ನಾಗಪುರ(ಡಿ.21): ಅನಾಥ ಜೋಡಿಯೊಂದರ ವಿವಾಹದ ವೇಳೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದಂಪತಿ ಮತ್ತು ನಾಗಪುರದ ಜಿಲ್ಲಾಧಿಕಾರಿ ದಂಪತಿ ಪೋಷಕರಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟ ಶ್ಲಾಘನೀಯ ಘಟನೆ ಭಾನುವಾರ ನಡೆದಿದೆ.

ಥಾಣೆ ಮತ್ತು ನಾಗಪುರದ ಅನಾಥಾಶ್ರಮಗಳಲ್ಲಿ ಬೆಳೆದ ಪುರುಷ ಮತ್ತು ಮಹಿಳೆಗೆ ಭಾನುವಾರ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅನಿಲ್‌ ದೇಶ್‌ಮುಖ್‌ ಮತ್ತು ಅವರ ಪತ್ನಿ ಮಹಿಳೆಯ ಪೋಷಕರಾಗಿ ಕನ್ಯಾದಾನ ನೆರವೇರಿಸಿಕೊಟ್ಟರು.

ಮತ್ತೊಂದೆಡೆ ನಾಗಪುರದ ಜಿಲ್ಲಾಧಿಕಾರಿ ರವೀಂದ್ರ ಠಾಕ್ರೆ ಮತ್ತು ಅವರ ಪತ್ನಿ ವರನ ಪೋಷಕರಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾದರು