Asianet Suvarna News Asianet Suvarna News

ಕೊರೋನಾ ಏರಿಕೆ: ಗ್ರಾಪಂ ಫಲಿತಾಂಶ, ರಾಜಕೀಯ ಸಭೆ, ಜನರ ನಿರ್ಲಕ್ಷ್ಯವೇ ಕಾರಣ!

 ರಾಜ್ಯದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕೊರೋನಾ ಸೋಂಕು ಏರಿಕೆ| ಮಹಾ ಕೇಸು ಹೆಚ್ಚಳಕ್ಕೆ ಗ್ರಾಪಂ ಫಲಿತಾಂಶ, ರಾಜಕೀಯ ಸಭೆ, ಜನರ ನಿರ್ಲಕ್ಷ್ಯವೇ ಕಾರಣ!

Maharashtra COVID 19 surge due to gram panchayat polls disregard for rules pod
Author
Bangalore, First Published Mar 13, 2021, 8:28 AM IST

ಮುಂಬೈ(ಮಾ.13): ರಾಜ್ಯದಲ್ಲಿ ಆತಂಕಕಾರಿ ಪ್ರಮಾಣದಲ್ಲಿ ಕೊರೋನಾ ಸೋಂಕು ಏರಿಕೆ ಕಾಣುತ್ತಿರುವುದರ ಹಿಂದೆ ಕಳೆದ ಜನವರಿಯಲ್ಲಿ ಪ್ರಕಟವಾದ ಗ್ರಾಮ ಪಂಚಾಯತ್‌ ಚುನಾವಣೆಯ ಫಲಿತಾಂಶ, ರಾಜ್ಯದ ಹಲವೆಡೆ ನಡೆದ ರಾಜಕೀಯ ಸಭೆ ಮತ್ತು ಜನರ ನಿರ್ಲಕ್ಷ್ಯ ಪ್ರಮುಖ ಕಾರಣ ಎಂದು ತಜ್ಞರು ದೂರಿದ್ದಾರೆ.

12000 ಗ್ರಾಮಗಳನ್ನು ಒಳಗೊಂಡ ಗ್ರಾ.ಪಂ ಪಲಿತಾಂಶ ಜನವರಿ 3ನೇ ವಾರದಲ್ಲಿ ಪ್ರಕಟವಾಗಿತ್ತು. ಈ ವೇಳೆ ಸಂಭ್ರಮಾಚರಣೆ ಸೇರಿದಂತೆ ನಾನಾ ಕಾರಣಗಳಿಗಾಗಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಒಂದೆಡೆ ಸೇರಿದ್ದರು. ಇದು ಸೋಂಕು ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೋವಿಡ್‌ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆಗಾರರಾಗಿರುವ ಡಾ. ಸುಭಾಷ್‌ ಸಲುಂಕೆ ಹೇಳಿದ್ದಾರೆ.

ಇನ್ನು ಮುಂಬೈ ಮೂಲದ ರಾಜಕೀಯ ವೀಕ್ಷಕರೊಬ್ಬರ ಅನುಸಾರ ರಾಜ್ಯದ ನಾನಾ ಕಡೆ ಕಳೆದ 2 ತಿಂಗಳಲ್ಲಿ ನಡೆದ ಬೃಹತ್‌ ರಾಜಕೀಯ ಕಾರ್ಯಕ್ರಮಗಳು, ಅದರಲ್ಲಿ ಭಾಗಿಯಾದ ಜನತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ, ಮಾಸ್ಕ್‌ ಧರಿಸದೇ ಇದ್ದದ್ದು, ಫೆಬ್ರವರಿ ಅಂತ್ಯದಲ್ಲಿ ದಿಢೀರಣೆ ಹೊಸ ಕೇಸುಗಳ ಏರಿಕೆಗೆ ಕಾರಣವಾಗಿದೆ.

ಇನ್ನು ಈ ಕಾರ್ಯಕ್ರಮಗಳು ಟೀವಿಗಳಲ್ಲಿ ನೇರಪ್ರಸಾರವಾಗಿತ್ತು. ಇದು ಕೋವಿಡ್‌ ಕುರಿತು ಜನರಲ್ಲಿ ಇದ್ದ ಅಲ್ಪಸ್ವಲ್ಪ ಭೀತಿಯನ್ನೂ ದೂರ ಮಾಡಿತು. ಜನಸಾಮಾನ್ಯರೂ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿದರು. ಪರಿಣಾಮ ರಾಜ್ಯದಲ್ಲಿ ಹೊಸ ಕೇಸುಗಳ ಸಂಖ್ಯೆಯಲ್ಲಿ ಮತ್ತೆ ಗಣನೀಯ ಏರಿಕೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಹೊಸ ಸೋಂಕಿನ ಪ್ರಮಾಣ ಇಳಿಕೆ ಹಾದಿಯಲ್ಲಿ ಸಾಗಿ ಫೆಬ್ರುವರಿ ಮೊದಲ ವಾರದಲ್ಲಿ 9000 ಆಸುಪಾಸಿಗೆ ಬಂದಿದ್ದು, ಮಾಸಾಂತ್ಯದ ವೇಳೆಗೆ ಏರಿಕೆ ಕಾಣಲು ಆರಂಭವಾಗಿತ್ತು. ಇದೀಗ ಮಾಚ್‌ರ್‍ನಲ್ಲಿ ಆ ಪ್ರಮಾಣ 14000 ಗಡಿ ದಾಟಿದೆ.

Follow Us:
Download App:
  • android
  • ios