ಶಿವಸೇನೆ ಸುತ್ತ ಸದ್ದಿಲ್ಲದೆ ಬಲೆ ಹೆಣೆದ ಫಡ್ನವೀಸ್‌, ಉದ್ಧವ್‌ಗೆ ಸುಳಿವೂ ಸಿಕ್ಕಿರಲಿಲ್ಲ!

* ಮಹಾರಾಷ್ಟ್ರದಲ್ಲಿ ಶಿವಸೇನೆ ಇದುವರೆಗೆ ಅತಿದೊಡ್ಡ ಬಂಡಾಯವನ್ನು ಎದುರಿಸುತ್ತಿದೆ

* ಶಿವಸೇನೆ ಸುತ್ತ ಸದ್ದಿಲ್ಲದೆ ಬಲೆ ಹೆಣೆದ ಫಡ್ನವೀಸ್‌, ಉದ್ಧವ್‌ಗೆ ಸುಳಿವೂ ಸಿಕ್ಕಿರಲಿಲ್ಲ

* ಅಧಿವೇಶನದಿಂದ ಆರಂಭವಾದ ಹೈಡ್ರಾಮಾ

Maharashtra fallout Fadnavis skill shrewdness back in spotlight amid crisis pod

ಮುಂಬೈ(ಜೂ.22): ಮಹಾರಾಷ್ಟ್ರದಲ್ಲಿ ಶಿವಸೇನೆ ಇದುವರೆಗೆ ಅತಿದೊಡ್ಡ ಬಂಡಾಯವನ್ನು ಎದುರಿಸುತ್ತಿದೆ. ಸಿಎಂ ಉದ್ಧವ್ ಠಾಕ್ರೆ ಅವರಿಗೆ ಈ ಬಂಡಾಯದ ವಾಸನೆ ಕೂಡ ಬಡಿದಿರಲಿಲ್ಲ ಅಲ್ಲದೇ ಅವರ 33 ಶಾಸಕರು ಬಂಡಾಯ ನಾಯಕ ಏಕನಾಥ್ ಶಿಂಧೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಂಡಾಯದ ಕಥೆಯಲ್ಲಿ ಹಲವು ಪಾತ್ರಗಳಿವೆ. ದೇವೇಂದ್ರ ಫಡ್ನವೀಸ್ ಪಾತ್ರದ ಚರ್ಚೆ ನಡೆಯದಿದ್ದರೆ ಈ ಕಥೆಯ ಅಪೂರ್ಣವಾಗುತ್ತದೆ. ಮಹಾರಾಷ್ಟ್ರದ ಈ ಮಾಜಿ ಸಿಎಂ ಒಮ್ಮೆ ವಿಧಾನಸಭೆಯಲ್ಲಿ ‘ನಾನು ಸಾಗರ, ಮತ್ತೆ ಬರುತ್ತೇನೆ’ ಎಂದು ಹೇಳಿದ್ದರು. ಇದೀಗ ಅವರು ತಮ್ಮ ಮಾತಿನಂತೆ ಉದ್ಧವ್ ಸರ್ಕಾರದ ಪಾದದ ಕೆಳಗಿನ ನೆಲವನ್ನು ಕಸಿದುಕೊಂಡಿದ್ದಾರೆ. ಬಿಜೆಪಿ ಮತ್ತು ಶಿಂಧೆ ಯಾವತ್ತೂ ಒಬ್ಬರನ್ನೊಬ್ಬರು ಟೀಕೆ ಮಾಡಿಕೊಂಡಿಲ್ಲ ಎಂಬುದು ಸತ್ಯ. ಹಾಗಾಗಿ ಈ ಸಂಬಂಧ ಬಹಳ ಹಳೆಯದ್ದು ಎನ್ನಬಹುದು.

ಫಡ್ನವೀಸ್‌ ಬಲೆ ಹಡಣೆದಿದ್ದು ಹೇಗೆ?

