ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಭದ್ರತಾ ಪಡೆಗಳು ಇತ್ತೀಚೆಗೆ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದ ವೇಳೆ ಕಾರ್ಗಿಲ್‌ ಶೈಲಿಯ 1200 ಅಡಿ ಎತ್ತರದ ಪ್ರದೇಶದಲ್ಲಿನ ಬಂಕರ್‌ನಲ್ಲಿ ಮ್ಯಾಗಿ, ತರಕಾರಿ ಸೇರಿದಂತೆ ಇನ್ನಿತರ ಆಹಾರ ಸಾಮಗ್ರಿ ಪತ್ತೆಯಾಗಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಭದ್ರತಾ ಪಡೆಗಳು ಇತ್ತೀಚೆಗೆ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿದ್ದ ವೇಳೆ ಕಾರ್ಗಿಲ್‌ ಶೈಲಿಯ 1200 ಅಡಿ ಎತ್ತರದ ಪ್ರದೇಶದಲ್ಲಿನ ಬಂಕರ್‌ನಲ್ಲಿ ಮ್ಯಾಗಿ, ತರಕಾರಿ ಸೇರಿದಂತೆ ಇನ್ನಿತರ ಆಹಾರ ಸಾಮಗ್ರಿ ಪತ್ತೆಯಾಗಿದೆ.

ಕಿಶ್ತ್ವಾರ್‌ನಲ್ಲಿ ಭದ್ರತಾ ಪಡೆಗಳು ಉಗ್ರರು ಅಡಗಿದ್ದ ಬಂಕರ್‌ ಮೇಲೆ ದಾಳಿ

ಭಾನುವಾರ ಕಿಶ್ತ್ವಾರ್‌ನಲ್ಲಿ ಭದ್ರತಾ ಪಡೆಗಳು ಉಗ್ರರು ಅಡಗಿದ್ದ ಬಂಕರ್‌ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಭಯೋತ್ಪಾದಕರು ಗ್ರೇನೆಡ್‌ ಎಸೆದಿದ್ದು, ದುರಂತದಲ್ಲಿ 7 ಯೋಧರು ಗಾಯಗೊಂಡು ಒಬ್ಬರು ಹುತಾತ್ಮರಾಗಿದ್ದರು. ಇದೇ ಬಂಕರ್‌ನಲ್ಲಿ ಆಹಾರ ಸಾಮಗ್ರಿಗಳು ದೊರೆತಿದೆ.

ಭಯೋತ್ಪಾದಕರು 3-4 ತಿಂಗಳಿಗೆ ಬೇಕಾಗುವಷ್ಟು ಪತ್ತೆ

ಭಯೋತ್ಪಾದಕರು 3-4 ತಿಂಗಳಿಗೆ ಬೇಕಾಗುವಷ್ಟು 50 ಮ್ಯಾಗಿ ಪ್ಯಾಕೆಟ್‌, 15 ಬಗೆ ಮಸಾಲೆಗಳು, 20 ಕೇಜಿ ಬಾಸ್ಮತಿ ಅಕ್ಕಿ, ಟೊಮ್ಯಾಟೋ, ಆಲೂಗಡ್ಡೆಯಂತಹ ತರಕಾರಿಗಳು, ಗ್ಯಾಸ್‌ ಸಿಲಿಂಡರ್‌, ಕಟ್ಟಿಗೆ ಪತ್ತೆಯಾಗಿದೆ.

ಬಿರಿಯಾನಿ ಸೇವಿಸುತ್ತಿರುವುದು ಬೆಳಕಿಗೆ ಬಂದಿದೆ. ಬಿರಿಯಾನಿಗೆ ಅಕ್ಕಿ, ಮೊಟ್ಟೆ, ತುಪ್ಪು ಎಲ್ಲಿಂದ ಬಂತು? ಅವುಗಳ ಪೂರೈಕೆ ಯಾರು ಮಾಡಿರಬಹುದು? ಸ್ಥಳೀಯರು ಶಾಮೀಲಾಗಿದ್ದಾರೆಯೇ ಎನ್ನುವ ಸಂಶಯ ಹುಟ್ಟುಕೊಂಡಿದೆ. ಈ ಬಂಕರ್‌ಲ್ಲಿ ಜೈಷ್‌ ಕಮಾಂಡರ್‌ ಸೈಫುಲ್‌, ಸಹಾಯಕ ಆದಿಲ್‌ ತಂಗಿದ್ದರು ಎನ್ನಲಾಗಿದೆ.