ಭೋಪಾಲ್(ಜ.07): ಗಂಡನಾದವನು ಪರ ಸ್ತ್ರೀ ಜೊತೆ ಸಂಬಂಧ ಇಟ್ಟುಕೊಂಡಿದ್ದು ಗೊತ್ತಾದರೆ ಯಾವ ಮಹಿಳೆ ತಾನೆ ಸುಮ್ಮನಿರುತ್ತಾಳೆ ಹೇಳಿ? ಆದರೆ, ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬಳು ಪತಿಗೆ ಪ್ರೇಯಸಿಯ ಜೊತೆ ಇರುವುದಕ್ಕೆ ಒಪ್ಪಿಕೊಳ್ಳಲು ಬರೊಬ್ಬರಿ 1.5 ಕೋಟಿ ರು.ಗೆ ಬೇಡಿಕೆ ಇಟ್ಟಘಟನೆ ನಡೆದಿದೆ.

ವಿಚಿತ್ರವೆಂದರೆ ಇವರಿಬ್ಬರೂ ವಿಚ್ಛೇದನ ಕೋರಿ ಕೋರ್ಟ್‌ಗೆ ಹೋಗಿರಲಿಲ್ಲ. ಮನೆಯಲ್ಲಿ ಪ್ರತಿನಿತ್ಯ ಈ ವಿಷಯವಾಗಿ ಗಂಡ- ಹೆಂಡತಿಯ ಮಧ್ಯೆ ಜಗಳದಿಂದ ಬೇಸತ್ತ ಅಪ್ರಾಪ್ತ ವಯಸ್ಸಿನ ಪುತ್ರಿ ದೂರು ನೀಡಿದ್ದಳು. ಬಳಿಕ ರಾಜಿ ಪಂಚಾಯ್ತಿ ನಡೆದು ಗಂಡನಿಗೆ ವಿಚ್ಛೇದನ ನೀಡಿ, ಪ್ರೇಯಸಿಯ ಜೊತೆಗೆ ಕಳುಹಿಸಿಕೊಡಲು ಪತ್ನಿ ಒಪ್ಪಿಕೊಂಡಿದ್ದಾಳೆ.

ಇದಕ್ಕೆ ಪ್ರತಿಯಾಗಿ ಪತಿ ಐಷಾರಾಮಿ ಅಪಾರ್ಟ್‌ಮೆಂಟ್‌ ಹಾಗೂ 27 ಲಕ್ಷ ರು. ನೀಡಲು ಒಪ್ಪಿಕೊಂಡಿದ್ದಾನೆ.