ಮಹಾರಾಷ್ಟ್ರದ ಬಜೆಟ್ ಅಧಿವೇಶನದಿಂದ ಈ ಕಥೆ ಪ್ರಾರಂಭವಾಗುತ್ತದೆ. ಪ್ರತಿಪಕ್ಷದ ನಾಯಕ ಫಡ್ನವೀಸ್ ಮತ್ತು ಶಿಂಧೆ ಅವರು ಸದನದಲ್ಲಿ ಪರಸ್ಪರ ಆತ್ಮೀಯವಾಗಿ ಭೇಟಿಯಾದರು. ಎರಡೂವರೆ ವರ್ಷಗಳಿಂದ ಬಿಜೆಪಿ ಮತ್ತು ಶಿವಸೇನೆ ನಡುವಿದ್ದ ವೈಮನಸ್ಯವನ್ನು ಮರೆತು ಇಬ್ಬರೂ ನಾಯಕರು ಮಾತುಕತೆ ನಡೆಸಿದರು. ಬಜೆಟ್ ಅಧಿವೇಶನದಲ್ಲಿ ಫಡ್ನವೀಸ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಜಲಗಾಂವ್‌ನಲ್ಲಿ ಆಸ್ತಿ ತೆರಿಗೆ ಹೆಚ್ಚಿಸುವ ನಿರ್ಧಾರವನ್ನು ಹಿಂಪಡೆಯುವಂತೆ ಸಚಿವ ಶಿಂಧೆ ಅವರನ್ನು ಒತ್ತಾಯಿಸಿದರು. ಅಲ್ಲದೇ ಇದು ಅವರ ಸರ್ಕಾರ  ಮಾಡಿದ ತಪ್ಪು ಎಂದು ಕರೆದ ಫಡ್ನವೀಸ್, ಈ ಸಮಸ್ಯೆಯನ್ನು ಪರಿಹರಿಸಲು ಶಿಂಧೆ ಅವರನ್ನು ಒತ್ತಾಯಿಸಿದರು. ಮೂಲಗಳ ಪ್ರಕಾರ, ಫಡ್ನವೀಸ್ ಅವರ ಈ ನಡೆ ಬಲಿಷ್ಠ ಶಿವಸೇನೆ ನಾಯಕನಿಗೆ ಮುಂದುವರಿಯುವ ಸಂಕೇತವೆಂದು ಪರಿಗಣಿಸಲಾಗಿದೆ. ಶಿವಸೇನೆಗಾಗಿ ಶಿಂಧೆ ಹಣದಿಂದ ಅಧಿಕಾರದವರೆಗೆ ಎಲ್ಲವನ್ನೂ ಬಳಸುತ್ತಾರೆ ಎಂಬುದು ಫಡ್ನವೀಸ್‌ಗೆ ತಿಳಿದಿದೆ. ಪಕ್ಷದ ಹಲವಾರು ಶಾಸಕರು ಶಿಂಧೆ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯಸಭೆ ಮತ್ತು ಎಂಎಲ್ ಸಿ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಶಿವಸೇನೆ ಬಿಕ್ಕಟ್ಟು

ಮಹಾರಾಷ್ಟ್ರದ ರಾಜ್ಯಸಭಾ ಮತ್ತು ಎಂಎಲ್‌ಸಿ ಚುನಾವಣೆಗಳಲ್ಲಿ ಬಿಜೆಪಿಯ ಗೆಲುವನ್ನು ಫಡ್ನವೀಸ್ ಶಿವಸೇನೆಯಲ್ಲಿನ ಬಿರುಕು ವಿಸ್ತರಿಸಲು ಬಳಸಿಕೊಂಡರು ಎಂದು ನಂಬಲಾಗಿದೆ. ಜೂನ್ 3 ರಂದು, ಮಹಾವಿಕಾಸ್ ಅಘಾಡಿ (MVA) ನಿಯೋಗವು ಫಡ್ನವೀಸ್ ಅವರನ್ನು ಭೇಟಿ ಮಾಡಿತು. ಇದರಲ್ಲಿ ಎನ್‌ಸಿಪಿ ನಾಯಕ ಛಗನ್ ಭುಜಬಲ್ ಮತ್ತು ಶಿವಸೇನೆ ನಾಯಕ ಅನಿಲ್ ದೇಸಾಯಿ ಇದ್ದರು. ಫಡ್ನವೀಸ್ ಅವರ ಮೂರನೇ ರಾಜ್ಯಸಭಾ ಅಭ್ಯರ್ಥಿಯನ್ನು ಪದಚ್ಯುತಗೊಳಿಸುವಂತೆ ಅವರು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಯಾಗಿ ಎಂವಿಎ ಎಂಎಲ್‌ಸಿ ಚುನಾವಣೆಯಲ್ಲಿ ಐದನೇ ಸ್ಥಾನವನ್ನು ನೀಡಿತ್ತು. ಆದರೆ ಫಡ್ನವೀಸ್ ತನ್ನ ಬಳಿ ನಂಬರ್ ಇಲ್ಲ ಎಂದು ತಿಳಿದಿದ್ದರಿಂದ ಅದನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ವಾಸ್ತವವಾಗಿ, MVA ಯೊಳಗೆ ಸಾಕಷ್ಟು ಪ್ರಕ್ಷುಬ್ಧತೆ ನಡೆಯುತ್ತಿದೆ ಎಂದು ಫಡ್ನವೂಸ್ ತಿಳಿದಿದ್ದರು. ಹಲವಾರು ಶಿವಸೇನೆ ಮತ್ತು ಕಾಂಗ್ರೆಸ್ ಶಾಸಕರು ಸೇರಿದಂತೆ ಹಲವಾರು ಸ್ವತಂತ್ರ ಶಾಸಕರು ಪ್ರಸ್ತುತ MVA ಸರ್ಕಾರದ ವಿರುದ್ಧ ಕೋಪಗೊಂಡಿದ್ದರು. ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಫಡ್ನವೀಸ್ ತಮ್ಮ ಗೆಲುವು ಎಂವಿಎಯಲ್ಲಿನ ಅಸಮಾಧಾನದ ಮೇಲೆ ನಿಂತಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು.

