Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ಇನ್ನು ‘ಅಂಕಿ ಆಟ’: ಠಾಕ್ರೆ ಸರ್ಕಾರ ಪತನದ ಅಂಚಿಗೆ? ಬಿಜೆಪಿಗೆ ಅಧಿಕಾರ?

* ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಸರ್ಕಾರಕ್ಕೆ ಪತನಗೊಳ್ಳುವ ಆತಂಕ

* ಸರ್ಕಾರದ ವಿರುದ್ಧ ಬಂಡೆದ್ದ ಶಿವಸೇನೆ ಮುಖಂಡ ಏಕನಾಥ ಶಿಂಧೆ

* ಮಹಾರಾಷ್ಟ್ರದಲ್ಲಿ ಇನ್ನು ‘ಅಂಕಿ ಆಟ’

Maharashtra tussle MVA BJP counting on the magic power of numbers pod
Author
Bangalore, First Published Jun 22, 2022, 8:39 AM IST

ಮುಂಬೈ(ಜೂ.22): ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ ಮುಖಂಡ ಏಕನಾಥ ಶಿಂಧೆ ಅವರು ತಾವು ಸೇರಿ 22 ಬೆಂಬಲಿಗ ಶಾಸಕರ ಜತೆ ಬಂಡೆದ್ದಿರುವ ಕಾರಣ ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಪಾಲುದಾರಿಕೆಯ ಉದ್ಧವ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಸರ್ಕಾರಕ್ಕೆ ಪತನಗೊಳ್ಳುವ ಆತಂಕ ಎದುರಾಗಿದೆ. ಹೀಗಿದ್ದಾಗ ಇಲ್ಲಿ ಇನ್ನು ‘ಅಂಕಿಯ ಆಟ’ ಆರಂಭವಾಗಲಿದೆ.

288 ಬಲದ ವಿಧಾನಸಭೆಯಲ್ಲಿ ಒಬ್ಬ ಶಾಸಕ ನಿಧನ ಆಗಿರುವ ಕಾರಣ, ಸದಸ್ಯ ಬಲ 287ಕ್ಕೆ ಕುಸಿದಿದೆ. ಹೀಗಾಗಿ ಬಹುಮತಕ್ಕೆ 144 ಮತ ಬೇಕು. ಎಂವಿಎ ಕೂಟ 152 ಹಾಗೂ ವಿಪಕ್ಷ ಬಿಜೆಪಿ ಕೂಟ 135 ಸದಸ್ಯ ಬಲ ಹೊಂದಿವೆ.

"

ಸನ್ನಿವೇಶ 1:

ಶಿಂಧೆ ನೇತೃತ್ವದ 22 ಶಾಸಕರು ವಿಶ್ವಾಸಮತದ ವೇಳೆ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಎಂವಿಎ ಸರ್ಕಾರಕ್ಕೆ 130 ಮತ ಮಾತ್ರ ಬಿದ್ದಂತಾಗುತ್ತದೆ. ಆಗ 144ರ ಮ್ಯಾಜಿಕ್‌ ಸಂಖ್ಯೆ ದಾಟದೇ ಸರ್ಕಾರ ತನ್ನಿಂತಾನೇ ಉರುಳಿ ಬೀಳುತ್ತದೆ.

ಸನ್ನಿವೇಶ 2:

ಸರ್ಕಾರದ ವಿರುದ್ಧ ಮತ ಹಾಕಿದರೆ ಶಿಂಧೆ ಬಣದ 22 ಶಾಸಕರಿಗೆ ಅನರ್ಹತೆ ಭೀತಿ ಇರುತ್ತದೆ. ಹೀಗಾಗಿ ಇದನ್ನು ತಪ್ಪಿಸಿಕೊಳ್ಳಲು ಅವರು ರಾಜೀನಾಮೆ ನೀಡಬಹುದು. ಆಗ ಸದನದ ಬಲ 287ರಿಂದ 265ಕ್ಕೆ ಇಳಿಯುತ್ತದೆ. ಬಹುಮತಕ್ಕೆ 133 ಮತ ಬೇಕಾಗುತ್ತದೆ. ಹೀಗಿದ್ದಾಗ ಎಂವಿಎ ಬಲ 152ರಿಂದ 130ಕ್ಕೆ ಕುಸಿದು ಸೋಲಾಗುತ್ತದೆ. 135 ಶಾಸಕರ ಬೆಂಬಲ ಇದೆ ಎಂದು ಹೇಳಿಕೊಳ್ಳುವ ಬಿಜೆಪಿ ಅಧಿಕಾರಕ್ಕೆ ಬರುತ್ತದೆ.

