ನವದೆಹಲಿ (ಮಾ. 02) : ಸೇನಾ ಪಡೆಯಲ್ಲಿ 3 ಸ್ಟಾರ್‌ ಹುದ್ದೆ ಪಡೆಯುವುದೇ ದೊಡ್ಡ ಸಾಧನೆ. ಅಂತದ್ದರಲ್ಲಿ ಪತಿಯ ಬಳಿಕ ಪತ್ನಿಯೂ 3 ಸ್ಟಾರ್‌ ಶ್ರೇಣಿಯ ಅಧಿಕಾರಿ ಹುದ್ದೆಗೆ ಏರುವ ಮೂಲಕ ವಿಶಿಷ್ಟದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೆ ಕಾನಿಟ್ಕರ್‌ ದಂಪತಿ ಪಾತ್ರರಾಗಿದ್ದಾರೆ.

ಬೆಂಕಿ-ಬಿರುಗಾಳಿ ಜೋಡಿ, ಟ್ರಂಪ್ ಬಂದೋದ ಮೇಲೆ ಹೊಸ ಅಸಲಿತ್ತು!

ಲೆ.ಜ ಮಾಧುರಿ ಕಾನಿಟ್ಕರ್‌ ಸಶಸ್ತ್ರ ಪಡೆಯ (ವೈದ್ಯಕೀಯ) ನೂತನ ಉಪ ಮುಖ್ಯಸ್ಥರಾಗಿ ಶನಿವಾರದಂದು ಅಧಿಕಾರ ಸ್ವೀಕರಿಸಿದ್ದಾರೆ. ಮಾಧುರಿ ಪತಿ ಲೆ.ಜ ರಾಜೀವ್‌ ಕಾನಿಟ್ಕರ್‌ ಸಶಸ್ತ್ರ ಪಡೆ ಅಧಿಕಾರಿಯಾಗಿದ್ದು, ಸೇನಾ ಜನರಲ್‌ ಆಗಿ 2017 ರಲ್ಲಿ ನಿವೃತ್ತಿ ಆಗಿದ್ದರು.

ಮಾಧುರಿ ಸೇನಾ ಮೆಡಿಕಲ್‌ ಕಾಫ್ಸ್‌ರ್‍ಗೆ 1982ರಲ್ಲಿ ಸೇರ್ಪಡೆ ಆಗಿದ್ದರು. ಸೇನಾ ಪಡೆಗಳಲ್ಲಿ ಮಾಧುರಿ ಕಾನಿಟ್ಕರ್‌ 3 ಸ್ಟಾರ್‌ ಶ್ರೇಯಾಂಕ ಪಡೆದ ಮೂರನೇ ಮಹಿಳೆ ಎಸಿಕೊಂಡಿದ್ದಾರೆ. ಈ ಮುನ್ನ ಏರ್‌ ಮಾರ್ಷಲ್‌ (ನಿವೃತ್ತ) ಪದ್ಮಾವತಿ ಮತ್ತು ಸರ್ಜನ್‌ ವೈಸ್‌ ಅಡ್ಮಿರಲ್‌ (ನಿವೃತ್ತ) ಪುನಿತಾ ಅರೋರಾ 3 ಸ್ಟಾರ್‌ಗಳನ್ನು ಪಡೆದುಕೊಂಡಿದ್ದಾರೆ.