Asianet Suvarna News Asianet Suvarna News

ಮಹಾ’ ಸರ್ಕಾರದಿಂದ ಫಡ್ನವೀಸ್‌, ರಾಜ್‌ ಠಾಕ್ರೆ ಭದ್ರತೆ ಕಡಿತ!

ಫಡ್ನವೀಡ್‌ ಹಾಗೂ ಅವರ ಕುಟುಂಬಕ್ಕೆ ಇತ್ತು ಝಡ್‌ ಪ್ಲಸ್‌ ಭದ್ರತೆ| ಈಗ ವೈ ಪ್ಲಸ್‌ ಶ್ರೇಣಿಯ ಭದ್ರತೆ| ಮಹಾ’ ಸರ್ಕಾರದಿಂದ ಫಡ್ನವೀಸ್‌, ರಾಜ್‌ ಠಾಕ್ರೆ ಭದ್ರತೆ ಕಡಿತ

Maharashtra govt reduces security cover to Devendra Fadnavis and Raj Thackeray pod
Author
Bangalore, First Published Jan 11, 2021, 9:46 AM IST

ಮುಂಬೈ(ಜ.11): ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರಾಮ್‌ ನಾಯಕ್‌, ಎಂಎನ್‌ಎಸ್‌ ಅಧ್ಯಕ್ಷ ರಾಜ್‌ ಠಾಕ್ರೆ ಸೇರಿದಂತೆ ಪ್ರಮುಖ ಗಣ್ಯರಿಗೆ ನೀಡಿದ್ದ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ಕಡಿತಗೊಳಿಸಿದ್ದು, ವಿಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಫಡ್ನವೀಡ್‌ ಹಾಗೂ ಅವರ ಕುಟುಂಬಕ್ಕೆ ಝಡ್‌ ಪ್ಲಸ್‌ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ, ಅವರು ಈಗ ವೈ ಪ್ಲಸ್‌ ಶ್ರೇಣಿಯ ಭದ್ರತೆಯನ್ನು ಪಡೆಯಲಿದ್ದಾರೆ. ಅದೇ ರೀತಿ ರಾಜ್‌ ಠಾಕ್ರೆಗೆ ನೀಡಿದ್ದ ಝಡ್‌ ಭದ್ರತೆಯನ್ನು ವೈ ಪ್ಲಸ್‌ ಶ್ರೇಣಿಗೆ ಇಳಿಕೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌, ಉತ್ತರ ಪ್ರದೇಶ ಮಾಜಿ ರಾಜ್ಯಪಾಲ ರಾಮ್‌ ನಾಯಕ್‌ ಅವರ ಭದ್ರತೆಯನ್ನು ವೈ ಶ್ರೇಣಿಗೆ ಇಳಿಕೆ ಮಾಡಲಾಗಿದೆ. ಝಡ್‌ ಶ್ರೇಣಿಯಲ್ಲಿ 22 ಭದ್ರತಾ ಸಿಬ್ಬಂದಿಯ ಭದ್ರತೆ ಇದ್ದರೆ, ವೈ ಶ್ರೇಣಿಯಲ್ಲಿ 11 ಮಂದಿಯ ಭದ್ರತೆ ಇರಲಿದೆ.

ಇದೇ ವೇಳೆ ರಾಜಕೀಯ ದುರುದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಪಕ್ಷದ ಮುಖಂಡರ ಭದ್ರತೆಯನ್ನು ಕಡಿತಗೊಳಿಸಿದೆ ಎಂದು ರಾಜ್ಯ ಬಿಜೆಪಿ ವಕ್ತಾರ ಕೇಶವ್‌ ಉಪಾಧ್ಯಾಯ್‌ ಆರೋಪಿಸಿದ್ದಾರೆ.

Follow Us:
Download App:
  • android
  • ios