ಪ್ರಧಾನಿ ನರೇಂದ್ರ ಮೋದಿ ಕುರಿತು ಈವರೆಗೆ ಯಾರೂ ಹೇಳಿಲ್ಲದ ಹಾಗೂ ಕೇಳಿಲ್ಲದ ಸ್ಫೂರ್ತಿದಾಯಕ ಘಟನೆಗಳನ್ನು ಹಂಚಿಕೊಳ್ಳಲೆಂದೇ ವಿಶಿಷ್ಟ ವೆಬ್‌ಸೈಟೊಂದು ಆರಂಭವಾಗಿದೆ.
ನವದೆಹಲಿ (ಮಾ.27): ಪ್ರಧಾನಿ ನರೇಂದ್ರ ಮೋದಿ (PM Narendra Modi) ಕುರಿತು ಈವರೆಗೆ ಯಾರೂ ಹೇಳಿಲ್ಲದ ಹಾಗೂ ಕೇಳಿಲ್ಲದ ಸ್ಫೂರ್ತಿದಾಯಕ ಘಟನೆಗಳನ್ನು ಹಂಚಿಕೊಳ್ಳಲೆಂದೇ ವಿಶಿಷ್ಟ ವೆಬ್‌ಸೈಟೊಂದು (Website) ಆರಂಭವಾಗಿದೆ. ಮೋದಿ ಅಭಿಮಾನಿ (Modi Fans) ಸ್ವಯಂಸೇವಕರ ತಂಡವೊಂದು Modistory.in ಹೆಸರಿನ ಈ ವೆಬ್‌ಸೈಟ್ ಆರಂಭಿಸಿದ್ದು, ಮಹಾತ್ಮ ಗಾಂಧೀಜಿಯವರ (Mahatma Gandhi) ಮೊಮ್ಮಗಳು ಸುಮಿತ್ರಾ ಗಾಂಧಿ (Sumitra Gandhi) ಕುಲಕರ್ಣಿ ಇತ್ತೀಚೆಗೆ ಉದ್ಘಾಟಿಸಿದ್ದಾರೆ.
ಈಗಾಗಲೇ ವೆಬ್‌ಸೈಟ್‌ನಲ್ಲಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ, ಮೋದಿಯವರ ಶಾಲೆಯ ಪ್ರಿನ್ಸಿಪಾಲ್ ಮುಂತಾದವರು ಪ್ರಧಾನಿ ಜೊತೆಗಿನ ತಮ್ಮ ವಿಶಿಷ್ಟಅನುಭವವನ್ನು ಹಂಚಿಕೊಂಡಿದ್ದಾರೆ. ಮೋದಿ ಜೊತೆ ಬದುಕಿನ ಯಾವುದಾದರೂ ಕಾಲಘಟ್ಟದಲ್ಲಿ ಸಂಪರ್ಕಕ್ಕೆ ಬಂದು ಸ್ಫೂರ್ತಿದಾಯಕ ಅನುಭವ ಪಡೆದವರು ಅಥವಾ ಮೋದಿ ಕುರಿತ ವಿಶಿಷ್ಟ ಸಂಗತಿಗಳನ್ನು ಬಲ್ಲವರು ಈ ವೆಬ್‌ಸೈಟ್‌ನಲ್ಲಿ ಅದನ್ನು ಬರೆಯಬಹುದಾಗಿದೆ. ಪಂಜಾಬ್‌ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ, ‘ಹಿಂದೆ ಮೋದಿಯವರು ಪಂಜಾಬ್ ಬಿಜೆಪಿ ಉಸ್ತುವಾರಿಯಾಗಿದ್ದರು. ಆಗ ನಮಗೆಲ್ಲ ಪ್ರಚಾರಕ್ಕೆ ಹೋಗುವಾಗ ಜನರ ಜೊತೆ ‘ಕನೆಕ್ಟ್’ ಆಗಲು ಮಕ್ಕಳಿಗೆ ಚಾಕ್ಲೇಟ್ ಒಯ್ಯಿರಿ ಎಂದು ಟಿಫ್ಸ್’ ನೀಡಿದ್ದರು ಎಂದು ಬರೆದಿದ್ದಾರೆ.
PM Garib Kalyan ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ ಗರೀಬ್ ಕಲ್ಯಾಣ ಯೋಜನೆ ಮತ್ತೆ 6 ತಿಂಗಳಿಗೆ ವಿಸ್ತರಣೆ!
