇನೋ. ಆದರೆ ಇಂದು ಹೆಮ್ಮೆಯಿಂದ ನಾವಿಂದು ವಿಶ್ವದ ಬಹುದೊಡ್ಡ ಲಸಿಕಾ ಅಭಿಯಾನ ನಮ್ಮ ದೇಶದಲ್ಲಿ ನಡೆಯುತ್ತಿದೆ ಎಂದು ಹೇಳಬಹುದು. 54 ಕೋಟಿಗೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ.

* ಕೋವಿನ್‌ನಂತಹ ಆನ್‌ಲೈನ್‌ ವ್ಯವಸ್ಥೆ, ಡಿಜಿಟಲ್ ಸರ್ಟಿಫಿಕೇಟ್ ನೀಡುವ ವ್ಯವಸ್ಥೆ, ಇಂದು ಇಡೀ ವಿಶ್ವವನ್ನೇ ಆಕರ್ಷಿಸುತ್ತಿದೆ. ಕೊರೋನಾ ಸಂದರ್ಭದಲ್ಲಿ ಭಾರತ ಯಾವ ರೀತಿ 80 ಕೋಟಿ ಭಾರತೀಯರಿಗೆ ಉಚಿತ ಆಹಾರ ಕೊಟ್ಟು, ಬಡವರ ಮನೆಯ ಒಲೆ ಆರದಂತೆ ನೋಡಿಕೊಂಡಿದೆಯೋ ಇದು ಕೂಡಾ ವಿಶ್ವಕ್ಕೆ ಬಹುದೊಡ್ಡ ಅಚ್ಚರಿ ಹಾಗೂ ಚರ್ಚೆಯ ವಿಷಯವಾಗಿದೆ. 

* ಅನ್ಯ ದೇಶದ ಹೋಲಿಕೆಯಲ್ಲಿ ಭಾರತದಲ್ಲಿ ಕಡಿಮೆ ಜನರು ಸೋಂಕಿತರಾಗಿದ್ದಾರೆ. ವಿಶ್ಚದ ಜನಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ನಾಗರಿಕನ್ನು ಕಾಪಾಡಲು ಯಶಸ್ವಿಯಾಗಿದ್ದೇವೆ. ಆದರೆ ಇದು ನಮ್ಮ ಬೆನ್ನು ತಟ್ಟಿಕೊಳ್ಳುವ ವಿಷಯವಲ್ಲ. ಸಂತೋಷದಿಂದ ಮಲಗುವ ವಿಚಾರವಲ್ಲ. ಯಾವುದೇ ಸವಾಲಿರಲಿಲ್ಲ ಎಂದು ಹೇಳುವುದೂ ನಮ್ಮ ಅಭಿವೃದ್ಧಿಯ ಪಥವನ್ನು ಕೊನೆಗೊಳಿಸುವ ಯೋಚನೆಯಾಗಬಹುದು.

* ದೇಶದ ಅಭಿವೃದ್ಧಿ ಹೊಂದಿದ ದೇಶಗಳ ಹೋಲಿಕೆಯಲ್ಲಿ ನಮ್ಮ ವ್ಯವಸ್ಥೆ ಬಹಳ ಕಡಿಮೆ ಇದೆ. ಅವರ ಬಳಿ ಇರುವ ಸೌಲಭ್ಯ ನಮ್ಮ ಬಳಿ ಇಲ್ಲ. ಆದರೆ ಈ ಎಲ್ಲಾ ಸಮಸ್ಯೆಗಳ ನಡುವೆಯೂ, ಜನ ಸಂಖ್ಯೆ ಹೆಚ್ಚಿದ್ದರೂ, ಜೀವನ ಶೈಲಿ ಭಿನ್ನವಾಗಿದ್ದರೂ ಹಲವಾರು ಪ್ರಯತ್ನಗಳನ್ನು ಮಾಡಿದರೂ ನಾವು ರಕ್ಷಿಸಲಾಗಲಿಲ್ಲ. ಅನೇಕ ಮಕ್ಕಳು ಅನಾಥರಾಗಿದ್ದಾರೆ, ಅವರ ಹಠ ಕಡಿಮೆ ಮಾಡುವವರಿಲ್ಲ. ಈ ಅಸಹನೀಯ ನೋವು ಯಾವತ್ತೂ ನಮ್ಮೊಂದಿಗಿರಲಿದೆ. 

* ಪ್ರತಿಯೊಂದು ದೇಶದ ವಿಕಾಸದ ಸಂದರ್ಭದಲ್ಲಿ ದೇಶ ಹೊಸ ಹೆಜ್ಜೆ ಇಟ್ಟು ನಡೆಯಬೇಕಾದ ಪರಿಸ್ಥಿತಿ ಬರುತ್ತದೆ. ತನ್ನನ್ನು ತಾನು ಹೊಸ ಸಂಕಲ್ಪದೊಂದಿಗೆ ಮುಂದುವರೆಯುತ್ತದೆ. ಭಾರತದ ಅಭಿವೃದ್ಧಿಯ ಯಾತ್ರೆಯಲ್ಲೂ ಇಂದು ಆ ಸಮಯ ಬಂದಿದೆ. 75 ವರ್ಷದ ಈ ಸಂದರ್ಭವನ್ನು ನಾವು ಒಂದು ಸಮಾರಂಭದಲ್ಲಿ ಕೊನೆಗೊಳಿಸಬಾರದು. ಹೊಸ ಸಂಕಲ್ಪದೊಂದಿಗೆ ಮುಂದುವರೆಯಬೇಕು. 

