ಭೀಮಾ ಕೋರೆಗಾಂವ್ ಪ್ರಕರಣ ವಾಪಸ್ ಪಡೆದ ಉದ್ಧವ್ ಸರ್ಕಾರ!
ಭೀಮಾ ಕೋರೆಗಾಂವ್ ಪ್ರಕರಣ ರದ್ದುಗೊಳಿಸಿದ ವಿಕಾಸ್ ಅಘಾಡಿ ಸರ್ಕಾರ| ದಲಿತ ಹೋರಾಟಗಾರರ ಮೇಲಿನ ಮೊಕದ್ದಮೆ ಕೈಬಿಟ್ಟಿರುವುದಾಗಿ ತಿಳಿಸಿದ ಉದ್ಧವ್ ಠಾಕ್ರೆ| ಮಾವೋವಾದಿಗಳ ನಂಟು ಆರೋಪ ಹೊತ್ತಿರುವ ಹೋರಾಟಗಾರರಿಗಿಲ್ಲ ರಿಲೀಫ್| ಎನ್‌ಸಿಪಿ ನಾಯಕರ ಒತ್ತಡಕ್ಕೆ ಮಣಿದು ಪ್ರಕರಣ ವಾಪಸ್ ಪಡೆದ ಉದ್ಧವ್ ಠಾಕ್ರೆ|
ಮುಂಬೈ(ಡಿ.04): ಮಹಾರಾಷ್ಟ್ರದ ಸಿಎಂ ಆಗುತ್ತಿದ್ದಂತೇ ತಮ್ಮ ತತ್ವಾದರ್ಶಗಳಿಗೆ ತೀಲಾಂಜಲಿ ಇಟ್ಟಿರುವ ಶಿವಸೇನೆಯ ಉದ್ಧವ್ ಠಾಕ್ರೆ, ತಮ್ಮ ಪಕ್ಷದ ಮೂಲ ಸಿದ್ಧಾಂತದಿಂದ ದೂರ ಸರಿಯುತ್ತಿರುವ ಹಾಗೆ ಭಾಸವಾಗುತ್ತಿದೆ.
ನಾನು ಹಿಂದುತ್ವ ಬಿಟ್ಟಿಲ್ಲ, ಬಿಡೋದೂ ಇಲ್ಲ: ಠಾಕ್ರೆ
ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ವಾಪಾಸ್ ಪಡೆಯುವುದಾಗಿ ಸಿಎಂ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.
ಬುಲೆಟ್ ರೈಲು: ಯೋಜನೆ ಮರುಪರಿಶೀಲನೆಗೆ ಮುಂದಾದ ಉದ್ಧವ್!
ಮಾವೋವಾದಿಗಳ ಜೊತೆಗಿನ ನಂಟು ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಹೋರಾಟಗಾರರ ಮೇಲಿನ ಪ್ರಕರಣಗಳು ಮುಂದುವರೆಯಲಿವೆ ಎಂದೂ ಉದ್ಧವ್ ಸ್ಪಷ್ಟಪಡಿಸಿದ್ದಾರೆ.
ಗಂಭೀರ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರನ್ನು ಹೊರತುಪಡಿಸಿ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಾಪಾಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಉದ್ಧವ್ ತಿಳಿಸಿದ್ದಾರೆ.
ಜಾತ್ಯಾತೀತತೆ ಎಂದರೇನು?: ಉದ್ಧವ್ ಠಾಕ್ರೆ ಹೇಳಿದ್ದು ಕೇಳಿದಿರೇನು?
ಎನ್‌ಸಿಪಿ ನಾಯಕರ ಒತ್ತಡಕ್ಕೆ ಮಣಿದು ಉದ್ಧವ್ ಸರ್ಕಾರ ಭೀಮಾ ಕೋರೆಗಾಂವ್ ಪ್ರಕರಣಗಳನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿದೆ ಎನ್ನಲಾಗಿದ್ದು, ಹೋರಾಟಗಾರರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ಕೈಬಿಡುವಂತೆ ಎನ್‌ಸಿಪಿ ಒತ್ತಡ ಹೇರಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಳೆದ ವರ್ಷ ಜನವರಿ 1 ರಂದು ಭೀಮಾ ಕೋರೆಗಾಂವ್ನಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣದಲ್ಲಿ, ಅನೇಕ ದಲಿತ ಹೋರಾಟಗಾರ ಮೇಲೆ ಮೊಕದ್ದಮೆ ದಾಖಲಿಸಲಾಗಿತ್ತು.