ಬಿಜೆಪಿ ಸೋಲಿಸಲು ಇಂಡಿ ಒಕ್ಕೂಟ ರಚನೆ ಮಾಡಿದ ವಿಪಕ್ಷಗಳು ಇದೀಗ ಕಿತ್ತಾಡಿಕೊಳ್ಳುತ್ತಿದೆ. ಪಂಚ ರಾಜ್ಯ ಚುನಾವಣೆಯಲ್ಲಿ ಮೈತ್ರಿಯ ಅಸಲಿಯತ್ತು ಬಹಿರಂಗವಾಗಿದೆ. ಈಗಾಗಲೇ ಹಲವು ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಅಖಿಲೇಶ್ ಯಾದವ್ ಮತ್ತೆ ಬಹಿರಂಗ ಹೇಳಿಕೆ ನೀಡಿ ಮೈತ್ರಿಯಿಂದ ಬಹುತೇಕ ಹೊರಬರವು ಸೂಚನೆ ನೀಡಿದ್ದಾರೆ.

ನವದೆಹಲಿ(ನ.05) ಮುಂಬರವು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಪ್ರಮುಖ ಅಜೆಂಡಾ ಇಟ್ಟುಕೊಂಡು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮೈತ್ರಿ ಮಾಡಿಕೊಂಡಿದೆ. 26ಕ್ಕೂ ಹೆಚ್ಚು ಪಕ್ಷಗಳು ಈಗಾಗಲೇ ಸಭೆಗಳನ್ನು ನಡೆಸಿ ಚುನಾವಣಾ ರಣತಂತ್ರ ರೂಪಿಸಿದೆ. ಆದರೆ ಲೋಕಸಭಾ ಚುನಾವಣೆಗೂ ಮುನ್ನ ಆಗಮಿಸಿದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಮೈತ್ರಿಯ ಅಸಲಿಯತ್ತು ಬಹಿರಂಗ ಮಾಡಿದೆ. ಈಗಾಗಲೇ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಸೀಟು ಹಂಚಿಕೆ ಕುರಿತು ಅಸಮಾಧಾನ ಹೊರಹಾಕಿದ್ದರು. ಈ ಬಾರಿ ಕಾಂಗ್ರೆಸ್ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಮೈತ್ರಿಯಲ್ಲಿ ಅತೀ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ಕಾಂಗ್ರೆಸ್ ಕುತಂತ್ರದ ಪಕ್ಷ, ನಮಗೆ ಮೋಸ ಮಾಡಿದೆ. ಯಾರೂ ನಂಬಬೇಡಿ, ಮತ ಹಾಕಬೇಡಿ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅಖಿಲೇಶ್ ಯಾದವ್, ಕಾಂಗ್ರೆಸ್ ಅತ್ಯಂತ ಕುತಂತ್ರದ ಪಕ್ಷ. ಮಧ್ಯಪ್ರದೇಶದ ಜನ ಕಾಂಗ್ರೆಸ್‌ ನಂಬಿ ಮತ ಹಾಕಬೇಡಿ. ಮೈತ್ರಿ ಹೆಸರಿನಲ್ಲಿ ಕಾಂಗ್ರೆಸ್ ನಮಗೆ ಮೋಸ ಮಾಡಿದೆ. ಇನ್ನು ಜನರಿಗೆ ಮೋಸ ಮಾಡುವುದು ಕಾಂಗ್ರೆಸ‌್‌ಗೆ ಕಷ್ಟದ ಕೆಲಸವಲ್ಲ. ಕಾಂಗ್ರೆಸ್ ಪದೆೇ ಪದೇ ಜಾತಿಗಣತಿ ಸಮೀಕ್ಷೆಗೆ ಆಗ್ರಹಿಸುತ್ತಿದೆ. ಆದರೆ ತನ್ನ ಮತಕ್ಕಾಗಿ ಜಾತಿಗಣತಿ ಮಾಡಿಸುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಇಂಡಿ ಒಕ್ಕೂಟದಲ್ಲಿ ಮುಸುಕಿನ ಗುದ್ದಾಟ, ಎಲ್ಲವೂ ಸರಿ ಇಲ್ಲ ಎಂದ ಒಮರ್ ಅಬ್ದುಲ್ಲಾ

ನಿಮಗೆ ಪಡಿತರ ಸಿಗುತ್ತಿಲ್ಲ ಎಂದರೆ ಮತ್ತೆ ಯಾಕೆ ಬಿಜೆಪಿಗೆ ಮತ ಹಾಕುತ್ತೀರಿ. ನಮಗೆ ಮತ ನೀಡಿ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಇದೀಗ ಅಖಿಲೇಶ್ ಯಾದವ್ ಸತತವಾಗಿ ಕಾಂಗ್ರೆಸ್ ವಿರುದ್ದ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳಿಂದ ಇಂಡಿ ಒಕ್ಕೂಟ ಮೈತ್ರಿಯಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ. ನಿನ್ನೆಷ್ಟೇ ಯಾರಿಗೂ ಅಸಮಾಧಾನವಿಲ್ಲ ಎಂದು ತಿರುಗೇಟು ನೀಡಿದ್ದರು.

Scroll to load tweet…

ಲೋಕಸಭೆ ಚುನಾವಣೆ ಸಮಯದಲ್ಲಿ ಉತ್ತರ ಪ್ರದೇಶದಿಂದ 65 ಸೀಟುಗಳಲ್ಲಿ ಸ್ಫರ್ಧೆ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವುದರಿಂದ ಯಾವುದೇ ಇಂಡಿಯಾ ಕೂಟದ ನಾಯಕರಿಗೂ ಅಸಮಧಾನವಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಹೇಳಿದ್ದರು. ಸಮಾಜವಾದಿ ಪಕ್ಷ ಈ ಹಿಂದೆಯೂ ಎಲ್ಲ ಮೈತ್ರಿ ಪಕ್ಷಗಳಿಗೂ ಕೊಡಬೇಕಾದ ಗೌರವಗಳನ್ನು ಕೊಟ್ಟಿದೆ. ಜೊತೆಗೆ ಯಾವುದೇ ಪಕ್ಷಗಳಿಂದಲೂ ಅಸಮಧಾನ ಹೊಂದಿಲ್ಲ ಎಂದಿದ್ದರು. 

I.N.D.I.A ಮೈತ್ರಿಕೂಟಕ್ಕೆ ಬಿಗ್‌ ಶಾಕ್! ಎಸ್‌ಪಿ ನಾಯಕ ಅಖಿಲೇಶ್ ಯಾದವ್‌ ಗುಡ್‌ಬೈ?