ಗುಜರಾತ್‌ನ ವಾಡ್ ನಗರದಲ್ಲಿ ಮೋದಿ ಓದುತ್ತಿದ್ದ ಶಾಲೆಯ ಪ್ರಿನ್ಸಿಪಾಲ್ ರಾಸ್ ಬಿಹಾರಿ ಮಣಿಯಾರ್ ಎಂಬುವರು ಮೋದಿ ಒಮ್ಮೆ ಸೇನೆಗೆ ಸೇರಲು ಫಾಮ್ ಹಿಡಿದುಕೊಂಡು ಬಂದಿದ್ದರು. ಚಿಕ್ಕಂದಿನಿಂದಲೇ ಮೋದಿಗೆ ಸೇನೆಯ ಬಗ್ಗೆ ಬಹಳ ಗೌರವವಿತ್ತು ಎಂದು ನೆನಪಿಸಿಕೊಂಡಿದ್ದಾರೆ. ಇನ್ನು, ಗುಜರಾತ್‌ನ ರೋಹಿತ್ ಭಾಯಿ ಅಗರ್‌ವಾಲ್ ಎಂಬುವರು ಮೋದಿ ತುರ್ತುಸ್ಥಿತಿಯ ಸಮಯದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸರ್ದಾರ್ ಜೀ ವೇಷ ಧರಿಸಿ ಓಡಾಡುತ್ತಿದ್ದರು ಎಂದು ಬರೆದಿದ್ದಾರೆ. ಇನ್ನೂ ಅನೇಕರು ಮೋದಿ ಕುರಿತು ವಿಶಿಷ್ಟ ಸಂಗತಿಗಳನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅನೇಕ ಕೇಂದ್ರ ಸಚಿವರು ವೆಬ್‌ಸೈಟ್‌ನ ಲಿಂಕ್ ಟ್ವೀಟ್ ಮಾಡಿ ಅಲ್ಲಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ.
ಕಪ್ಪು ಮಾಸ್ಕ್, ಕಪ್ಪು ಬಟ್ಟೆ ಧರಿಸಿದ್ರೆ ಪ್ರವೇಶವಿಲ್ಲ: ಉತ್ತರ ಪ್ರದೇಶದ (Uttar Pradesh) ಬಳಿಕ, ತೀವ್ರ ಜಿದ್ದಾಜಿದ್ದಿನಿಂದ ದಕ್ಷಿಣ ಭಾರತದಲ್ಲಿ ಗೆದ್ದುಕೊಂಡಿರುವ ರಾಜ್ಯವಾದ ಗೋವಾದಲ್ಲಿ(Goa) ಸೋಮವಾರ ನಿಯೋಜಿತ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Goa Chief Minister designate Pramod Sawant ) ಅವರ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈಗಾಗಲೇ ಸಿದ್ಧತೆಗಳು ಭರದಿಂದ ನಡೆದಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರಿಗೆ ಒಂದೇ ಒಂದು ನಿಯಮ ವಿಧಿಸಲಾಗಿದ್ದು, ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಮಾಸ್ಕ್ ಅಥವಾ ಬಟ್ಟೆಗಳನ್ನು ಧರಿಸಿ ಬರುವಂತಿಲ್ಲ ಎಂದು ಸೂಚಿಸಲಾಗಿದೆ.
ಮೋದಿ ಜೊತೆಗೇ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿ ಬಯಸಿದ್ದ ಚೀನಾ, ಡ್ರ್ಯಾಗನ್‌ಗೆ ನೋ ಎಂದ ಭಾರತ!
ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸ್ಥಳಕ್ಕೆ ಕಪ್ಪು ಮಾಸ್ಕ್ ಅಥವಾ ಕಪ್ಪು ಬಟ್ಟೆ ಧರಿಸಿದವರನ್ನು ಒಳಗೆ ಬಿಡಲಾಗುವುದಿಲ್ಲ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸದಾನಂದ ಶೇಟ್ ತನವಡೆ (BJP chief Sadanand Shet Tanavade) ಶನಿವಾರ ಹೇಳಿದ್ದಾರೆ. ಪಣಜಿ ಬಳಿಯ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರರ ಸಮ್ಮುಖದಲ್ಲಿ ಸಮಾರಂಭ ನಡೆಯಲಿದೆ ಎಂದು ತನವಾಡೆ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