* ಸಬ್‌ ಕಾ ಸಾತ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌, ಸಬ್‌ ಕಾ ಪ್ರಯಾಸ್‌ ನಮ್ಮ ಎಲ್ಲಾ ಗುರಿ ತಲುಪಲು ಬಹುಮುಖ್ಯ

* ಈ ಸಮಯವೇ ಸರಿಯಾದ ಸಮಯ. ನಾವು ದೇಶವನ್ನು ಬದಲಾಯಿಸಬೇಕು. ನಾವು ನಾಗರಿಕರಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು.

* ಉಜ್ವಲ ಯೋಜನೆಯ ಪ್ರಯೋಜನ ಎಲ್ಲರಿಗೂ ದೊರೆಯಬೇಕು ಎಂಬ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಬೇಕು

* ಹಲವಾರು ಸರ್ಕಾರದ ಯೋಜನೆಗಳನ್ನು ನೆನಪಿಸಿಕೊಂಡ ಪ್ರಧಾನಿ ನಾವು ಈ ಯೋಜನೆಯನ್ನು ವೇಗಗೊಳಿಸಿದ್ದೇವೆ. ಆದರೆ ಇಲ್ಲಿಗೆ ನಿಲ್ಲದು. ನಾವು ಈ ಯೋಜನೆಯನ್ನು ಪೂರ್ಣಗೊಳಿಸಬೇಕು. ಎಲ್ಲರಿಗೂ ಈ ಯೋಜನೆಯ ಫಲ ದೊರೆಯಬೇಕು.

* ಶೀಘ್ರದಲ್ಲೇ ಭಾರತದ ಎಲ್ಲಾ ಆಸ್ಪತ್ರೆಗಳಲ್ಲಿ ತಮ್ಮದೇ ಆದ ಆಕ್ಸಿಜನ್‌ ಪ್ಲಾಂಟ್‌ ಇರುತ್ತದೆ

* ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ನಡೆಯುತ್ತಿದೆ.

* ಸಮಾಜದ ವಿಕಾಸದ ಯಾತ್ರೆಯಲ್ಲಿ ಯಾರನ್ನೂ ಕಡೆಗಣಿಸದಂತೆ ನಾವು ಕಾರ್ಯ ನಿರ್ವಹಿಸಬೇಕು. ವಿಕಾಸ ಎಲ್ಲಾ ಕ್ಷೇತ್ರಗಳಲ್ಲೂ ಆಗಬೇಕು ನಾವು ಆಗ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಯಾವುದೇ ವರ್ಗವನ್ನು ಕಡೆಗಣಿಸಬಾರದು.

* ನಮ್ಮ ಮಂತ್ರ: 'ಛೋಟಾ ಕಿಸಾನ್ ಬಾನೆ ದೇಶ್ ಕಿ ಶಾನ್'. (ಸಣ್ಣ ರೈತ ದೇಶದ ಹೆಮ್ಮೆ). ಇದು ನಮ್ಮ ಕನಸು.

* ಮುಂಬರುವ ವರ್ಷಗಳಲ್ಲಿ, ನಾವು ದೇಶದ ಸಣ್ಣ ರೈತರ ಸಾಮೂಹಿಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕು, ನಾವು ಅವರಿಗೆ ಹೊಸ ಸೌಲಭ್ಯಗಳನ್ನು ಒದಗಿಸಬೇಕು.

* 'ಕಿಸಾನ್ ರೈಲು' ಇಂದು ದೇಶದ 70 ಕ್ಕೂ ಹೆಚ್ಚು ರೈಲು ಮಾರ್ಗಗಳಲ್ಲಿ ಚಲಿಸುತ್ತದೆ.

* 75 ವಂದೇ ಭಾರತ್ ರೈಲುಗಳು ಸ್ವಾತಂತ್ರ್ಯದ ಅಮೃತ ಮಹೋತ್ಸವದ 75 ವಾರಗಳಲ್ಲಿ ಭಾರತದ ಮೂಲೆ ಮೂಲೆಯನ್ನು ಸಂಪರ್ಕಿಸುತ್ತದೆ: ಪ್ರಧಾನಿ ಮೋದಿ

* ಮೂಲ ಸೌಲಭ್ಯಗಳ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ, ದಲಿತರು, ಹಿಂದುಳಿದವರು, ಬುಡಕಟ್ಟುಗಳು, ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲ ವರ್ಗಗಳ ಮೀಸಲಾತಿ ಕಾಳಜಿ ವಹಿಸಿದ್ದೇವೆ

* ಇತ್ತೀಚೆಗೆ ವೈದ್ಯಕೀಯ ಶಿಕ್ಷಣದಲ್ಲಿ ಅಖಿಲ ಭಾರತ ಕೋಟಾದ ಅಡಿಯಲ್ಲಿ ಒಬಿಸಿಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ರಾಜ್ಯಗಳಿಗೆ ತಮ್ಮದೇ ಆದ ಒಬಿಸಿ ಪಟ್ಟಿಗಳನ್ನು ಮಾಡುವ ಹಕ್ಕನ್ನು ನೀಡಲಾಗಿದೆ

* ಮುಂದಿನ ದಿನಗಳಲ್ಲಿ, ನಾವು ಪಿಎಂ ಗತಿ ಶಕ್ತಿ ಯೋಜನೆಯನ್ನು ಪ್ರಾರಂಭಿಸುತ್ತೇವೆ, 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದು ಸಮಗ್ರ ಮೂಲಸೌಕರ್ಯಕ್ಕೆ ಅಡಿಪಾಯವನ್ನು ನೀಡುತ್ತದೆ ಮತ್ತು ನಮ್ಮ ಆರ್ಥಿಕತೆಗೆ ಸಮಗ್ರ ಮಾರ್ಗವನ್ನು ನೀಡುತ್ತದೆ

 

Follow Us:
Download App:
  • android
  • ios