Asianet Suvarna News Asianet Suvarna News

Breaking: ಬಾಳಾ ಠಾಕ್ರೆ ಕುಟುಂಬದ ಕೈತಪ್ಪಿದ ಶಿವಸೇನೆ, ಏಕನಾಥ್‌ ಶಿಂಧೆ ಬಣವೇ ನಿಜವಾದ ಪಕ್ಷ: ಮಹಾರಾಷ್ಟ್ರ ಸ್ಪೀಕರ್‌ ಆದೇಶ

ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಸಿಎಂ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಯೇ ನಿಜವಾದ ಪಕ್ಷ ಎಂದು ಮಹಾರಾಷ್ಟ್ರ ಸ್ಪೀಕರ್‌ ರಾಹುಲ್ ನಾರ್ವೇಕರ್  ಆದೇಶ ನೀಡಿದ್ದಾರೆ.
 

Maharashtra Assembly Speaker Rahul Narvekar says Eknath shinde Faction is the Real Shiv Sena san
Author
First Published Jan 10, 2024, 6:18 PM IST

ಮುಂಬೈ (ಜ.10): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಯೇ ನಿಜವಾದ ಶಿವಸೇನೆ ಪಕ್ಷ ಎಂದು ಮಹಾರಾಷ್ಟ್ರ ಸ್ಪೀಕರ್‌ ರಾಹುಲ್ ನಾರ್ವೇಕರ್ ಬುಧವಾರ ಆದೇಶ ನೀಡಿದ್ದಾರೆ. ಅದರೊಂದಿಗೆ ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಬಾಳಾ ಠಾಕ್ರೆ ಸ್ಥಾಪಿಸಿದ್ದ ಶಿವಸೇನೆ ಪಕ್ಷ ಇಂದು ಅಧಿಕೃತವಾಗಿ ಠಾಕ್ರೆ ಕುಟುಂಬದ ಮುಷ್ಠಿಯಿಂದ ಹೊರಬಂದಂತಾಗಿದೆ.ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನೆ ಇಬ್ಬಾಗವಾಗಿದ್ದೇ ರೋಚಕ ಕಥೆ. ಎನ್‌ಸಿಪಿ, ಕಾಂಗ್ರೆಸ್‌ ಜೊತೆ ಸೇರಿ ಮುಖ್ಯಮಂತ್ರಿಯಾಗಿದ್ದ ಉದ್ಧವ್‌ ಠಾಕ್ರೆ ಅವರನ್ನು ಬಿಟ್ಟು ಹೊರಬಂದಿದ್ದ ಏಕನಾಥ್‌ ಶಿಂಧೆ ಬಣ, ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿತ್ತು. ಇದರಲ್ಲಿ ಏಕನಾಥ್‌ ಶಿಂಧೆ ಸಿಎಂ ಆಗಿದ್ದರು. ಅದಾದ ಬಳಿಕ ಶಿವಸೇನೆ ಹೆಸರು ಹಾಗೂ ಚಿಹ್ನೆಯ ನಡುವೆ ಯುದ್ಧ ಆರಂಭವಾಗಿತ್ತು. ಪಕ್ಷ ಯಾರದು ಎನ್ನುವುದನ್ನು ನಿರ್ಧಾರ ಮಾಡಲು ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗಿತ್ತು.

'ಎರಡೂ ಪಕ್ಷಗಳು (ಶಿವಸೇನೆಯ ಎರಡು ಬಣಗಳು) ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪಕ್ಷದ ಸಂವಿಧಾನದ ಬಗ್ಗೆ ಯಾವುದೇ ಒಮ್ಮತವಿಲ್ಲ. ನಾಯಕತ್ವ ರಚನೆಯ ಬಗ್ಗೆ ಎರಡು ಪಕ್ಷಗಳು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಇಲ್ಲಿನ ಏಕೈಕ ಅಂಶವೆಂದರೆ ಅದು ಬಹುಮತ. ಯಾಕೆಂದರೆ, ಅದು ಶಾಸಕಾಂಗ ಪಕ್ಷ. ವಿವಾದದ ಮೊದಲು ಅಸ್ತಿತ್ವದಲ್ಲಿದ್ದ ನಾಯಕತ್ವ ರಚನೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಸಂಬಂಧಿತ ಪಕ್ಷದ ಸಂವಿಧಾನವನ್ನು ನಾನು ನಿರ್ಧರಿಸಬೇಕಾಗುತ್ತದೆ' ಎಂದು ಶಿವಸೇನೆ ಶಾಸಕರ ಅನರ್ಹತೆ ಪ್ರಕರಣದಲ್ಲಿ ಮಹಾರಾಷ್ಟ್ರ ಅಸೆಂಬ್ಲಿ ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದಾರೆ.

ಶಿವಸೇನೆ vs ಶಿವಸೇನೆ ತೀರ್ಪು ಇಂದು ಪ್ರಕಟ: ಏನಾಗಲಿದೆ ಮಹಾ ಸರ್ಕಾರದ ಭವಿಷ್ಯ

ಶಿವಸೇನೆಯ 2018 ರ ತಿದ್ದುಪಡಿ ಸಂವಿಧಾನವು ಭಾರತದ ಚುನಾವಣಾ ಆಯೋಗದ ದಾಖಲೆಗಳಲ್ಲಿ ಇಲ್ಲದಿರುವುದರಿಂದ ಅದನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಪಕ್ಷದ ಸಂವಿಧಾನವು ಮಾನ್ಯವಾಗಿರುವ ಯಾವುದೇ ಅಂಶವನ್ನು ನಾನು ಪರಿಶೀಲಿಸಲು ಸಾಧ್ಯವಿಲ್ಲ. ದಾಖಲೆಗಳ ಪ್ರಕಾರ, ನಾನು 1999 ರ ಶಿವಸೇನೆಯ ನಿಯಮವನ್ನೇ ಮಾನ್ಯ ಸಂವಿಧಾನವಾಗಿ ಅವಲಂಬಿಸುತ್ತಿದ್ದೇನೆ ಎಂದು ಅವರು ಹೇಳಿದರು.

ಆಯೋಧ್ಯೆ ರಾಮ ಮಂದಿರಕ್ಕೆ 11 ಕೋಟಿ ರೂಪಾಯಿ ದೇಣಿಗೆ ನೀಡಿದ ಮಹಾರಾಷ್ಟ್ರ ಸಿಎಂ ಶಿಂದೆ!

Follow Us:
Download App:
  • android
  • ios