Asianet Suvarna News Asianet Suvarna News

ಸಲಿಂಗ ಜೋಡಿಯ ಕೇಸ್ ತೀರ್ಪು : ಮನೋತಜ್ಞರ ಸಲಹೆ ಪಡೆಯಲು ಮುಂದಾದ ಜಡ್ಜ್

ಸಲಿಂಗ ಜೋಡಿಯ ಪ್ರಕರಣ ಒಂದರ ಸಂಬಂಧ ತೀರ್ಪು ನೀಡಲು ಮದ್ರಾಸ್ ಹೈ ಕೋರ್ಟ್  ನ್ಯಾಯಾಧೀಶರು ಮನೋತಜ್ಞರ ನೆರವು ಪಡೆಯಲು ಮುಂದಾಗಿದ್ದಾರೆ. ಈ ಬಗ್ಗೆ ಮನೋತಜ್ಞರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯುವುದಾಗಿ ಹೇಳಿದ್ದಾರೆ.

Madras HC judge seeks help psychologist to  understand same sex relationships snr
Author
Bengaluru, First Published Apr 30, 2021, 10:38 AM IST

ಚೆನ್ನೈ (ಏ.30): ಸಾಮಾನ್ಯವಾಗಿ ನ್ಯಾಯಾಲಯಗಳು ಉಭಯ ಫಿರಾರ‍ಯದುದಾರರ ವಾದ-ಪ್ರತಿವಾದಗಳನ್ನು ಆಲಿಸಿ ಪ್ರಕರಣದ ತೀರ್ಪುಗಳನ್ನು ನೀಡುತ್ತವೆ. ಆದರೆ ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ಸಲಿಂಗ ಪ್ರೇಮದ ಪ್ರಕರಣದ ತೀರ್ಪು ಪ್ರಕಟಣೆ ಮುನ್ನ ಮನೋತಜ್ಞರಿಂದ ಸಲಹೆ ಮತ್ತು ಸೂಚನೆಗಳನ್ನು ಪಡೆಯುವುದಾಗಿ ಹೇಳಿದ್ದಾರೆ.

ಮದ್ರಾಸ್‌ ಹೈಕೋರ್ಟ್‌ನ ನ್ಯಾಯಾಧೀಶ ಎನ್‌. ಆನಂದ್‌ ವೆಂಕಟೇಶ್‌ ಅವರೇ ಹೀಗೆ ಮನೋ ವೈದ್ಯರ ಸಹಾಯ ನಿರೀಕ್ಷಿಸಿದವರು.

#Feelfree: ನಾನು ಉಭಯಲಿಂಗಕಾಮಿಯಾ? ಇದು ತಪ್ಪಾ? ..

ಈ ಪ್ರಕರಣವು ಸೂಕ್ಷ್ಮವಾಗಿದ್ದು, ಇದನ್ನು ಸಲಿಂಗಪ್ರೇಮವನ್ನು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಅಲ್ಲದೆ ಈ ಪ್ರಕರಣದ ತೀರ್ಪು ನನ್ನ ಹೃದಯದಿಂದ ಬರಬೇಕೇ ಹೊರತು ತಲೆಯಿಂದಲ್ಲ ಎಂದು ನ್ಯಾಯಾಧೀಶ ಆನಂದ್‌ ವೆಂಕಟೇಶ್‌ ಹೇಳಿದ್ದಾರೆ.

ಲಿವ್ ಇನ್‌ನಲ್ಲಿದ್ದ ಸಹೋದರಿಯರು ಮದುವೆಯಾದ್ರು.. ಒಟ್ಟಿಗೆ ಬಾಳ್ತೆವೆ! ..

ಮದುರೈ ಮೂಲದ ಸಲಿಂಗಿ ಜೋಡಿಯೊಂದು ತಮ್ಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕುಟುಂಬಸ್ಥರು ಬೆದರಿಕೆಯೊಡ್ಡುತ್ತಿದ್ದಾರೆ. ತಮಗೆ ಮಧ್ಯಂತರ ರಕ್ಷಣೆ ನೀಡಬೇಕು ಎಂದು ಚೆನ್ನೈಗೆ ಪರಾರಿಯಾಗಿತ್ತು.

Follow Us:
Download App:
  • android
  • ios