ಸೇನೆಯಲ್ಲಿ ಟೂರ್ ಆಫ್ ಡ್ಯೂಟಿ ಸೇವೆ ಸಲ್ಲಿಸುವವರಿಗೆ ಬಿಗ್ ಆಫರ್ ನೀಡಿದ ಆನಂದ್ ಮಹೀಂದ್ರ !
ಭಾರತೀಯ ಸೇನೆ ಇದೀಗ ಹೊಸ ಸ್ಕೀಮ್ ಜಾರಿಗೆ ತರಲು ನಿರ್ಧರಿಸಿದೆ. ಟೂರ್ ಆಫ್ ಡ್ಯೂಟಿ ಸೇವೆ ಅನ್ನೋ ವಿನೂತನ ಯೋಜನೆಯಡಿಯಲ್ಲಿ 3 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡುತ್ತಿದೆ. ಇದೀಗ ಈ ಯೋಜನೆಯಡಿಯಲ್ಲಿ ಸೇವೆ ಸಲ್ಲಿಸುವವರಿಗೆ ಉದ್ಯಮಿ ಆನಂದ್ ಮಹೀಂದ್ರ ಬಹುದೊಡ್ಡ ಆಫರ್ ನೀಡಿದ್ದಾರೆ.
ಮುಂಬೈ(ಮೇ.17): ದೇಶದ ನಾಗರೀಕರಿಗೆ ಭಾರತೀಯ ಸೇನೆ 3 ವರ್ಷ ಸೇವೆ ಸಲ್ಲಿಸುವ ಅವಕಾಶ ನೀಡುತ್ತಿದೆ. ಸೇನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳದೇ, ತಾತ್ಕಾಲಿಕ ಅವದಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಯುವ ವೃತ್ತಿಪರರು ಸೇರಿದಂತೆ ದೇಶದ ನಾಗರೀಕರಿಗೆ ಈ ಅವಕಾಶ ನೀಡಲಾಗುತ್ತಿದೆ. ಟೂರ್ ಆಫ್ ಡ್ಯೂಟಿ ಹೆಸರಿನಲ್ಲಿ ಈ ಸೇವೆ ಆರಂಭಿಸಲಾಗುತ್ತಿದೆ.
ಸೇನೆಯಲ್ಲಿ ಯುವಕರಿಗೆ 3 ವರ್ಷ ಸೇವೆ ಅವಕಾಶ?
ಭಾರತೀಯ ಸೇನೆಯ ವಿನೂತ ಪ್ರಸ್ತಾವನೆಗೆ ಮಹೀಂದ್ರ ಗ್ರೂಪ್ ಕಂಪನಿ ಚೇರ್ಮೆನ್ ಆನಂದ್ ಮಹೀಂದ್ರ ಫುಲ್ ಖುಷಿಯಾಗಿದ್ದಾರೆ. ಇಷ್ಟೇ ಅಲ್ಲ ಟೂರ್ ಆಫ್ ಡ್ಯೂಟಿ ಯೋಜನೆಯಡಿಯಲ್ಲಿ ಸೇವೆ ಸಲ್ಲಿಸುವವರಿಗೆ ಮಹೀಂದ್ರ ಗ್ರೂಪ್ ಕಂಪನಿಯಲ್ಲಿ ಉದ್ಯೋಗದ ಭರವಸೆ ನೀಡಿದ್ದಾರೆ. ಟೂರ್ ಆಫ್ ಡ್ಯೂಟಿ ಸೇವೆಗೆ ಭಾರತೀಯ ಸೇನೆ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ಮಹೀಂದ್ರ ಗ್ರೂಪ್ ಪರಿಗಣಿಸಲಿದೆ. ಅವರ ಸೇವೆ ಬಳಿಕ ಮಹೀಂದ್ರ ಗ್ರೂಪ್ ಕಂಪನಿಯಲ್ಲಿ ಉದ್ಯೋಗಕ್ಕೆ ಪರಿಗಣಿಸಲಾಗುವುದು ಎಂದಿದ್ದಾರೆ.
ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!.
ಟೂರ್ ಆಫ್ ಡ್ಯೂಟಿ ವಿನೂತನ ಪ್ರಸ್ತಾವನೆ ಮುಂದಿಟ್ಟಿರುವ ಭಾರತೀಯ ಸೇನೆ ಮೊದಲ ಹಂತದಲ್ಲಿ 100 ಅಧಿಕಾರಿಗಳು 1000 ಅರ್ಹರನ್ನು ಸೇನೆಗೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಶೀಘ್ರದಲ್ಲೇ ನೂತನ ಪ್ರಸ್ತಾವನೆ ಗ್ರೀನ್ ಸಿಗ್ನಲ್ ಸಿಗಲಿದೆ. ಬಳಿಕ 3 ವರ್ಷ ಸೇವೆಯ ಆಯ್ಕೆ ಪ್ರಕ್ರೀಯೆ ನಡೆಯಲಿದೆ