ಕೊರೋನಾ ನಿಯಂತ್ರಣಕ್ಕಾಗಿ ಏ.30ರವರೆಗೆ ರಾಜ್ಯಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ ರೀತಿಯ ನಿರ್ಬಂಧಗಳನ್ನು ಇನ್ನೂ 15 ದಿನ ವಿಸ್ತರಣೆ| ಮಹಾರಾಷ್ಟ್ರ ಲಾಕ್‌ಡೌನ್‌ ಮತ್ತೆ 15 ದಿನ ವಿಸ್ತರಣೆ| ಆರೋಗ್ಯ ಸಚಿವ ಟೋಪೆ

ಮುಂಬೈ(ಏ.29): ಕೊರೋನಾ ನಿಯಂತ್ರಣಕ್ಕಾಗಿ ಏ.30ರವರೆಗೆ ರಾಜ್ಯಾದ್ಯಂತ ಹೇರಲಾಗಿರುವ ಲಾಕ್‌ಡೌನ್‌ ರೀತಿಯ ನಿರ್ಬಂಧಗಳನ್ನು ಇನ್ನೂ 15 ದಿನ ವಿಸ್ತರಣೆ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

ಬುಧವಾರ ನಡೆದ ಸಚಿವ ಸಂಪುಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ರಾಜೇಶ್‌ ಟೋಪೆ ಅವರು, ‘ಏ.14ರಿಂದ ಏ.30ರವರೆಗೆ ರಾಜ್ಯಾದ್ಯಂತ ಹೇರಲಾದ ಲಾಕ್‌ಡೌನ್‌ನಿಂದ ಕೋವಿಡ್‌ ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟುದಿನಗಳ ಲಾಕ್ಡೌನ್‌ ವಿಸ್ತರಣೆಗೆ ಎಲ್ಲಾ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜನರು ಸಹ ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಸೇರಿದಂತೆ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕೊರೋನಾವನ್ನು ಪೂರ್ತಿಯಾಗಿ ನಿಯಂತ್ರಣಕ್ಕೆ ತರಬಹುದು’ ಎಂದಿದ್ದಾರೆ.

"

ಪ್ರಸ್ತುತ ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಅಗತ್ಯ ವಸ್ತುಗಳಾದ ತರಕಾರಿ ಅಂಗಡಿಗಳು, ಹಾಲು ಹಾಗೂ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ 5ಕ್ಕಿಂತ ಹೆಚ್ಚು ಜನ ಸೇರಲು ಮತ್ತು ಅಗತ್ಯವಲ್ಲದ ಕಾರಾರ‍ಯಚರಣೆಗಳ ಮೇಲೆ ಕಠಿಣ ನಿರ್ಬಂಧವಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona