ದೇವಸ್ಥಾನ, ಮಂದಿರ, ಗುಡಿ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ವಲಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಸರ್ಕಾರ ಆದೇಶಿಸಿದೆ. ಇಷ್ಟೇ ಅಲ್ಲ ಶ್ರೀರಾಮ ಹಾಗೂ ಶ್ರೀಕೃಷ್ಮ ಸಂಬಂಧಪಟ್ಟ ಧಾರ್ಮಿಕ ಸ್ಥಳಗಳಲ್ಲು ಧಾರ್ಮಿಕ ಪ್ರವಾಸಿ ತಾಣವಾಗಿ ಮಾಡುವುದಾಗಿ ಘೋಷಣೆ ಮಾಡಲಾಗಿದೆ. 

ಇಂದೋರ್(ಜ.24) ಧಾರ್ಮಿಕ ಕ್ಷೇತ್ರಗಳಲ್ಲಿ ಮದ್ಯ, ಮಾಂಸ ನಿಷೇಧಿಸಬೇಕು ಅನ್ನೋದು ಹಲವು ಬಾರಿ ಚರ್ಚೆಯಾಗಿದೆ. ಕೆಲ ರಾಜ್ಯಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಇದೀಗ ರಾಮ, ಕೃಷ್ಣ, ಶಿವ ಸೇರಿದಂತೆ 17 ಧಾರ್ಮಿಕ ಸ್ಥಳಗಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲು ಮಧ್ಯ ಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಆದೇಶಿಸಿದ್ದಾರೆ. ಧಾರ್ಮಿಕ ಕ್ಷೇತ್ರಗಳ ಪಾವಿತ್ರತ್ಯತೆ,ಭಕ್ತರು, ದೇವಸ್ಥಾನಗಳ ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಮದ್ಯ ನಿಷೇಧಕ್ಕೆ ಸೂಚಿಸಲಾಗಿದೆ ಎಂದು ಮೋಹನ್ ಯಾದವ್ ಹೇಳಿದ್ದಾರೆ.

ಮಧ್ಯ ಪ್ರದೇಶದ 17 ಧಾರ್ಮಿಕ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ ಎಂದು ಮೋಹನ್ ಯಾದವ್ ಹೇಳಿದ್ದಾರೆ. ಯುವ ಸಮೂಹ ಮದ್ಯ ಸೇವನೆಯಿಂದ ಜೀವನ ಹಾಳುಮಾಡಿಕೊಳ್ಳಬಾರದು. ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆಗೆ ಯಾವುದೇ ಧಕ್ಕೆಯಾಗಬಾರದು. ಧಾರ್ಮಿಕ ಕ್ಷೇತ್ರಗಳಲ್ಲಿ ಮದ್ಯ ಮಾರಾಟದ ಅವಶ್ಯಕತೆ ಇಲ್ಲ. ದೇವಸ್ತಾನ, ಮಂದಿರ, ಮಠಗಳಿಗೆ ತೆರಳುವ ಭಕ್ತರು ಭಕ್ತಿಯಿಂದ ತೆರಳುತ್ತಾರೆ. ಹೀಗಾಗಿ ಈ ಪರಂಪರೆ, ಪಾವಿತ್ರ್ಯತೆ, ಗೌರವ ಉಳಿಸಿಕೊಳ್ಳಲು ಮದ್ಯ ಮಾರಾಟ ನಿಷೇಧಿಸಲಾಗುತ್ತದೆ ಎಂದು ಮೋಹನ್ ಯಾದವ್ ಹೇಳಿದ್ದಾರೆ.

