Asianet Suvarna News Asianet Suvarna News

ಭೋಪಾಲ್‌: ಪ್ರಮುಖ ಕಡತಗಳಿದ್ದ ಸರ್ಕಾರಿ ಕಟ್ಟಡಕ್ಕೆ ಬೆಂಕಿ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಿದ್ದ 'ಸಾತ್ಪುರ ಭವನ' ಕಟ್ಟಡದ 3ನೇ ಮಹಡಿಯಲ್ಲಿ ಸೋಮವಾರ ಸಂಜೆ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಸುದೈವವಶಾತ್‌ ಸಿಬ್ಬಂದಿಗಳೆಲ್ಲ ಮನೆಗೆ ತೆರಳಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ.

Madhya Pradesh Government building which containing important files caught fire in Bhopal akb
Author
First Published Jun 13, 2023, 7:38 AM IST

ಭೋಪಾಲ್‌: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳಿದ್ದ 'ಸಾತ್ಪುರ ಭವನ' ಕಟ್ಟಡದ 3ನೇ ಮಹಡಿಯಲ್ಲಿ ಸೋಮವಾರ ಸಂಜೆ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಸುದೈವವಶಾತ್‌ ಸಿಬ್ಬಂದಿಗಳೆಲ್ಲ ಮನೆಗೆ ತೆರಳಿದ್ದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬೆಂಕಿ ಹೊತ್ತಿ ಉರಿದ ಮಹಡಿಯಲ್ಲಿ ಸರ್ಕಾರದ ಪ್ರಮುಖ ಕಡತಗಳಿದ್ದವು ಎನ್ನಲಾಗಿದೆ. ಕಟ್ಟಡದಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳಿಗೆ ಸಂಬಂಧಿಸಿದ ದಾಖಲೆಗಳಿದ್ದವು. ಈ ಸಾಕ್ಷಿಗಳನ್ನು ನಾಶ ಮಾಡುವ ಉದ್ದೇಶದಿಂದಲೇ ಕಟ್ಟಡಕ್ಕೆ ಉದ್ದೇಶಪೂರ್ವಕವಾಗಿ ಸರ್ಕಾರ ಬೆಂಕಿ ಹಚ್ಚಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಕಿಡಿ ಕಾರಿದೆ.

ಬೆಂಕಿ ನಂದಿಸಲು 22 ಅಗ್ನಿಶಾಮಕ ದಳಗಳು ಮತ್ತು 30-40 ಟ್ಯಾಂಕರ್‌ ಕರೆತರಲಾಗಿದ್ದು ಇವು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ಇದಕ್ಕಾಗಿ ಇಂಡಿಯಾ ಆಯಿಲ್‌ ಕಾರ್ಪೋರೇಷನ್‌, ಬಿಪಿಸಿಎಲ್‌ ಸೇರಿದಂತೆ ಅನೇಕ ಅಗ್ನಿಶಾಮಕ ಟೆಂಡರ್‌ಗಳನ್ನು ಕರೆಸಲಾಗಿತ್ತು. ಇನ್ನು ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌  (Amith sha), ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath singh) ಅವರೊಂದಿಗೆ ಘಟನೆ ಬಗ್ಗೆ ಮಾತುಕತೆ ನಡೆಸಿ ಎಎನ್‌-32 ವಿಮಾನ, ಮತ್ತು ಎಂ1-15 ಹೆಲಿಕಾಪ್ಟರ್‌ಗಳನ್ನು ಸಹಾಯಕ್ಕಾಗಿ ಕೋರಿದ್ದಾರೆ. ಇವು ರಾತ್ರಿ ಭೋಪಾಲ್‌ ತಲುಪಿ ಕಟ್ಟಡದ ಮೇಲಿನಿಂದ ನೀರು ಸುರಿಯುವ ಮೂಲಕ ಬೆಂಕಿ ನಂದಿಸುವಲ್ಲಿ ಸಹಾಯ ಮಾಡಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಮತ್ತೆ ರೈಲಲ್ಲಿ ಬೆಂಕಿ: ಸಿಸಿಟಿವಿಯಲ್ಲಿ ಕ್ಯಾನ್ ಹಿಡಿದ ವ್ಯಕ್ತಿ ಪತ್ತೆ

 

 

Follow Us:
Download App:
  • android
  • ios