ಶಿವಸೇನೆಯಲ್ಲಿ ಬಂಡಾಯದ ಹೈಡ್ರಾಮಾ

ಶಿವಸೇನೆಯಲ್ಲಿ ಏಕಾಏಕಿ ಬಂಡಾಯ ಎದ್ದಿದೆ ಎಂದಲ್ಲ. ಈಗಿನ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಕಳೆದ ಒಂದು ವರ್ಷದಿಂದ ಶಿವಸೇನೆಯ ಹಲವು ಮುಖಂಡರು ಸಾರ್ವಜನಿಕವಾಗಿ ಹೇಳಿದ್ದಾರೆ. ಶಿವಸೇನೆ ಮಾತ್ರವಲ್ಲದೆ ಕಾಂಗ್ರೆಸ್ ನಲ್ಲೂ ಭಾರೀ ಅಸಮಾಧಾನ ವ್ಯಕ್ತವಾಗಿತ್ತು. ಎಂಎಲ್‌ಸಿ ಚುನಾವಣೆ ವೇಳೆ ಹಲವು ಕಾಂಗ್ರೆಸ್‌ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಪಕ್ಷದ ನಾಯಕರಿಗೆ ತಿಳಿಸಿದ್ದಾರೆ. ಇದರಿಂದಲೇ ಬಿಜೆಪಿ ಗೆಲುವು ಸಾಧಿಸಿದೆ ಎನ್ನಲಾಗಿತ್ತು.

'ಧರ್ಮವೀರ' ಚಿತ್ರದ ಬಗ್ಗೆ ಉದ್ಧವ್ ಪ್ರತಿಕ್ರಿಯೆ

ಇತ್ತೀಚೆಗೆ ದಿವಂಗತ ಶಿವಸೇನೆ ನಾಯಕ ಆನಂದ್ ದಿಘೆ ಅವರ ಜೀವನಾಧಾರಿತ ‘ಧರ್ಮವೀರ’ ಚಿತ್ರ ಪ್ರದರ್ಶನ ನಡೆಯಿತು. ಈ ಚಿತ್ರದಲ್ಲಿ ಬಂಡಾಯ ನಾಯಕ ಏಕನಾಥ್ ಶಿಂಧೆ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ನೋಡಲು ಬಂದಿದ್ದ ಸಿಎಂ ಉದ್ಧವ್ ಠಾಕ್ರೆ ಆದರೆ ಚಿತ್ರ ಮುಗಿಯುವ ಮುನ್ನವೇ ಸಭಾಂಗಣದಿಂದ ನಿರ್ಗಮಿಸಿದರು. ಈ ಚಿತ್ರದ ಕೊನೆಯಲ್ಲಿ, ದಿಘೆ ಬಳಿ ರಾಜ್ ಠಾಕ್ರೆಗೆ ಈಗ ಹಿಂದುತ್ವ ನಿಮ್ಮ ಕೈಯಲ್ಲಿದೆ ಎಂದು ಹೇಳುವುದನ್ನು ತೋರಿಸಲಾಗಿದೆ ಎಂಬುವುದು ಉಲ್ಲೇಖನೀಯ.

