* ಇತ್ತೀಚೆಗಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ತಮ್ಮ ಮೇಲೆ ನಿಗಾ ವಹಿಸಿದ್ದಾರೆ * ಈಗ ಮಿತ್ರಪಕ್ಷ ಎನ್‌ಸಿಪಿ ವಿರುದ್ಧ ಮಹಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಕಿಡಿ* 2014ರ ವಿಧಾನಸಭೆ ಚುನಾವಣೆ ವೇಳೆ ಮೈತ್ರಿಪಕ್ಷ ಎನ್‌ಸಿಪಿಯಿಂದ ವಂಚನೆಯಾಗಿತ್ತು 

ಮುಂಬೈ(ಜು.15); ಇತ್ತೀಚೆಗಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ತಮ್ಮ ಮೇಲೆ ನಿಗಾ ವಹಿಸಿದ್ದಾರೆ ಎಂದು ಹೇಳಿಕೆ ಮೂಲಕ ಸಂಚಲನ ಮೂಡಿಸಿದ್ದ ಮಹಾ ವಿಕಾಸ್‌ ಮೈತ್ರಿ ಪಕ್ಷದ ಭಾಗವಾಗಿರುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ನಾನಾ ಪಟೋಲೆ ಅವರು ಇದೀಗ ಇನ್ನೊಂದು ಮಿತ್ರಪಕ್ಷ ಎನ್‌ಸಿಪಿ ಮೇಲೆ ಕಿಡಿಕಾರಿದ್ದರೆ.

2014ರ ವಿಧಾನಸಭೆ ಚುನಾವಣೆ ವೇಳೆ ಮೈತ್ರಿಪಕ್ಷ ಎನ್‌ಸಿಪಿಯಿಂದ ವಂಚನೆಯಾಗಿತ್ತು. ಇದನ್ನು ಗಮನದಲ್ಲಿರಿಸಿಕೊಂಡು ಮುಂದಿನ 2024ರ ಲೋಕಸಭೆ ಚುನಾವಣೆಗೆ ಹೋಗುತ್ತೇವೆ ಎಂದು ಪಟೋಲೆ ತಿಳಿಸಿದ್ದಾರೆ.

2014ರಲ್ಲಿ ಕಾಂಗ್ರೆಸ್‌ ಮೈತ್ರಿ ಬಿಟ್ಟು ಎನ್‌ಸಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಇದನ್ನು ಉದ್ದೇಶಿಸಿ ಪಟೋಲೆ ಈ ಮಾತು ಆಡಿದ್ದಾರೆ.

ಇದರಿಂದಾಗಿ ಬಿಜೆಪಿ 122 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ರಾಜ್ಯದ ಅಭಿವೃದ್ಧಿ ಹಿತಾಸಕ್ತಿಗಾಗಿ ರಾಜ್ಯದ ಆಡಳಿತ ಹಿಡಿಯಲು ಬಿಜೆಪಿಗೆ ಎನ್‌ಸಿಪಿ ಬಾಹ್ಯ ಬೆಂಬಲ ನೀಡಿತ್ತು. ಇದೇ ವಿಚಾರವನ್ನಿಟ್ಟುಕೊಂಡು ಪಟೋಲೆ ಅವರು, ಎನ್‌ಸಿಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಬುಧವಾರ ಪತ್ರಕರ್ತರ ಜತೆ ಮಾತನಾಡಿದ ಪಟೋಲೆ ಅವರು, ವಿಪಕ್ಷವಾಗಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಜವಾಬ್ದಾರಿಯನ್ನು ಪಕ್ಷ ವಹಿಸಿದೆ. ಆದರೆ ಮಹಾ ವಿಕಾಸ್‌ ಅಘಾಡಿ ಮೈತ್ರಿಯ ಭಾಗವಾಗಿರುವ ಶಿವಸೇನೆ ಅಥವಾ ಎನ್‌ಸಿಪಿ ವಿರುದ್ಧ ದಾಳಿ ನಡೆಸಲು ಅವಕಾಶವಿಲ್ಲ ಎಂಬುದನ್ನು ಒಪ್ಪಿಕೊಂಡರು.