ಭೋಪಾಲ್(ಜು.21): ಮಧ್ಯಪ್ರದೇಶದ ಗವರ್ನರ್ ಜುಲೈ 21ರ ಮಂಗಳವಾರ ನಿಧನರಾಗಿದ್ದಾರೆ. ಈ ಮಾಹಿತಿಯನ್ನು ಟಂಡನ್‌ರವರ ಮಗ ಆಶುತೋಶ್ ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ. 

ಜ್ವರ ಹಾಗೂ ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷ ಪ್ರಾಯದ ಟಂಡನ್‌ರನ್ನು ಜೂನ್ 13ರಂದು ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 

ಆಸ್ಪತ್ರೆಗೆ ದಾಖಲಾದ ಎರಡು ದಿನಗಳ ಬಳಿಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಮೆಡಂತಾ ಆಸ್ಪತ್ರೆ ನಿರ್ದೇಶಕ ಪ್ರೊಫೆಸರ್ ರಾಕೇಶ್ ಕಪೂರ್ ಟಂಡನ್‌ರವರಿಗೆ ಲಿವರ್‌ ಶಸ್ತ್ರಚಿಕಿತ್ಸೆ ನಡೆದಿದ್ದು, ಇದಾಧ ಬಳಿಕ ಅವರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಅವರನ್ನು ವೆಂಟಿಲೇಟರ್‌ನಲ್ಲಿರಿಸಲಾಗಿದೆ ಎಂದಿದ್ದರು. 

ಟಂಡನ್‌ರವರ ಅನಾರೋಗ್ಯ ಹಿನ್ನೆಲೆ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್‌ರಿಗೆ ಮಧ್ಯಪ್ರದೇಶದ ಜವವಾಬ್ದಾರಿಯನ್ನು ಹೆಚ್ಚುವರಿಯಾಗಿ ವಹಿಸಲಾಗಿತ್ತು.