ಮುಂಬೈ(ಮಾ. 19) ಮಹಾರಾಷ್ಟ್ರದ ಎಂಬಿಬಿಎಸ್ ಪಠ್ಯ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು.  ಎಂಬಿಬಿಎಸ್ ಎರಡನೇ ವರ್ಷದ ಪಠ್ಯದಲ್ಲಿ ತಬ್ಲಿಘಿಗಳನ್ನು ಕೊರೋನಾ ಹರಡುವಿಕೆಗೆ ಲಿಂಕ್ ಮಾಡಲಾಗಿದ್ದು ವಿರೋಧ ವ್ಯಕ್ತವಾದ ನಂತರ ಪಠ್ಯದಿಂದ ವಿಚಾರ ಕೈಬಿಡಲಾಗಿದೆ.

'ಎಸೆನ್ ಶಿಯಲ್ಸ್ ಆಫ್ ಮೆಡಿಕಲ್ ಮೈಕ್ರೋಬಯೋಗ್ರಫಿ'  ಎಂಬ ಅಧ್ಯಾಯಕ್ಕೆ ಸಂಬಂಧಿಸಿ ಪಠ್ಯ ರಚನೆ ಮಾಡಿದ್ದವರು ಕ್ಷಮೆ ಕೇಳಿದ್ದಾರೆ. ಇಸ್ಲಾಮಿಕ್ ಆರ್ಗನೈಜೇಶನ್ ವಿದ್ಯಾರ್ಥಿಗಳು ಈ ಪಠ್ಯದ ವಿರುದ್ಧ ಪ್ರಶ್ನೆ ಎತ್ತಿದ್ದರು.  ತಬ್ಲಿಘಿ ಜಮಾತ್ ನಿಂದಲೇ ಕೊರೋನಾ ಹರಡಿತ್ತು ಎಂಬುದಕ್ಕೆ ಯಾವುದೇ ಆಧಾರ ಇಲ್ಲ. ಕಾರಣವಿಲ್ಲದೆ ಒಂದು ಸಮುದಾಯ ಗುರಿ ಮಾಡಲಾಗಿದೆ ಎಂದು ಆಕ್ಷೇಪ ಎತ್ತಿದ್ದರು.

ತಬ್ಲಿಘಿ ಜಮಾತ್ ಕೆಲಸನಿಂದಲೇ ಕೊರೋನಾ ಹರಡಿದ್ದು; ವರದಿ

ಇಷ್ಟೆಲ್ಲ ಘಟನೆಗಳ ನಂತರ ಪಠ್ಯ ರಚನೆ ಮಾಡಿದ, ಡಾ. ಅಪುರ್ಬಾ ಶಾಸ್ತ್ರಿ, ಡಾ. ಸಂಧ್ಯಾ ಭಟ್ ಕ್ಷಮೆ ಕೇಳಿದ್ದರು.  ಯಾವುದಾದರೂ ಸಮುದಾಯದ ಭಾವನೆಗೆ ಧಕ್ಕೆ ಆದರೆ ಕ್ಷಮೆ ಕೇಳುತ್ತೇವೆ ಎಂದು ಹೇಳಿದ್ದರು. ಸಲಹೆ ಪಡೆದುಕೊಂಡು ಬದಲಾವಣೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದರು. 

ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ಕಳೆದ ವರ್ಷ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಕೊರೋನಾ ತೀವ್ರತೆಗೆ ಕಾರಣವಾಗಿತ್ತು ಎಂಬ ಸುದ್ದಿಯಾಗಿತ್ತು.  ಇಲ್ಲಿಂದಲೇ ದೇಶದ ಮೂಲೆ ಮೂಲೆಗೆ ಕೊರೋನಾ ರವಾನೆಯಾಗಿತ್ತು ಎಂಬ ವರದಿಗಳು ಆಗಿದ್ದವು .