ಶಿಂಧೆ ಜೊತೆ ಫಡ್ನವೀಸ್ ಗೆಳೆತನ ಬಿಜೆಪಿಗೆ ಲಾಭ ತಂದಿದೆ

ಶಿಂಧೆ ಮತ್ತು ಫಡ್ನವೀಸ್ ಸ್ನೇಹದ ಬೆಸುಗೆ ರಾಜ್ಯಸಭಾ ಮತ್ತು ಎಂಎಲ್‌ಸಿ ಚುನಾವಣೆಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ಲಾಭವಾಯಿತು. ರಾಜ್ಯಸಭೆಯ ಮೂರನೇ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ ಮತ್ತು ಎಂಎಲ್ಸಿಯ ಐದನೇ ಸ್ಥಾನವನ್ನು ಸಹ ವಶಪಡಿಸಿಕೊಂಡಿದೆ. ಆದರೆ ಒಂದು ಕಾಲದಲ್ಲಿ ಬಿಜೆಪಿ ಈ ಎರಡು ಸ್ಥಾನಗಳನ್ನು ಗೆಲ್ಲುವುದು ಕಷ್ಟ ಎಂದು ತೋರುತ್ತಿತ್ತು. ಚುನಾವಣೆಗೂ ಮುನ್ನ ಶಿಂಧೆ ಬೆಂಬಲಿಗರು ಈ ಚುನಾವಣೆಗೆ ಬಂಡಾಯ ನಾಯಕನ ಜೊತೆ ಯಾವುದೇ ಸಂಪರ್ಕಕ್ಕೆ ಬಂದಿಲ್ಲ ಎಂದು ಹೇಳಿದ್ದರು.

ಫಡ್ನವೀಸ್ ಅವರು ರಾಜ್ಯಸಭಾ ಚುನಾವಣೆ, ಎಂಎಲ್‌ಸಿ ಚುನಾವಣೆಯಲ್ಲಿ ಮಾತ್ರ ಆಡಿದ್ದರು

ರಾಜ್ಯಸಭಾ ಚುನಾವಣೆ ಮತ್ತು ಎಂಎಲ್‌ಸಿ ಚುನಾವಣೆಗಳಲ್ಲಿ ಮತ ಚಲಾಯಿಸುವುದರಿಂದ ಬಿಜೆಪಿಗೆ ಲಾಭವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಫಡ್ನವೀಸ್ ಅವರು ರಾಜ್ಯಸಭೆ ಮತ್ತು ಎಂಎಲ್‌ಸಿಯನ್ನು ಅವಿರೋಧವಾಗಿ ಪಡೆಯಲು ಒಪ್ಪಿಕೊಂಡಿದ್ದರೆ, ಶಾಸಕರಿಗೆ ಯಾವುದೇ ಒಂದು ಹೋಟೆಲ್‌ನಲ್ಲಿ ವಾಸ್ತವ್ಯಗೊಳಿಸುವ ಅಗತ್ಯವಿರಲಿಲ್ಲ ಅವರು ಹೇಳಿದರು. ಸಾಮಾನ್ಯ ಪರಿಸ್ಥಿತಿಯಲ್ಲಿ ಏಕನಾಥ್ ಶಿಂಧೆ ಶಿವಸೇನೆ ಶಾಸಕರನ್ನು ಭೇಟಿ ಮಾಡಿದ್ದರೆ ಜನ ಬೆಚ್ಚಿ ಬೀಳುತ್ತಿದ್ದರು. ಆದರೆ ಹೊಟೇಲ್‌ನಲ್ಲಿ ಇವರಿಬ್ಬರ ಹೊಂದಾಣಿಕೆಯನ್ನು ಜನರಿಗೆ ಅನುಮಾನದಿಂದ ನೋಡಲಾಗಲಿಲ್ಲ. ಎಂಎಲ್‌ಸಿ ಚುನಾವಣೆ ಮುಗಿದ ನಂತರವೂ ಶಿಂಧೆ ಮತ್ತು ಇತರ ಶಿವಸೇನೆ ಶಾಸಕರು ಒಟ್ಟಾಗಿ ಹೊರಬಂದಾಗಲೂ ಶಿಂಧೆ ಅವರ ಉದ್ದೇಶದ ಸುಳಿವು ಯಾರಿಗೂ ಸಿಗಲಿಲ್ಲ.

Latest Videos
Follow Us:
Download App:
  • android
  • ios