ಮಹ​ದಾ​ಯಿ: ತಡೆ​ಯಾ​ಜ್ಞೆ ಕೋರಿ ಗೋವಾ ಸಲ್ಲಿ​ಸಿದ್ದ ಅರ್ಜಿ ವಜಾ

 ಕರ್ನಾ​ಟ​ಕಕ್ಕೆ ಮಹ​ದಾಯಿ ನದಿ ನೀರು ಬಳ​ಕೆಗೆ ಕೇಂದ್ರ ಜಲ ಆಯೋ​ಗವು ನೀಡಿದ್ದ ಅನು​ಮ​ತಿಗೆ ಮಧ್ಯಂತರ ತಡೆ ನೀಡು​ವಂತೆ ಕೋರಿ ಗೋವಾ ಮಾಡಿದ್ದ ಮನ​ವಿ​ಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮ​ವಾರ ತಿರ​ಸ್ಕ​ರಿ​ಸಿ​ದೆ. ಇದೊಂದು ಆತು​ರದ ಅರ್ಜಿ ಎಂದು ಹೇಳಿ ಗೋವಾದ ತಗಾದೆ ಅರ್ಜಿ​ಯನ್ನು ಸೋಮ​ವಾರ ಇತ್ಯ​ರ್ಥ​ಗೊ​ಳಿ​ಸಿ​ದೆ.

Mahadayi plan Petition filed by Goa seeking injunction to mahadayi plan is dismissed by supreme court akb

ನವದೆಹಲಿ:  ಕರ್ನಾ​ಟ​ಕಕ್ಕೆ ಮಹ​ದಾಯಿ ನದಿ ನೀರು ಬಳ​ಕೆಗೆ ಕೇಂದ್ರ ಜಲ ಆಯೋ​ಗವು ನೀಡಿದ್ದ ಅನು​ಮ​ತಿಗೆ ಮಧ್ಯಂತರ ತಡೆ ನೀಡು​ವಂತೆ ಕೋರಿ ಗೋವಾ ಮಾಡಿದ್ದ ಮನ​ವಿ​ಯನ್ನು ಸುಪ್ರೀಂ ಕೋರ್ಟ್ (Supreme Court) ಸೋಮ​ವಾರ ತಿರ​ಸ್ಕ​ರಿ​ಸಿ​ದೆ. ಇದೊಂದು ಆತು​ರದ ಅರ್ಜಿ ಎಂದು ಹೇಳಿ ಗೋವಾದ ತಗಾದೆ ಅರ್ಜಿ​ಯನ್ನು ಸೋಮ​ವಾರ ಇತ್ಯ​ರ್ಥ​ಗೊ​ಳಿ​ಸಿ​ದೆ. ಇದೇ ವೇಳೆ, ಮಹ​ದಾಯಿ ನದಿ ನೀರು ತಿರು​ಗಿ​ಸುವ ಮೊದಲು ಶಾಸ​ನ​ಬದ್ಧ ಸಂಸ್ಥೆ​ಗ​ಳಿಂದ ಎಲ್ಲಾ ರೀತಿಯ ಅನು​ಮತಿ ಪಡೆ​ಯು​ವುದು ಕಡ್ಡಾ​ಯ​ವೆಂಬ ತನ್ನ ಈ ಹಿಂದಿನ ಆದೇಶ ಇನ್ನೂ ಊರ್ಜಿ​ತ​ದ​ಲ್ಲಿ​ರ​ಲಿದೆ ಎಂದು ನ್ಯಾಯಾ​ಲಯ ಸ್ಪಷ್ಟ​ಪ​ಡಿ​ಸಿ​ದೆ.

ಸುಪ್ರೀಂ ಕೋರ್ಟ್‌ನ (Supreme Court) ಈ ಆದೇ​ಶ​ವನ್ನು ಗೋವಾ ಮುಖ್ಯ​ಮಂತ್ರಿ (Goa Chief Minister) ಪ್ರಮೋದ್‌ ಸಾವಂತ್‌ (Pramod Sawant) ಸ್ವಾಗ​ತಿ​ಸಿ​ದ್ದಾರೆ. ನ್ಯಾಯಾ​ಲ​ಯದ ಆದೇ​ಶವು ನದಿ ನೀರು ತಿರು​ಗಿ​ಸುವ ಮೊದಲು ಎಲ್ಲಾ ಅನು​ಮತಿ ಪಡೆ​ಯು​ವುದು ಕಡ್ಡಾಯ ಎಂಬ ನಿಲು​ವನ್ನು ಪುನ​ರು​ಚ್ಚ​ರಿ​ಸಿದೆ ಎಂದು ಹೇಳಿ​ದ್ದಾ​ರೆ. 

ಮಹದಾಯಿ ಯೋಜನೆ ಹಂತ ಹಂತವಾಗಿ ಅನುಷ್ಠಾನ: ಸಿಎಂ ಬೊಮ್ಮಾಯಿ

ಖನ್ನಾ ನೇತೃ​ತ್ವದ ಪೀಠ:

ಮಹದಾಯಿ ಯೋಜನಾ ಪ್ರದೇಶದಲ್ಲಿ ಅನುಮತಿ ಪಡೆಯದೆ ಕರ್ನಾಟಕ ಸರ್ಕಾ​ರ​ವು (Karnataka government) ಕಾಮಗಾರಿ ಶುರು ಮಾಡಿದೆ ಎಂಬ ತಗಾದೆ ತೆಗೆದು ಗೋವಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ನ್ಯಾ. ಸಂಜೀವ್‌ ಖನ್ನಾ (Sanjeev Khanna) ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ಗೋವಾ ತಕರಾರು ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಗೋವಾ ಆರೋ​ಪಕ್ಕೆ ತಕ್ಕ ಉತ್ತರ ನೀಡಿದ ಕರ್ನಾಟಕದ ವಕೀಲರು, ಈವ​ರೆಗೆ ಯಾವುದೇ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದರು. ವಾದ-ಪ್ರತಿ​ವಾದ ಆಲಿ​ಸಿದ ನ್ಯಾಯಾ​ಲ​ಯವು ನಿಮ್ಮ ಅರ್ಜಿ (ಗೋವಾ ಅರ್ಜಿ) ಆತುರದ್ದಾಗಿದೆ ಎಂದು ಹೇಳಿ ವಿಲೇವಾರಿ ಮಾಡಿತು. ಜತೆ​ಗೆ ಈ ಹಿಂದಿನ ಆದೇ​ಶ​ದಂತೆ ಕಾಮಗಾರಿಗಳು ಕೈಗೊಳ್ಳುವಾಗ ಸಂಬಂಧಪಟ್ಟ ಶಾಸನಬದ್ಧ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು ಎಂದು ಕರ್ನಾಟಕಕ್ಕೆ ಸೂಚಿಸಿತಲ್ಲದೆ, ಪ್ರಕರಣದ ವಿಚಾರಣೆಯನ್ನು ನ್ಯಾಯಾ​ಲ​ಯವು ಜುಲೈಗೆ ಮುಂದೂಡಿತು.

ಮಹದಾಯಿ ವಿವಾದ ಬಗೆಹರಿಸಿದ್ದೇವೆ: ಅಮಿತ್‌ ಶಾ

Latest Videos
Follow Us:
Download App:
  • android
  • ios