ಮಹಾರಾಷ್ಟ್ರ ಪರಿಷತ್‌ ಚುನಾವಣೆ: ಕಾಂಗ್ರೆಸ್‌ಗೆ ಮುಖಭಂಗ

 

ಮಹಾರಾಷ್ಟ್ರದ ಇತ್ತೀಚಿನ ರಾಜ್ಯಸಭೆ ಚುನಾವಣೆ ಬಳಿಕ ನಡೆದ ವಿಧಾನಪರಿಷತ್‌ ಚುನಾವಣೆಯಲ್ಲಿ 10 ಸ್ಥಾನಗಳ ಪೈಕಿ ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್‌ ಅಘಾಡಿ 5 ಸ್ಥಾನ ಹಾಗೂ ಬಿಜೆಪಿ 5 ಸ್ಥಾನದಲ್ಲಿ ಜಯಿಸಿವೆ. 10 ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಎರಡೂ ಕೂಟಗಳಿಗೆ ಸಮಾನ ಸ್ಥಾನ ಬಂದರೂ, ಕಾಂಗ್ರೆಸ್‌ ಪಕ್ಷದ ಮೊದಲನೇ ಅಭ್ಯರ್ಥಿ ಸೋತಿದ್ದು, ಆಡಳಿತಾರೂಢ ಕೂಟಕ್ಕೆ ಮುಖಭಂಗವಾಗಿದೆ.

10 ಸ್ಥಾನಗಳಿಗೆ 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 10ನೇ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಸ್ಪರ್ಧೆ ಇತ್ತು. ಈ ಸ್ಥಾನದಲ್ಲಿ ಮತಗಳ ಕೊರತೆ ಇದ್ದರೂ ಬಿಜೆಪಿಯ ಪ್ರಸಾದ್‌ ಲಾಡ್‌ ಜಯಗಳಿಸಿದ್ದಾರೆ. ವಿಚಿತ್ರವೆಂದರೆ ಈ ಸ್ಥಾನದಲ್ಲಿ ಕಾಂಗ್ರೆಸ್‌ನ ಮೊದಲ ಅಭ್ಯರ್ಥಿ ಚಂದ್ರಕಾಂತ ಹಂಡೋರೆ ಸೋತಿದ್ದಾರೆ. 2ನೇ ಅಭ್ಯರ್ಥಿ ಭಾಯಿ ಜಗತಾಪ್‌ ಗೆದ್ದಿದ್ದಾರೆ. ಹೀಗಾಗಿ ಜಗತಾಪ್‌, ತಮ್ಮದೇ ಅಭ್ಯರ್ಥಿಗೆ ಮುಳುವಾದಂತಾಗಿದೆ.

ಹಂಡೋರೆಗೆ 44 ಮತ ಬೇಕಿತ್ತು. ಆದರೆ 3 ಕಾಂಗ್ರೆಸ್‌ ಶಾಸಕರು ಅಡ್ಡ ಮತದಾನ ಮಾಡಿದ್ದು, 41 ಮತ ಗಳಿಸಿದ ಹಂಡೋರೆ ಸೋತಿದ್ದಾರೆ. 3 ಕಾಂಗ್ರೆಸ್‌ ಮತಗಳು ಬಿಜೆಪಿಗೆ ಹೋಗಿವೆ ಎನ್ನಲಾಗಿದೆ.

Follow Us:
Download App:
  • android
  • ios