ಎಲ್ಲರನ್ನು ಮೀರಿಸಿದ ಕರ್ನಾಟಕ, ಹೊಸ ವರ್ಷ ಸಂಭ್ರಮಾಚರಣೆಗೆ 308 ಕೋಟಿ ರೂ ಮದ್ಯ ಮಾರಾಟ

17 ಧಾರ್ಮಿಕ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇದೇ ವೇಳೆ ಆಯೋಧ್ಯೆ ಶ್ರೀರಾಮ ಸಂಚರಿಸಿದ, ತಂಗಿದ ಹಾಗೂ ಆಯೋಧ್ಯೆ ಶ್ರೀರಾಮನಿಗೆ ಸಂಬಂಧ ಪಟ್ಟ ಕ್ಷೇತ್ರಗಳು, ಶ್ರೀಕೃಷ್ಮ ಮಹಭಾರಾತದಲ್ಲಿ ಬರುವ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲೂ ಮದ್ಯ ಮಾರಾಟ ನಿಷೇಧಿಸಲಾಗುತ್ತದೆ. ಈ ಕ್ಷೇತ್ರಗಳನ್ನು ತೀರ್ಥ ಕ್ಷೇತ್ರಗಳನ್ನಾಗಿ ಹಾಗೂ ಧಾರ್ಮಿಕ ಪ್ರವಾಸಿ ತಾಣವನ್ನಾಗಿ ಮಾಡಲಾಗುತ್ತದೆ ಎಂದು ಮೋಹನ್ ಯಾದವ್ ಹೇಳಿದ್ದಾರೆ. ಮಧ್ಯ ಪ್ರದೇಶ ರಾಜ್ಯ ಪುರಾಣ ಪ್ರಸಿದ್ಧವಾಗಿದೆ. ಹಲವು ಧಾರ್ಮಿಕ ಕ್ಷೇತ್ರಗಳು ಹಾಗೂ ಸ್ಥಳಗಳು ಐತಿಹಾಸಿಕ ಮಹತ್ವ ಪಡೆದಿದೆ. ಇದರ ಜೊತೆಗೆ ಹಲವು ಕ್ಷೇತ್ರಗಳು ಸೂಕ್ತ ವ್ಯವಸ್ಥೆ ಇಲ್ಲದೆ ಭಕ್ತರಿಂದ ದೂರ ಉಳಿದಿದೆ. ಈ ಎಲ್ಲಾ ಕ್ಷೇತ್ರಗಳನ್ನು ಸರ್ಕಾರ ಅಭಿವೃದ್ಧಿಪಡಿಸಲಿದೆ ಎಂದು ಮೋಹನ್ ಯಾದವ್ ಹೇಳಿದ್ದಾರೆ.

ಮಧ್ಯ ಪ್ರದೇಶ ಸರ್ಕಾರದ ಮದ್ಯ ನಿಷೇಧ ನಿರ್ಧಾರವನ್ನು ಬಿಜೆಪಿ ನಾಯಕಿ ಉಮಾ ಭಾರತಿ ಸ್ವಾಗತಿಸಿದ್ದಾರೆ. 17 ಧಾರ್ಮಿಕ ಕ್ಷೇತ್ರಗಳಲ್ಲಿ ಮದ್ಯ ನಿಷೇಧಿಸುವ ನಿರ್ಧಾರ ಕೈಗೊಂಡಿರುವ ಮಧ್ಯ ಪ್ರದೇಶ ಸರ್ಕಾರಕ್ಕೆ ಅಭಿನಂದನೆಗಳು. ಸಂಪೂರ್ಣ ರಾಜ್ಯದಲ್ಲಿ ಮದ್ಯ ನಿಷೇಧಿಸುವುದು ಉತ್ತಮ ಎಂದು ಉಮಾ ಭಾರತಿ ಹೇಳಿದ್ದಾರೆ. ಕಳೆದ ಹಲವು ವರ್ಷಗಳಿಂದ ಉಮಾ ಭಾರತಿ ಧಾರ್ಮಿಕ ಸ್ಥಳಗಳಲ್ಲಿ ಮದ್ಯ ನಿಷೇಧಕ್ಕೆ ಹೋರಾಟ ಮಾಡಿದ್ದರೆ. ಇನ್ನು ಮಧ್ಯ ಪ್ರದೇಶದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಯಾಗಬೇಕು ಎಂದು ಆಗ್ರಹಿಸಿದ್ದರು.

ಮಧ್ಯ ಪ್ರದೇಶ ಸರ್ಕಾರದ ನಡೆಯನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ದೇವಸ್ಥಾನಗಳ ಆವರಣಗಳು, ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಲ್ಲಬೇಕು. ಇದು ಎಲ್ಲಾ ಕಡೆ ಜಾರಿಯಾಗಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಹೊಸ ವರ್ಷ ಎಣ್ಣೆ ಮತ್ತಿನಲ್ಲಿ ವಿದ್ಯುತ್ ಕಂಬ ಹತ್ತಿ ಗಡದ್ ನಿದ್ದೆ, ಈತ ಬದುಕುಳಿದಿದ್ದೆ ಪವಾಡ